ETV Bharat / sports

ಕಿವೀಸ್-ಇಂಗ್ಲೆಂಡ್‌ ಸರಣಿಯಿಂದ ಹಿಂದೆ ಸರಿದ್ರೇ ನಾವ್ಯಾಕೆ ಹೊಣೆ.. ಪಾಕ್​​ ನಮ್ಮತ್ತ ಬೊಟ್ಟು ಮಾಡೋದ್ಯಾಕೆ : BCCI

author img

By

Published : Sep 27, 2021, 8:13 PM IST

ಸುಮಾರು 18 ವರ್ಷಗಳ ನಂತರ ಪಾಕ್​ ಪ್ರವಾಸ ಕೈಗೊಂಡಿದ್ದ ನ್ಯುಜಿಲ್ಯಾಂಡ್​ ಭದ್ರತೆ ಕಾರಣ ನೀಡಿ, ಅಲ್ಲಿಂದ ವಾಪಸ್​ ಆಗಿದೆ. ಇದರ ಬೆನ್ನಲ್ಲೇ ಇಂಗ್ಲೆಂಡ್ ಕೂಡ ತಮ್ಮ ಪ್ರವಾಸ ರದ್ಧು ಮಾಡಿಕೊಂಡಿದೆ. ಇದರಿಂದ ಪಾಕ್​ಗೆ ಅಪಾರ ಪ್ರಮಾಣದ ಆರ್ಥಿಕ ನಷ್ಟವಾಗಿದೆ..

BCCI
BCCI

ನವದೆಹಲಿ : ಭದ್ರತೆ ಕಾರಣ ನೀಡಿ ನ್ಯೂಜಿಲ್ಯಾಂಡ್ ಹಾಗೂ ಇಂಗ್ಲೆಂಡ್ ತಂಡ ಪಾಕ್​​ ಸರಣಿಯಿಂದ ಹಿಂದೆ ಸರಿದಿವೆ. ಇದಕ್ಕೆ ಪಾಕಿಸ್ತಾನದ ಕೆಲ ಮಂತ್ರಿಗಳು ಹಾಗೂ ಮಾಜಿ ಆಟಗಾರರು ಭಾರತದ ವಿರುದ್ಧ ಹರಿಹಾಯ್ದಿದ್ದಾರೆ. ಇದೇ ವಿಚಾರವಾಗಿ ಇದೀಗ ಬಿಸಿಸಿಐ ಹಿರಿಯ ಅಧಿಕಾರಿ ಮಾತನಾಡಿದ್ದಾರೆ.

ನ್ಯೂಜಿಲ್ಯಾಂಡ್​,ಇಂಗ್ಲೆಂಡ್​​ ಪ್ರವಾಸ ರದ್ಧು ಮಾಡಿಕೊಳ್ಳಲು ನಾವು ಕಾರಣ ಎಂಬುದಕ್ಕೆ ಪಾಕ್​ ಬಳಿ ಯಾವುದೇ ರೀತಿಯ ಪುರಾವೆಗಳಿಲ್ಲ. ಸಣ್ಣ ವಿಚಾರದಲ್ಲೂ ಭಾರತವನ್ನ ಎಳೆದು ತರುವುದು ಪಾಕ್​ನ ಹಳೆಯ ಅಭ್ಯಾಸ ಎಂದು ಅವರು ಕಿಡಿಕಾರಿದ್ದಾರೆ.

ಇದನ್ನೂ ಓದಿರಿ: ದಿನಕ್ಕೊಂದು ರೂಲ್ಸ್.. ಇನ್ಮೇಲೆ ಅಫ್ಘಾನಿಸ್ತಾನದಲ್ಲಿ ಗಡ್ಡದ ಶೇವ್​, ಟ್ರಿಮ್​ ಮಾಡುವುದು ನಿಷಿದ್ಧ..

ಪಾಕ್​​ ಕ್ರಿಕೆಟ್​ ಬೋರ್ಡ್​ನ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ರಮೀಜ್​ ರಾಜಾಗೆ ನಾವು ಶುಭ ಹಾರೈಸಿದ್ದೇವೆ. ಈ ವೇಳೆ ನಾವು ಒಂದು ವಿಷಯ ಸ್ಪಷ್ಟಪಡಿಸಲು ಬಯಸುತ್ತೇವೆ. ನ್ಯೂಜಿಲ್ಯಾಂಡ್​​-ಇಂಗ್ಲೆಂಡ್​ ಪ್ರವಾಸ ರದ್ಧುಗೊಳಿಸಿಕೊಂಡಿರುವುದರ ಹಿಂದೆ ಬಿಸಿಸಿಐ ಕೈವಾಡವಿಲ್ಲ ಎಂದಿದ್ದಾರೆ.

ಈ ಎಲ್ಲ ವಿಷಯಗಳ ಬಗ್ಗೆ ತಲೆಕೆಡಿಸಿಕೊಳ್ಳಲು ನಮ್ಮ ಬಳಿ ಸಮಯವಿಲ್ಲ. ಪಾಕಿಸ್ತಾನದ ಕೆಲ ಮಾಜಿ ಆಟಗಾರರು ಐಪಿಎಲ್​ ದೂಷಿಸುತ್ತಿದ್ದಾರೆಂಬುದು ನನಗೆ ಗೊತ್ತಾಗುತ್ತಿಲ್ಲ? ಎಂದಿದ್ದಾರೆ.

ಸುಮಾರು 18 ವರ್ಷಗಳ ನಂತರ ಪಾಕ್​ ಪ್ರವಾಸ ಕೈಗೊಂಡಿದ್ದ ನ್ಯುಜಿಲ್ಯಾಂಡ್​ ಭದ್ರತೆ ಕಾರಣ ನೀಡಿ, ಅಲ್ಲಿಂದ ವಾಪಸ್​ ಆಗಿದೆ. ಇದರ ಬೆನ್ನಲ್ಲೇ ಇಂಗ್ಲೆಂಡ್ ಕೂಡ ತಮ್ಮ ಪ್ರವಾಸ ರದ್ಧು ಮಾಡಿಕೊಂಡಿದೆ. ಇದರಿಂದ ಪಾಕ್​ಗೆ ಅಪಾರ ಪ್ರಮಾಣದ ಆರ್ಥಿಕ ನಷ್ಟವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.