ETV Bharat / sports

ಎರಡೇ ದಿನ ಏಕದಿನ ರ್‍ಯಾಂಕಿಂಗ್​ನ ಅಗ್ರಸ್ಥಾನದಲ್ಲಿ ಉಳಿದ ಪಾಕ್​: ಕೊನೆ ಪಂದ್ಯದಲ್ಲಿ ಕಿವೀಸ್​ ಎದುರು ಸೋತ ಬಾಬರ್ ಪಡೆ - ETV Bharath Kannada news

ಮೇ 5 ರಂದು, ಪಾಕಿಸ್ತಾನ ಐಸಿಸಿ ಏಕದಿನ ಶ್ರೇಯಾಂಕದಲ್ಲಿ ಮೊದಲ ಸ್ಥಾನವನ್ನು ತಲುಪಿತ್ತು. ಆದರೆ, ಎರಡು ದಿನಗಳ ನಂತರ ಮೂರನೇ ಸ್ಥಾನಕ್ಕೆ ಕುಸಿಯಿತು.

PAKISTAN LOSES NUMBER ONE POSITION IN ICC ODI RANKINGS
ಎರಡೇ ದಿನ ಏಕದಿನ ರ್‍ಯಾಂಕಿಂಗ್​ನ ಅಗ್ರಸ್ಥಾನದಲ್ಲಿ ಉಳಿದ ಪಾಕ್​: ಕೊನೆ ಪಂದ್ಯದಲ್ಲಿ ಕಿವೀಸ್​ ಎದುರು ಸೋತ ಬಾಬರ್ ಪಡೆ
author img

By

Published : May 8, 2023, 8:33 PM IST

ನವದೆಹಲಿ: ಐಸಿಸಿ ಏಕದಿನ ಶ್ರೇಯಾಂಕದಲ್ಲಿ ಪಾಕಿಸ್ತಾನಕ್ಕೆ ಎರಡು ದಿನಗಳಿಗಿಂತ ಹೆಚ್ಚು ಕಾಲ ನಂಬರ್ ಒನ್ ಸ್ಥಾನವನ್ನು ಉಳಿಸಿಕೊಳ್ಳಲಿಲ್ಲ. ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯ ಐದನೇ ಮತ್ತು ಕೊನೆಯ ಪಂದ್ಯವನ್ನು ಕಳೆದುಕೊಂಡ ನಂತರ, ಪಾಕಿಸ್ತಾನವು ಶ್ರೇಯಾಂಕದಲ್ಲಿ ಮೂರನೇ ಸ್ಥಾನಕ್ಕೆ ಕುಸಿದಿದೆ. ಆಸ್ಟ್ರೇಲಿಯ ಮತ್ತೊಮ್ಮೆ ನಂಬರ್-1 ಕಿರೀಟವನ್ನು ಧರಿಸಿದೆ. ಮತ್ತೊಂದೆಡೆ, ಪಾಕಿಸ್ತಾನ ನಂಬರ್ ಒನ್ ಆಗುತ್ತಿದ್ದಂತೆಯೇ ಪಾಕ್ ಪ್ರಧಾನಿ ಶಹಬಾಜ್ ಷರೀಫ್ ಸಂತಸ ವ್ಯಕ್ತಪಡಿಸಿದ್ದರು. ಟ್ವೀಟ್ ಮಾಡುವ ಮೂಲಕ ಸಂಭ್ರಮಿಸಿದ್ದರು. ಆದರೆ ಎರಡೇ ದಿನಗಳಲ್ಲಿ ಅವರ ಸಂಭ್ರಮ ಕಳೆಗುಂದಿತು.

ಪ್ರಸ್ತುತ ನ್ಯೂಜಿಲೆಂಡ್​ ತಂಡ ಪಾಕಿಸ್ತಾನ ಪ್ರವಾಸದಲ್ಲಿದೆ. ಉಭಯ ತಂಡಗಳ ನಡುವೆ 5 ಏಕದಿನ ಪಂದ್ಯಗಳ ಸರಣಿ ನಡೆದಿದೆ. ಮೊದಲ 4 ಪಂದ್ಯಗಳಲ್ಲಿ ನ್ಯೂಜಿಲೆಂಡ್ ವಿರುದ್ಧ ಪಾಕಿಸ್ತಾನ ಏಕಪಕ್ಷೀಯ ಗೆಲುವು ದಾಖಲಿಸಿದೆ. ಶುಕ್ರವಾರ (ಮೇ 5) ನಡೆದ ನಾಲ್ಕನೇ ಪಂದ್ಯದಲ್ಲಿ ಪಾಕಿಸ್ತಾನವು ನ್ಯೂಜಿಲೆಂಡ್ ತಂಡವನ್ನು 102 ರನ್‌ಗಳ ಬೃಹತ್ ಅಂತರದಿಂದ ಸೋಲಿಸಿತು. ಪಾಕಿಸ್ತಾನ 50 ಓವರ್‌ಗಳಲ್ಲಿ 6 ವಿಕೆಟ್‌ಗೆ 334 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ನ್ಯೂಜಿಲೆಂಡ್ ತಂಡ 43.4 ಓವರ್‌ಗಳಲ್ಲಿ 232 ರನ್‌ಗಳಿಗೆ ಆಲೌಟ್ ಆಯಿತು. ಇದರ ಪರಿಣಾಮವಾಗಿ ಪಾಕಿಸ್ತಾನವು 4-0 ಅಂತರದಲ್ಲಿ ಸರಣಿಯನ್ನು ವಶಪಡಿಸಿಕೊಂಡಿತು.

ಇದರಿಂದಾಗಿ ಐಸಿಸಿ ರ್‍ಯಾಂಕಿಂಗ್‌ನ ಇತ್ತೀಚಿನ ನವೀಕರಣದಲ್ಲಿ, ಪಾಕಿಸ್ತಾನ ತಂಡವು 5 ನೇ ಸ್ಥಾನದಿಂದ ಜಿಗಿದು ನೇರವಾಗಿ ನಂಬರ್ ಒನ್ ಸ್ಥಾನವನ್ನು ಪಡೆದುಕೊಂಡಿತ್ತು. ಅದೇ ಸಮಯಕ್ಕೆ ಮರುದಿನವೇ (ಮೇ 6) ಪಾಕ್ ಪ್ರಧಾನಿ ಷರೀಫ್ ಟ್ವೀಟ್ ಮಾಡಿ ಪಾಕಿಸ್ತಾನ ಕ್ರಿಕೆಟ್ ತಂಡವನ್ನು ಅಭಿನಂದಿಸಿ ಸಂಭ್ರಮಿಸಿದರು.

ಇದನ್ನೂ ಓದಿ: ಪಾಕ್​ನಿಂದ ಹೊರಗೆ ಏಷ್ಯಾಕಪ್​: ಬಿಸಿಸಿಐಗೆ ಬೆಂಬಲ ಸೂಚಿಸಿದ ಲಂಕಾ, ಬಾಂಗ್ಲಾ ಕ್ರಿಕೆಟ್​ ಮಂಡಳಿ

ಆದರೆ ಪಾಕ್ ಪ್ರಧಾನಿಯ ಸಂತೋಷ ಎರಡು ದಿನಗಳ ನಂತರ ಕಳೆಗುಂದಿತು. ಭಾನುವಾರ, ಪಾಕಿಸ್ತಾನವು ನ್ಯೂಜಿಲೆಂಡ್‌ನೊಂದಿಗೆ ಸರಣಿಯ ಐದನೇ ಮತ್ತು ಕೊನೆಯ ಏಕದಿನ ಪಂದ್ಯವನ್ನು ಆಡಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ 49.3 ಓವರ್‌ಗಳಲ್ಲಿ ಎಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು 299 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಪಾಕಿಸ್ತಾನ ತಂಡ 46.1 ಓವರ್‌ಗಳಲ್ಲಿ 252 ರನ್ ಗಳಿಸಲಷ್ಟೇ ಶಕ್ತವಾಗಿತ್ತು ಮತ್ತು ಕೊನೆಯ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್ 47 ರನ್‌ಗಳಿಂದ ಜಯಗಳಿಸಿತು.

ಈ ಗೆಲುವಿನೊಂದಿಗೆ ಐಸಿಸಿ ಏಕದಿನ ರ‍್ಯಾಂಕಿಂಗ್‌ನಲ್ಲಿ ಪಾಕಿಸ್ತಾನ ನಂಬರ್ ಒನ್ ಆಗಿರುವ ಖುಷಿಯನ್ನೂ ನ್ಯೂಜಿಲೆಂಡ್ ಕಸಿದುಕೊಂಡಿದೆ. ಇದೀಗ ಪಾಕಿಸ್ತಾನ ಒಟ್ಟಾರೆ ರೇಟಿಂಗ್ 113 ರಿಂದ 112 ಕ್ಕೆ ಕುಸಿದಿದ್ದು, ಮೂರನೇ ಸ್ಥಾನವನ್ನು ಪಡೆದುಕೊಂಡಿದೆ. ಆಸ್ಟ್ರೇಲಿಯಾ ಈಗ 113 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಚಾರ್ಟ್‌ಗಳಲ್ಲಿ ಅಗ್ರ ಸ್ಥಾನವನ್ನು ಪಡೆದುಕೊಂಡಿದೆ, ಭಾರತವು ಸಹ 113 ಅಂಕದಿಂದ ಎರಡನೇ ಸ್ಥಾನದಲ್ಲಿದೆ.

ಇದನ್ನೂ ಓದಿ:ಚಾಂಪಿಯನ್ಸ್‌ ಟ್ರೋಫಿಗೆ ಬರುವುದಾಗಿ ಬರೆದುಕೊಟ್ಟರೆ ವಿಶ್ವಕಪ್​ಗೆ ಪಾಕ್​ ಭಾರತಕ್ಕೆ: ಪಿಸಿಬಿ ಚೌಕಾಸಿ

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.