ಕರಾಚಿ : ಆಸ್ಟ್ರೇಲಿಯಾ ಬೌಲಿಂಗ್ ದಾಳಿಗೆ ತತ್ತರಿಸಿದ ಆತಿಥೇಯ ಪಾಕಿಸ್ತಾನ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 148 ರನ್ಗಳಿಗೆ ಸರ್ವಪತನಗೊಂಡು ಬರೋಬ್ಬರಿ 408 ರನ್ಗಳ ಇನ್ನಿಂಗ್ಸ್ ಮುನ್ನಡೆ ಅನುಭವಿಸಿದೆ.
2ನೇ ಟೆಸ್ಟ್ನಲ್ಲಿ ಯಶಸ್ವಿಯಾಗಿ ಎರಡು ದಿನ ಬ್ಯಾಟಿಂಗ್ ಮಾಡಿ 505 ರನ್ಗಳಿಸಿದ್ದ ಪ್ರವಾಸಿ ಆಸ್ಟ್ರೇಲಿಯಾ ತಂಡ 3ನೇ ದಿನ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 556ರನ್ಗಳಿಸಿದ್ದ ವೇಳೆ ಡಿಕ್ಲೇರ್ ಘೋಷಿಸಿತು.
ಮೊದಲ ದಿನ ಆಸ್ಟ್ರೇಲಿಯಾ ತಂಡ 3 ವಿಕೆಟ್ ಕಳೆದುಕೊಂಡು 251 ರನ್ಗಳಿಸಿತ್ತು. 2ನೇ ದಿನವೂ ಸಂಪೂರ್ಣ ಬ್ಯಾಟಿಂಗ್ ಮಾಡಿದ ಆಸೀಸ್ ತಂಡ 9 ವಿಕೆಟ್ ಕಳೆದುಕೊಂಡು 505 ರನ್ಗಳಿಸಿತ್ತು. ಇಂದು ಆ ಮೊತ್ತಕ್ಕೆ 51 ರನ್ ಸೇರಿಸಿತ್ತು. ಉಸ್ಮಾನ್ ಖವಾಜ 160, ಅಲೆಕ್ಸ್ ಕ್ಯಾರಿ 92, ಸ್ಟೀವ್ ಸ್ಮಿತ್ 72 ರನ್ಗಳಿಸಿದ್ದರು.
-
Pakistan are all out for 148 ☝️
— ICC (@ICC) March 14, 2022 " class="align-text-top noRightClick twitterSection" data="
A dominating bowling performance from Australia.
Watch #PAKvAUS live on https://t.co/CPDKNxoJ9v (in select regions) 📺#WTC23 | https://t.co/lcSa2P7Q3l pic.twitter.com/fbXjx7Vywr
">Pakistan are all out for 148 ☝️
— ICC (@ICC) March 14, 2022
A dominating bowling performance from Australia.
Watch #PAKvAUS live on https://t.co/CPDKNxoJ9v (in select regions) 📺#WTC23 | https://t.co/lcSa2P7Q3l pic.twitter.com/fbXjx7VywrPakistan are all out for 148 ☝️
— ICC (@ICC) March 14, 2022
A dominating bowling performance from Australia.
Watch #PAKvAUS live on https://t.co/CPDKNxoJ9v (in select regions) 📺#WTC23 | https://t.co/lcSa2P7Q3l pic.twitter.com/fbXjx7Vywr
ಆಸ್ಟ್ರೇಲಿಯಾದ ಬೃಹತ್ ಮೊತ್ತವನ್ನು ಹಿಂಬಾಲಿಸಿದ ಪಾಕಿಸ್ತಾನ ತಂಡ ಕೆಟ್ಟದಾಗಿ ಬ್ಯಾಟ್ ಬೀಸಿ ನಿರಂತರ ವಿಕೆಟ್ ಕಳೆದುಕೊಂಡಿತು. ಆಸೀಸ್ ಬೌಲರ್ಗಳ ಮುಂದೆ ಯಾವುದೇ ಹಂತದಲ್ಲೂ ತಿರುಗೇಟು ನೀಡುವುದಕ್ಕೆ ಸಾಧ್ಯವಾಗಲಿಲ್ಲ.
ನಾಯಕ ಬಾಬರ್ ಅಜಮ್ ಸಿಡಿಸಿದ 36 ರನ್ ತಂಡದ ಗರಿಷ್ಠ ಮೊತ್ತ ಎನಿಸಿತು. ನೌಮನ್ ಅಲಿ 20, ಇಮಾಮ್ ಉಲ್ ಹಕ್(20) ಮಾತ್ರ ತಂಡದಲ್ಲಿ 20ರ ಗಡಿ ದಾಟಿದರು.
ಅಬ್ದುಲ್ ಶಫೀಕ್ 13, ಅಜರ್ ಅಲಿ 14, ಫವಾದ್ ಆಲಮ್ 0, ರಿಜ್ವಾನ್ 6, ಫಹೀಮ್ ಆಶ್ರಫ್ 4, ಸಾಜಿದ್ ಖಾನ್ 5, ಹಸನ್ ಅಲಿ 0 ಬಂದಷ್ಟೇ ವೇಗವಾಗಿ ಪೆವಿನಿಲಿಯನ್ಗೆ ಮರಳಿದರು.
ಆಸೀಸ್ ಪರ ಮಿಚೆಲ್ ಸ್ಟಾರ್ಕ್ 29ಕ್ಕೆ3 ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿಕೊಂಡರು. ಇವರಿಗೆ ಸಾಥ್ ನೀಡಿದ ಮಿಚೆಲ್ ಸ್ವೆಪ್ಸನ್ 2, ಕ್ಯಾಮರಾನ್ ಗ್ರೀನ್, ನೇಥನ್ ಲಿಯಾನ್, ಕಮ್ಮಿನ್ಸ್ ತಲಾ ಒಂದು ವಿಕೆಟ್ ಪಡೆದರು.
ಫಾಲೋ ಆನ್ ಹೇರದ ಆಸ್ಟ್ರೇಲಿಯಾ : ಪಾಕ್ ತಂಡವನ್ನು 148ಕ್ಕೆ ನಿಯಂತ್ರಿಸುವಲ್ಲಿ ಯಶಸ್ವಿಯಾಗಿರುವ ಕಾಂಗರೂ ಪಡೆ 408ರನ್ಗಳ ಬೃಹತ್ ಮುನ್ನಡೆಯ ಹೊರತಾಗಿಯೂ ಎದುರಾಳಿಯ ಮೇಲೆ ಫಾಲೋ ಆನ್ ಹೇರದೆ ಮತ್ತೆ ಬ್ಯಾಟಿಂಗ್ ಮಾಡುವುದಕ್ಕೆ ನಿರ್ಧರಿಸಿದೆ.
ಬೇಸಿಗೆಯಾಗಿರುವುದರಿಂದ ತಮ್ಮ ಬೌಲರ್ಗಳಿಗೆ ವಿಶ್ರಾಂತಿ ನೀಡುವ ಕಾರಣದಿಂದ ಮತ್ತೆ ಬ್ಯಾಟಿಂಗ್ ಮಾಡುವ ನಿರ್ಧಾರ ತೆಗೆದುಕೊಂಡಿದೆ. ಇನ್ನು 2 ದಿನಗಳ ಆಟ ಬಾಕಿ ಉಳಿದಿರುವುದರಿಂದ ಆಸೀಸ್ ಈ ನಿರ್ಧಾರ ತೆಗೆದುಕೊಂಡಿದೆ.
ಇದನ್ನೂ ಓದಿ:ಡೇಲ್ ಸ್ಟೇನ್ ಹಿಂದಿಕ್ಕಿದ ಅಶ್ವಿನ್ ; ಟೆಸ್ಟ್ನಲ್ಲಿ ಹೆಚ್ಚು ವಿಕೆಟ್ ಪಡೆದ ವಿಶ್ವದ 7ನೇ ಬೌಲರ್