ಹೈದರಾಬಾದ್: ಆಗಸ್ಟ್ 30 ರಿಂದ ಪ್ರಾರಂಭವಾಗುವ ಏಷ್ಯಾಕಪ್ 2023ಕ್ಕೆ ಬಾಂಗ್ಲಾದೇಶ ಮತ್ತು ಪಾಕಿಸ್ತಾನ ತಮ್ಮ ತಂಡವನ್ನು ಪ್ರಕಟಿಸಿದೆ. ವಿಶ್ವಕಪ್, ಏಷ್ಯಾಕಪ್ಗೆ ಶಕೀಬ್ ಅಲ್ ಹಸನ್ ಅವರನ್ನು ನಾಯಕರಾಗಿ ನೇಮಿಸಿದೆ. ಬಾಂಗ್ಲಾದ ಇಕ್ಬಾಲ್ ಅವರ ನಿವೃತ್ತಿ ಘೋಷಣೆಯ ಹಸನ್ ಅವರನ್ನು ನಂತರ ಪ್ರಕಟಿಸಿತ್ತು. ಪಾಕಿಸ್ತಾನ ಕ್ರಿಕೆಟ್ ಮಂಡಳಿ ಇತ್ತೀಚೆಗೆ ಇಂಜಮಾಮ್-ಉಲ್-ಹಕ್ ಅವರನ್ನು ಪಾಕಿಸ್ತಾನದ ಪುರುಷರ ಹಿರಿಯ ರಾಷ್ಟ್ರೀಯ ತಂಡದ ಮುಖ್ಯ ಆಯ್ಕೆಗಾರರಾಗಿ ನೇಮಕ ಮಾಡಿಕೊಂಡಿತ್ತು. ಹುದ್ದೆ ಅಲಂಕರಿಸಿದ ಉಲ್-ಹಕ್ ಎರಡೇ ದಿನದಲ್ಲಿ ಏಷ್ಯಾಕಪ್ನ ತಂಡವನ್ನು ಪ್ರಕಟಿಸಿದ್ದರು.
17 ಜನ ಸದಸ್ಯರನ್ನು ಒಳಗೊಂಡ ಬಾಂಗ್ಲಾದೇಶದ ತಂಡ ಮತ್ತೆ ನಾಯಕತ್ವಕ್ಕೆ ಮರಳಿದ ಹಸನ್ ಅಡಿಯಲ್ಲಿ ಆಡಲಿದೆ. ಸದ್ಯ ಹಸನ್ ಲಂಕಾ ಪ್ರೀಮಿಯರ್ ಲೀಗ್ನಲ್ಲಿ ಆಡುತ್ತಿದ್ದಾರೆ. ಬೆನ್ನಿನ ನೋವಿನ ಸಮಸ್ಯೆಯಿಂದ ಬಳಲುತ್ತಿರುವ ತಮೀಮ್ ಇಕ್ಬಾಲ್ ಫಿಟ್ನೆಸ್ ಕಾರಣಕ್ಕೆ ನಾಯಕತ್ವವನ್ನು ತ್ಯಜಿಸಿದರು.
ಇಕ್ಬಾಲ್ ಬದಲಿಗೆ ಆರಂಭಿಕರಾಗಿ ಮೊಹಮ್ಮದ್ ನಯಿಮ್ ಜೊತೆಗೆ ಹಸನ್ ಆಡಲಿದ್ದಾರೆ. ಎಸಿಸಿ ಎಮರ್ಜಿಂಗ್ ಏಷ್ಯಾ ಕಪ್ನಲ್ಲಿ ಹಸನ್ ಮೂರು ಅರ್ಧಶತಕ ಗಳಿಸಿ ಉತ್ತಮ ಲಯದಲ್ಲಿ ಕಂಡು ಬಂದಿದ್ದರು. ಅಲ್ಲದೇ ಕಳೆದ ವರ್ಷದ ಢಾಕಾ ಪ್ರೀಮಿಯರ್ ಲೀಗ್ ಅದ್ಭುತ ಪ್ರದರ್ಶನ ನೀಡಿದ್ದರು. ಶಮೀಮ್ ಹೊಸೈನ್, ಮಹೇದಿ ಹಸನ್ ಮತ್ತು ನಸುಮ್ ಅಹ್ಮದ್ ಮಹತ್ವದ ಸರಣಿ ವೇಳೆ ರಾಷ್ಟ್ರೀಯ ತಂಡಕ್ಕೆ ಮರಳಿದ್ದಾರೆ.
ಪಾಕಿಸ್ತಾನವೂ ಏಷ್ಯಾಕಪ್ಗೆ 17 ಜನ ಸದಸ್ಯರ ತಂಡವನ್ನು ಪ್ರಕಟಿಸಿದೆ. ಎರಡು ಕ್ರಿಕೆಟ್ ಮಂಡಳಿಗಳೂ ವಿಶ್ವಕಪ್ಗೆ ಬಹುತೇಕ ಇದೇ ತಂಡದೊಂದಿಗೆ ಮುಂದುವರೆಯುವ ಸಾಧ್ಯತೆ ಇದೆ. ಇದರಲ್ಲಿ ಎರಡು ಮೂರು ಆಟಗಾರರು ಮಾತ್ರ ಬದಲಾವಣೆ ಆಗಬಹುದು ಎಂದು ಸಂಸ್ಥೆಗಳು ಈ ಹಿಂದೆ ಹೇಳಿದ್ದವು.
ಬಾಂಗ್ಲಾದೇಶ ತಂಡ: ಶಕೀಬ್ ಅಲ್ ಹಸನ್ (ನಾಯಕ), ಲಿಟ್ಟನ್ ದಾಸ್, ತಂಝಿದ್ ಹಸನ್ ತಮೀಮ್, ನಜ್ಮುಲ್ ಹೊಸೈನ್ ಶಾಂಟೊ, ತೌಹಿದ್ ಹೃದಯೋಯ್, ಮುಶ್ಫಿಕರ್ ರಹೀಮ್, ಮೆಹಿದಿ ಹಸನ್ ಮಿರಾಜ್, ತಸ್ಕಿನ್ ಅಹ್ಮದ್, ಮುಸ್ತಫಿಜುರ್ ರಹಮಾನ್, ಹಸನ್ ಮಹಮೂದ್, ಮಹೆದಿ ಹಸನ್, ಶಮಿನ್ ಎ ಹೊಸ್ಮಿನ್, ನಸ್ಮಿನ್ ಎ. , ಶೋರಿಫುಲ್ ಇಸ್ಲಾಂ, ಎಬಾಡೋತ್ ಹೊಸೈನ್, ಮೊಹಮ್ಮದ್ ನಯಿಮ್.
ಏಷ್ಯಾಕಪ್‌ಗಾಗಿ ಪಾಕಿಸ್ತಾನ ತಂಡ: ಬಾಬರ್ ಅಜಮ್ (ನಾಯಕ), ಅಬ್ದುಲ್ಲಾ ಶಫೀಕ್, ಫಖರ್ ಜಮಾನ್, ಇಮಾಮ್-ಉಲ್-ಹಕ್, ಸಲ್ಮಾನ್ ಅಲಿ ಅಘಾ, ಇಫ್ತಿಕರ್ ಅಹ್ಮದ್, ತಯ್ಯಬ್ ತಾಹಿರ್, ಮೊಹಮ್ಮದ್ ರಿಜ್ವಾನ್, ಮೊಹಮ್ಮದ್ ಹ್ಯಾರಿಸ್, ಶಾದಾಬ್ ಖಾನ್, ಮೊಹಮ್ಮದ್ ನವಾಜ್, ಉಸಾಮಾ ಮಿರ್, ಫಹೀಮ್ ಅಶ್ರಫ್, ಹ್ಯಾರಿಸ್ ರೌಫ್, ಮೊಹಮ್ಮದ್ ವಾಸಿಂ ಜೂನಿಯರ್, ನಸೀಮ್ ಶಾ, ಶಾಹೀನ್ ಅಫ್ರಿದಿ.
ಇದನ್ನೂ ಓದಿ: Shakib Al Hasan: ಏಷ್ಯಾಕಪ್, ವಿಶ್ವಕಪ್ನಲ್ಲಿ ಬಾಂಗ್ಲಾ ತಂಡಕ್ಕೆ ಶಕೀಬ್ ಕ್ಯಾಪ್ಟನ್