ETV Bharat / sports

ಬಾಬರ್‌ ಅಜಂ, ಇಮಾಮ್ ಉಲ್ ಹಕ್ ಶತಕದಾಟ: ಆಸೀಸ್‌ ವಿರುದ್ಧ ಪಾಕ್​ ಅಮೋಘ ರನ್‌ ಚೇಸ್‌! - ಆಸ್ಟ್ರೇಲಿಯಾ ತಂಡವನ್ನು ಸೋಲಿಸಿದ ಪಾಕಿಸ್ತಾನ

ಆಸ್ಟ್ರೇಲಿಯಾ ವಿರುದ್ಧ ಎರಡನೇ ಏಕದಿನ ಪಂದ್ಯದಲ್ಲಿ ಬಾಬರ್‌ ಆಜಮ್ ಮತ್ತು ಇಮಾಮ್ ಉಲ್ ಹಕ್ ಭರ್ಜರಿ ಶತಕ ಸಿಡಿಸಿದ್ದು ಪಾಕ್ ತಂಡದ ಅಮೋಘ ಗೆಲುವಿಗೆ ಕಾರಣವಾಗಿದೆ. ಮೂರನೇ ಮತ್ತು ಕೊನೆಯ ಪಂದ್ಯ ನಾಳೆ ನಡೆಯಲಿದೆ.

pakistan beats australia in  second ODI
ಬಾಬರ್‌ ಅಜಂ, ಇಮಾಮ್ ಉಲ್ ಹಕ್ ಭರ್ಜರಿ ಶತಕ: ಆಸ್ಟ್ರೇಲಿಯಾ ವಿರುದ್ಧ ಪಾಕ್​ಗೆ ಅವಿಸ್ಮರಣೀಯ ಗೆಲುವು
author img

By

Published : Apr 1, 2022, 9:51 AM IST

ಲಾಹೋರ್‌(ಪಾಕಿಸ್ತಾನ): ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಪಾಕಿಸ್ತಾನ ತಂಡ ಆಸ್ಟ್ರೇಲಿಯಾ ವಿರುದ್ಧ ಅಮೋಘ ಗೆಲುವು ಸಾಧಿಸಿದೆ. ಮೂರು ಏಕದಿನ ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ಸೋಲನುಭವಿಸಿದ ಪಾಕ್ ಎರಡನೇ ಪಂದ್ಯದಲ್ಲಿ ಅಬ್ಬರಿಸಿದ್ದು, ನಾಯಕ ನಾಯಕ ಬಾಬರ್‌ ಅಜಂ ಮತ್ತು ಇಮಾಮ್ ಉಲ್ ಹಕ್ ಶತಕದಾಟವಾಡಿದರು.

ಲಾಹೋರ್​ನ ಗದಾಫಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಆಸೀಸ್‌ ತಂಡ ಬೆನ್ ಮೆಕ್​ಡರ್ಮೊಟ್ 104, ಟ್ರಾವಿಸ್ ಹೆಡ್​ 89, ಮರ್ನಸ್ ಲ್ಯಾಬುಸ್ಚಾಗ್ನೆ​ 59 ರನ್​ಗಳ ನೆರವಿನಿಂದ ಎಲ್ಲಾ ಓವರ್​ಗಳಲ್ಲಿ 8 ವಿಕೆಟ್​ ನಷ್ಟಕ್ಕೆ 348 ರನ್​ ಗಳಿಸಿತ್ತು. ಈ ಸ್ಕೋರ್‌ ಬೆನ್ನತ್ತಿದ ಪಾಕ್ ತಂಡ ಕೇವಲ 49 ಓವರ್​ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 352 ರನ್ ಗಳಿಸಿ, ರೋಚಕ ಗೆಲುವು ದಾಖಲಿಸಿತು.

ಏಕದಿನ ಕ್ರಿಕೆಟ್‌ ಸರಣಿಯ ಮೂರನೇ ಹಾಗೂ ಅಂತಿಮ ಪಂದ್ಯ ಲಾಹೋರ್‌ನ ಗದಾಫಿ ಕ್ರೀಡಾಂಗಣದಲ್ಲಿ ನಾಳೆ ನಡೆಯಲಿದೆ. ಇದಾದ ನಂತರ ಏಕೈಕ ಟಿ20 ಕ್ರಿಕೆಟ್‌ ತಂಡದಲ್ಲಿ ಎರಡೂ ತಂಡಗಳು ಸೆಣಸಲಿವೆ.

ಇದನ್ನೂ ಓದಿ:ಐಪಿಎಲ್‌ನಲ್ಲಿಂದು ಪಂಜಾಬ್​​​​-ಕೋಲ್ಕತ್ತಾ ಫೈಟ್‌: ಗೆಲುವಿನ ಉತ್ಸಾಹದಲ್ಲಿ ಮಯಾಂಕ್​​-ಶ್ರೇಯಸ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.