ETV Bharat / sports

ನ್ಯೂಜಿಲ್ಯಾಂಡ್ ತಂಡಕ್ಕೆ ಎಲ್ಲ ರೀತಿಯ ಭದ್ರತೆ ನೀಡಿತ್ತು, ಅವರು ಈ ರೀತಿ ನಡೆದುಕೊಳ್ಳಬಾರದಿತ್ತು: ಇಂಜಮಾಮ್​ - ನ್ಯೂಜಿಲ್ಯಾಂಡ್ ಕ್ರಿಕೆಟ್ ಮಂಡಳಿ

ಪಂದ್ಯ ಆರಂಭಗೊಳ್ಳಲು ಕೇವಲ 20 ನಿಮಿಷ ಬಾಕಿ ಇರುವಾಗಲೇ ನ್ಯೂಜಿಲ್ಯಾಂಡ್ ಕ್ರಿಕೆಟ್ ಮಂಡಳಿ, ಪಾಕ್​ ವಿರುದ್ಧದ ಸರಣಿ ರದ್ದು ಮಾಡಿಕೊಳ್ಳುತ್ತಿರುವುದಾಗಿ ಘೋಷಣೆ ಮಾಡಿದ್ದು, ಇದಕ್ಕೆ ಇನ್ನಿಲ್ಲದ ಆಕ್ರೋಶ ವ್ಯಕ್ತವಾಗಿದೆ. ಇದೇ ವಿಚಾರವಾಗಿ ಪಾಕ್​​ನ ಮಾಜಿ ಕ್ಯಾಪ್ಟನ್​ ಇಂಜಮಾಮ್​​ ಮಾತನಾಡಿದ್ದಾರೆ.

Inzamam
Inzamam
author img

By

Published : Sep 18, 2021, 6:40 PM IST

ಮುಲ್ತಾನ್​(ಪಾಕಿಸ್ತಾನ): ಪ್ರವಾಸಿ ನ್ಯೂಜಿಲ್ಯಾಂಡ್ ಹಾಗೂ ಪಾಕಿಸ್ತಾನ ತಂಡಗಳ ನಡುವೆ ಮೊದಲ ಏಕದಿನ ಪಂದ್ಯ ಆರಂಭಗೊಳ್ಳಲು ಕೆಲ ನಿಮಿಷ ಬಾಕಿ ಇರುವಾಗಲೇ ಸರಣಿ ರದ್ಧು ಮಾಡುವುದಾಗಿ ಕಿವೀಸ್​ ಕ್ರಿಕೆಟ್​ ಮಂಡಳಿ ಘೋಷಣೆ ಮಾಡಿತ್ತು. ಈ ನಿರ್ಧಾರಕ್ಕೆ ಈಗಾಗಲೇ ಪಿಸಿಬಿ ಸೇರಿದಂತೆ ಅನೇಕ ಪಾಕ್​ ಕ್ರಿಕೆಟರ್ಸ್​​​ ಆಕ್ರೋಶ ವ್ಯಕ್ತಪಡಿಸಿದ್ದು, ಇದೀಗ ಪಾಕ್​ ಕ್ರಿಕೆಟ್ ಮಂಡಳಿ ಮಾಜಿ ಆಯ್ಕೆಗಾರ ಇಂಜಮಾಮ್​ ಉಲ್ ಹಕ್​​ ಕೂಡ ವಾಗ್ದಾಳಿ ನಡೆಸಿದ್ದಾರೆ.

2016ರಿಂದ 2019ರವರೆಗೆ ಪಾಕಿಸ್ತಾನ ಕ್ರಿಕೆಟ್​ನ ಮುಖ್ಯ ಆಯ್ಕೆಗಾರನಾಗಿ ಸೇವೆ ಸಲ್ಲಿಸಿರುವ ಇಂಜ್​ಮಾಮ್​ ಹಕ್​​, ಈ ಪ್ರಕರಣದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಮಧ್ಯಸ್ಥಿಕೆ ವಹಿಸುವಂತೆ ಕರೆ ನೀಡಿದ್ದಾರೆ.

ಪಾಕಿಸ್ತಾನ ಕ್ರಿಕೆಟ್ ಮಂಡಳಿ ನ್ಯೂಜಿಲ್ಯಾಂಡ್​ ಆಟಗಾರರಿಗೆ ಎಲ್ಲ ರೀತಿಯ ಭದ್ರತೆ ಒದಗಿಸಿತ್ತು. ಈ ರೀತಿಯಾಗಿ ಬೇರೆ ಯಾವುದೇ ದೇಶ ಮಾಡಲು ಸಾಧ್ಯವಿಲ್ಲ. ಅವರಿಗೆ ಬೇರೆ ಯಾವುದೇ ಸಮಸ್ಯೆಗಳಿದ್ದರೆ ಪಾಕ್​ ಕ್ರಿಕೆಟ್ ಮಂಡಳಿ ಜೊತೆ ಮಾತನಾಡಬೇಕಿತ್ತು. ಮತ್ತಷ್ಟು ಭದ್ರತೆ ಒದಗಿಸಲು ಕ್ರಮ ಕೈಗೊಳ್ಳುತ್ತಿತ್ತು. 2009ರಲ್ಲಿ ಶ್ರೀಲಂಕಾ ಕ್ರಿಕೆಟಿಗರ ಮೇಲೆ ದಾಳಿ ನಡೆದ ನಂತರ, ಇಲ್ಲಿಗೆ ಭೇಟಿ ನೀಡುತ್ತಿರುವ ಎಲ್ಲ ರಾಷ್ಟ್ರಗಳಿಗೆ ನಾವು ಹೆಚ್ಚಿನ ಭದ್ರತೆ ನೀಡುತ್ತಿದ್ದೇವೆ ಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿರಿ: ಐಪಿಎಲ್​​ 2021: ಮೈದಾನಕ್ಕಿಳಿದು ಅಭ್ಯಾಸ ಆರಂಭಿಸಿದ ಆರ್ ಅಶ್ವಿನ್​, ಪೃಥ್ವಿ ಶಾ..

ತಮ್ಮ ಅಧಿಕೃತ ಯೂಟ್ಯೂಬ್​ ಚಾನೆಲ್​ನಲ್ಲಿ ಮಾತನಾಡಿರುವ ಇಂಜಮಾಮ್​, ಈ ಪ್ರಕರಣದಲ್ಲಿ ಐಸಿಸಿ ಮಧ್ಯಸ್ಥಿಕೆ ವಹಿಸಬೇಕು. ನ್ಯೂಜಿಲ್ಯಾಂಡ್​ ತಂಡಕ್ಕೆ ಭದ್ರತೆ ಬಗ್ಗೆ ಸಮಸ್ಯೆ ಉಂಟಾಗಿದ್ದರೆ, ಪಾಕ್​ ಮುಂದೆ ಏಕೆ ಹೇಳಿಕೊಳ್ಳಲಿಲ್ಲ. ಕನಿಷ್ಠ ಐಸಿಸಿ ಮುಂದೆ ತಮ್ಮ ಮಾಹಿತಿ ಬಿಚ್ಚಿಡಲಿ ಎಂದಿದ್ದಾರೆ.

ಬರೋಬ್ಬರಿ 18 ವರ್ಷಗಳ ನಂತರ ಪಾಕಿಸ್ತಾನ ಪ್ರವಾಸ ಕೈಗೊಂಡಿದ್ದ ನ್ಯೂಜಿಲ್ಯಾಂಡ್​ ರಾವಲ್ಪಿಂಡಿ ಮೈದಾನದಲ್ಲಿ ಮೊದಲ ಏಕದಿನ ಪಂದ್ಯ ಆರಂಭಗೊಳ್ಳುವುದಕ್ಕೂ ಕೆಲ ನಿಮಿಷಗಳ ಮುಂಚಿತವಾಗಿ ಭದ್ರತಾ ಕಾರಣ ನೀಡಿ, ರದ್ದುಗೊಳಿಸಿಕೊಂಡಿತ್ತು. ಇದಕ್ಕೆ ಇನ್ನಿಲ್ಲದ ಆಕ್ರೋಶ ವ್ಯಕ್ತವಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.