ನವದೆಹಲಿ: ಭಾರತದಲ್ಲಿ ವಿಶ್ವಕಪ್ಗೆ ಇನ್ನು ಕೆಲವೇ ದಿನಗಳಿವೆ. ವಿಶ್ವಕಪ್ ವೇಳಾಪಟ್ಟಿ ಪ್ರಕಟವಾಗಿದ್ದು, ಐಸಿಸಿ ಟ್ರೋಫಿಗಾಗಿ ಹತ್ತು ತಂಡಗಳು ಸೆಣಸಲು ಸಜ್ಜಾಗಿವೆ. ಪಾಕಿಸ್ತಾನ ಭಾರತದ ಪ್ರವಾಸ ಮಾಡುತ್ತದೆಯೇ ಎಂಬ ಪ್ರಶ್ನೆ ಹಾಗೇ ಇದೆ. ಪಿಸಿಬಿ ಪಾಕ್ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದು ಇದಕ್ಕೆ ಆಡಳಿತದಿಂದ ಇನ್ನೂ ಉತ್ತರ ಬಂದಿಲ್ಲ.
-
Babar Azam knows the importance of the match against India but Pakistan also have eyes on the #CWC23 trophy 🏆
— ICC (@ICC) July 8, 2023 " class="align-text-top noRightClick twitterSection" data="
More 👉 https://t.co/5nTacQOWct pic.twitter.com/5CQ05aaFCm
">Babar Azam knows the importance of the match against India but Pakistan also have eyes on the #CWC23 trophy 🏆
— ICC (@ICC) July 8, 2023
More 👉 https://t.co/5nTacQOWct pic.twitter.com/5CQ05aaFCmBabar Azam knows the importance of the match against India but Pakistan also have eyes on the #CWC23 trophy 🏆
— ICC (@ICC) July 8, 2023
More 👉 https://t.co/5nTacQOWct pic.twitter.com/5CQ05aaFCm
ಈ ನಡುವೆ ಭಾರತದ ಪ್ರವಾಸದ ಬಗ್ಗೆ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಮ್ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ. ಭಾರತದ ವಿರುದ್ಧ ಮಾತ್ರ ನಾವು ಆಡುತ್ತಿಲ್ಲ, ಎಲ್ಲ ತಂಡದ ವಿರುದ್ಧದ ಪಂದ್ಯವನ್ನು ಸಮಾನವಾಗಿ ನೋಡುತ್ತೇವೆ. ಅಹಮದಾಬಾದ್ನ ಪಂದ್ಯದ ಮೇಲೆ ಅಭಿಮಾನಿಗಳ ನಿರೀಕ್ಷೆ ಹೆಚ್ಚಿದೆ ಎಂಬ ಅಭಿಪ್ರಾಯವನ್ನು ಹೇಳಿದ್ದಾರೆ.
ಐಸಿಸಿ ಮತ್ತು ಎಸಿಸಿ ನಡೆಸುವ ಈವೆಂಟ್ಗಳಲ್ಲಿ ಮಾತ್ರ ಮುಖಾಮುಖಿಯಾಗುವ ಭಾರತ ಪಾಕಿಸ್ತಾನ ಪಂದ್ಯಕ್ಕೆ ಹೆಚ್ಚಿನ ಅಭಿಮಾನಿಗಳು ಕಾಯುತ್ತಿರುವುದಂತೂ ಕಂಡಿತ. ಅದಲ್ಲೂ ಪಂದ್ಯ ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಆಯೋಜನೆಗೊಂಡಿದ್ದು, 1.32 ಲಕ್ಷ ಮಂದಿ ಪ್ರೇಕ್ಷಕರ ಸಾಮರ್ಥ್ಯ ಹೊಂದಿರುವ ಮೈದಾನ ತುಂಬಿ ತುಳುಕುವ ನಿರೀಕ್ಷೆ ಇದೆ.
ಪಾಕಿಸ್ತಾನ ನಾಯಕ ತಮ್ಮ ದೇಶದ ಮೈದಾನದ ರೀತಿಯೇ ಹೋಲುವ ಏಷ್ಯಾ ಖಂಡದಲ್ಲಿ ಪಂದ್ಯ ನಡೆಯುತ್ತಿರುವುದರಿಂದ ಮತ್ತು ಪಾಕ್ ತಂಡ ಸದ್ಯಕ್ಕೆ ಉತ್ತಮ ಫಾರ್ಮ್ನಲ್ಲಿರುವ ಕಾರಣ ಪ್ರಶಸ್ತಿ ಗೆಲ್ಲುವ ಬಲವಾದ ನಂಬಿಕೆ ಹೊಂದಿದ್ದಾರೆ. 1992 ರಲ್ಲಿ ಪಾಕಿಸ್ತಾನ ತಂಡ ವಿಶ್ವ ಕಪ್ನ್ನು ಗೆದ್ದು ಕೊಂಡಿತ್ತು. ಈ ಇತಿಹಾಸವನ್ನು ಮತ್ತೆ ಬರೆಯುವ ಗುರಿಯನ್ನು ಬಾಬರ್ ಹೊಂದಿದ್ದಾರೆ.
ಜಿಂಬಾಬ್ವೆಯಲ್ಲಿ ನಡೆಯುತ್ತಿರುವ ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ ಅರ್ಹತಾ ಪಂದ್ಯದಲ್ಲಿ ಶ್ರೀಲಂಕಾ ಮತ್ತು ನೆದರ್‌ಲ್ಯಾಂಡ್ ತಂಡಗಳು ವಿಶ್ವಕಪ್ ಸ್ಪರ್ಧೆಗೆ ಪ್ರವೇಶ ಪಡೆದುಕೊಂಡಿವೆ. ಪಾಕಿಸ್ತಾನದ ನಾಯಕ ಬಾಬರ್ ಅರ್ಹತಾ ಪಂದ್ಯಗಳನ್ನು ಗೆದ್ದು ಬಂದ ತಂಡಗಳನ್ನು ಕಡೆಗಣಿಸುವಂತಿಲ್ಲ ಎಂಬಂತೆ ಹೇಳಿದ್ದಾರೆ. ಶ್ರೀಲಂಕಾ ಅರ್ಹತಾ ಪಂದ್ಯದಲ್ಲಿ ಸೋಲಿಲ್ಲದೇ ಸ್ಥಾನ ಗಿಟ್ಟಿಸಿಕೊಂಡಿದೆ. ಅಲ್ಲದೇ ಅಚ್ಚರಿಯ ರೀತಿಯಲ್ಲಿ ನೆದರ್‌ಲ್ಯಾಂಡ್ ಸ್ಪರ್ಧೆಗೆ ಬಂದಿದೆ. ಬಾಬರ್ ಭಾರತ ವಿರುದ್ಧ ಪಾಕಿಸ್ತಾನದ ಪಂದ್ಯದ ಮಹತ್ವ ಅರಿತಿದ್ದು, ಭಾರತದ ವಿರುದ್ಧ ಗೆಲ್ಲಬೇಕಾದರೆ ಆರು ವಾರಗಳ ಪಂದ್ಯಾವಳಿಯಲ್ಲಿ ಸ್ಥಿರವಾಗಿ ಪ್ರದರ್ಶನ ನೀಡಬೇಕು ಎಂದಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅಜಮ್, "ನಾವು ವಿಶ್ವಕಪ್ ಅನ್ನು ಆಡಲಿದ್ದೇವೆ ಮತ್ತು ಕೇವಲ ಭಾರತದ ವಿರುದ್ಧ ಅಲ್ಲ. ಇತರ ಎಂಟು ತಂಡಗಳಿವೆ ಮತ್ತು ಭಾರತ ತಂಡದ ಜೊತೆಗ ನಾವು ಅವರನ್ನು ಸೋಲಿಸಿದರೆ ಮಾತ್ರ ನಾವು ಫೈನಲ್ ತಲುಪುತ್ತೇವೆ. ನಾವು ಕೇವಲ ಒಂದು ತಂಡದ ಮೇಲೆ ಕೇಂದ್ರೀಕರಿಸುತ್ತಿಲ್ಲ, ನಾವು ಪಂದ್ಯಾವಳಿಯಲ್ಲಿ ಇತರ ಎಲ್ಲ ತಂಡಗಳ ಮೇಲೆ ಕೇಂದ್ರೀಕರಿಸುತ್ತೇವೆ. ಅವರೆಲ್ಲರ ವಿರುದ್ಧ ಉತ್ತಮವಾಗಿ ಆಡಬೇಕು ಮತ್ತು ಅವರ ವಿರುದ್ಧ ಗೆಲ್ಲಬೇಕು ಎಂಬುದು ನಮ್ಮ ಯೋಜನೆ ಎಂದಿದ್ದಾರೆ.
"ನಾವು ಐದು ಬೇರೆ, ಬೇರೆ ಮೈದಾನಗಳಲ್ಲಿ ಭಿನ್ನ ಸನ್ನಿವೇಶಗಳಿಗೆ ಒಗ್ಗಿಕೊಂಡು ಆಡಬೇಕಿದೆ. ಅಲ್ಲಿನ ಮೈದಾನದ ಪ್ರತಿ ಪರಿಸರಕ್ಕೆ ನಮ್ಮನ್ನು ನಾವು ಸಿದ್ಧಪಡಿಸಿಕೊಳ್ಳಬೇಕಿದೆ ಅದೇ ನಮಗಿರುವ ಸವಾಲು, ಅದನ್ನೇ ಗೆಲ್ಲಬೇಕಿದೆ. ನಾನು ಆಟಗಾರ ಮತ್ತು ನಾಯಕನಾಗಿ, ಪ್ರತಿ ದೇಶದಲ್ಲಿ ರನ್ಗಳಿಸಲು ಎದುರು ನೋಡುತ್ತಿದ್ದೇನೆ, ಪಾಕಿಸ್ತಾನದ ಮೇಲೆ ಪ್ರಾಬಲ್ಯ ಸಾಧಿಸಲು ಮತ್ತು ನಾನು ಪಂದ್ಯವನ್ನು ಗೆಲ್ಲಲು ಬಯಸುತ್ತೇನೆ ಎಂದಿದ್ದಾರೆ.
ಪಾಕಿಸ್ತಾನಕ್ಕೆ ವಿಶ್ವಕಪ್ನ ಮೊದಲ ಪಂದ್ಯದಲ್ಲಿ ಶ್ರೀಲಂಕಾ ಎದುರಾಗಲಿದೆ. ಬಾಬರ್ ಈ ಪಂದ್ಯವನ್ನು ಗೆಲ್ಲುವತ್ತ ಹೆಚ್ಚು ಏಕಾಗ್ರತೆ ತೋರುತ್ತಿದ್ದಾರೆ. ಮೊದಲು ಶ್ರೀಲಂಕಾದ ಕೊಚ್ ಆಗಿದ್ದ ಮಿಕ್ಕಿ ಆರ್ಥರ್ ಪ್ರಸ್ತುತ ಪಾಕಿಸ್ತಾನದ ತಂಡಕ್ಕೆ ಮುಖ್ಯ ತರಬೇತುದಾರರಾಗಿದ್ದಾರೆ. ಹೀಗಾಗಿ ಶ್ರೀಲಂಕಾ ವಿರುದ್ಧದ ಮೊದಲ ಪಂದ್ಯಕ್ಕೆ ಮಿಕ್ಕಿ ಅವರ ಸಲಹೆಯಂತೆ ಮುಂದುವರೆಯುವುದಾಗಿ ಹೇಳಿದ್ದಾರೆ.
ಇದನ್ನೂ ಓದಿ: Sourav Ganguly: ಗಂಗೂಲಿ "ದಾದಾ"ಗೆ 51ನೇ ವಸಂತದ ಸಂಭ್ರಮ.. ಬಂಗಾಳದಿಂದ ಬಿಸಿಸಿಐ ಅಧ್ಯಕ್ಷಗಿರಿವರೆಗೆ ಸೌರವ್ ಪಯಣ..