ಸಿಡ್ನಿ (ಮೆಲ್ಬೋರ್ನ್): ಟಿ20 ವಿಶ್ವಕಪ್ಗೆ ಸಿದ್ಧತೆ ನಡೆಸುತ್ತಿರುವ ಪಾಕಿಸ್ತಾನಕ್ಕೆ ಆಘಾತವಾಗಿದೆ. ಇದೇ ಅಕ್ಟೋಬರ್ 23 ರಂದು ಪಾಕಿಸ್ತಾನವು ಭಾರತದ ವಿರುದ್ಧ ಕಣಕ್ಕಿಳಿಯಲಿದ್ದು ಈ ಪಂದ್ಯಕ್ಕೂ ಮುನ್ನ ದೊಡ್ಡ ಪೆಟ್ಟು ಬಿದ್ದಿದೆ.
ಇಂದು (ಶುಕ್ರವಾರ) ನೆಟ್ಸ್‌ನಲ್ಲಿ ಅಭ್ಯಾಸ ಮಾಡುತ್ತಿದ್ದಾಗ ಅಗ್ರ ಕ್ರಮಾಂಕದ ಬ್ಯಾಟರ್ ಶಾನ್ ಮಸೂದ್ ತಲೆಗೆ ಬಲವಾದ ಗಾಯವಾಗಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಮೊದಲೇ ಗಾಯ ಹಾಗೂ ಇತರೆ ಫಿಟ್ನೆಸ್ ಸಮಸ್ಯೆಯಿಂದ ಬಳಲುತ್ತಿರುವ ಪಾಕ್‌ಗೆ ಈ ಘಟನೆ ತಲೆಬಿಸಿ ತಂದಿದೆ. ಇದಕ್ಕೂ ಮುನ್ನ ಇತ್ತೀಚೆಗೆ ತಂಡದ ಮತ್ತೊಬ್ಬ ಆಟಗಾರ ಗಾಯಗೊಂಡಿದ್ದರು.
-
Shami & Arshdeep VS DK & Rohit 🇮🇳 #SportsYaari #RohitSharma pic.twitter.com/lfvot3eEOl
— Sushant Mehta (@SushantNMehta) October 21, 2022 " class="align-text-top noRightClick twitterSection" data="
">Shami & Arshdeep VS DK & Rohit 🇮🇳 #SportsYaari #RohitSharma pic.twitter.com/lfvot3eEOl
— Sushant Mehta (@SushantNMehta) October 21, 2022Shami & Arshdeep VS DK & Rohit 🇮🇳 #SportsYaari #RohitSharma pic.twitter.com/lfvot3eEOl
— Sushant Mehta (@SushantNMehta) October 21, 2022
ನೆಟ್ ಪ್ರಾಕ್ಟಿಸ್ನಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ನವಾಜ್ ತಮ್ಮ ಬ್ಯಾಟ್ನಿಂದ ಬಿರುಸಾಗಿ ಹೊಡೆದಿದ್ದು ಚೆಂಡು ನೇರವಾಗಿ ಮಸೂದ್ ತಲೆಯ ಬಲಭಾಗಕ್ಕೆ ಬಿದ್ದಿದೆ. ಇದರಿಂದ ಅವರು ಸ್ಥಳದಲ್ಲೇ ಕುಸಿದು ಬಿದ್ದರು. ಸ್ವಲ್ಪ ಹೊತ್ತು ಕದಲದೇ ಇದ್ದುದನ್ನು ಕಂಡು ಅಲ್ಲಿದ್ದ ಸಹ ಆಟಗಾರರು ತಕ್ಷಣ ಅವರಿಗೆ ಪ್ರಥಮ ಚಿಕಿತ್ಸೆ ನೀಡಿದ್ದಾರೆ. ಸದ್ಯ ವೈದ್ಯರು ಸ್ಕ್ಯಾನ್ ಮಾಡಿ ಪಾಕ್ನ ಹಿರಿಯ ಅಧಿಕಾರಿಗೆ ವರದಿ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಆದರೆ, ಈ ವರದಿ ಬಹಿರಂಗವಾಗಿಲ್ಲ.
ಸದ್ಯದ ಮಾಹಿತಿ ಪ್ರಕಾರ, ಗಾಯಾಳು ಕ್ರಿಕೆಟಿಗ ಟಿ20 ವಿಶ್ವಕಪ್‌ನಲ್ಲಿ ಆಡುತ್ತಾರೋ ಇಲ್ಲವೋ ಎಂಬುದು ಗೊಂದಲದಲ್ಲಿದೆ. ಪಾಕಿಸ್ತಾನದ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳಲ್ಲಿ ಶಾನ್ ಮಸೂದ್ ಪ್ರಮುಖರು. ಹೆಚ್ಚು ಹೊತ್ತು ಮೊಣಕಾಲಿನ ಮೇಲೆಯೇ ನಿಂತು ಮಸೂದ್ ಅವರ ಆರೋಗ್ಯ ವಿಚಾರಿಸುತ್ತಿದ್ದ ನವಾಜ್ ಕೂಡ ಸಣ್ಣ ಪ್ರಮಾಣದಲ್ಲಿ ಗಾಯಗೊಳಗಾಗಿದ್ದಾರೆ ಎನ್ನಲಾಗುತ್ತಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನು ಕಂಡು ಪಾಕ್ ಅಭಿಮಾನಿಗಳು ಆತಂಕಕ್ಕೆ ಒಳಗಾಗಿದ್ದು ಮಸೂದ್ಗೆ ಏನೂ ಆಗದಿರಲಿ ಎಂದು ಪ್ರಾರ್ಥಿಸುತ್ತಿದ್ದಾರೆ.
2014ರಲ್ಲಿ ಇದೇ ರೀತಿ ತಲೆಗೆ ಬಾಲ್ ತಾಗಿದ್ದರಿಂದ ಆಸ್ಟ್ರೇಲಿಯಾದ ಬ್ಯಾಟರ್ ಫಿಲಿಪ್ ಹ್ಯೂಸ್ ಸ್ಥಳದಲ್ಲೇ ಕುಸಿದು ಬಿದ್ದಿದ್ದರು. ನಂತರದಲ್ಲಿ ಸಂಪೂರ್ಣವಾಗಿ ಪ್ರಜ್ಞೆ ಕಳೆದುಕೊಂಡಿದ್ದ ಅವರನ್ನು ಕ್ರಿಕೆಟ್ ಲೋಕದಿಂದಲೇ ಕಳೆದುಕೊಳ್ಳಬೇಕಾಯಿತು.
ಇದನ್ನೂ ಓದಿ: ಪಾಕಿಸ್ತಾನದ ಬೌಲಿಂಗ್ ಲೈನ್ - ಅಪ್ ಎದುರಿಸಲು ಸನ್ನದ್ಧ: ನೆಟ್ನಲ್ಲಿ ಬೇವರಿಳಿಸುತ್ತಿರುವ ರೋಹಿತ್ ಶರ್ಮಾ