ETV Bharat / sports

ಪಾಕ್​​ ಅಧಿಕಾರಿಗಳು ನಮ್ಮನ್ನು ಹೋಟೆಲ್​ನಲ್ಲಿ ಸುರಕ್ಷಿತವಾಗಿರಿಸಿದ್ದರು, ಅವರಿಗೆ ಧನ್ಯವಾದ: ಲಾಥಮ್​ - ಪಾಕ್​ ಸರಣಿ ರದ್ಧು

ಪಾಕಿಸ್ತಾನ ವಿರುದ್ಧದ ಕ್ರಿಕೆಟ್​ ಸರಣಿ ರದ್ಧುಗೊಳಿಸಿಕೊಂಡ ಮೇಲೆ ಅಲ್ಲಿನ ಅಧಿಕಾರಿಗಳು ನಮ್ಮನ್ನು ಸುರಕ್ಷಿತವಾಗಿ ನೋಡಿಕೊಂಡಿದ್ದಾರೆಂದು ಕಿವೀಸ್ ತಂಡದ ಕ್ಯಾಪ್ಟನ್​ ಲಾಥಮ್​ ಹೇಳಿಕೊಂಡಿದ್ದಾರೆ.

Tom Latham
Tom Latham
author img

By

Published : Sep 21, 2021, 9:01 PM IST

ದುಬೈ: ಬರೋಬ್ಬರಿ 18 ವರ್ಷಗಳ ಬಳಿಕ ಪಾಕಿಸ್ತಾನ ಪ್ರವಾಸ ಕೈಗೊಂಡಿದ್ದ ನ್ಯೂಜಿಲ್ಯಾಂಡ್​ ತಂಡ ಭದ್ರತಾ ಕಾರಣ ನೀಡಿ, ತವರಿಗೆ ವಾಪಸ್​ ಆಗಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಇದೇ ಮೊದಲ ಸಲ ಕಿವೀಸ್ ತಂಡದ ಕ್ಯಾಪ್ಟನ್​​​ ಟಾಮ್ ಲ್ಯಾಥಮ್​ ಮಾತನಾಡಿದ್ದಾರೆ.

ದುಬೈನಲ್ಲಿರುವ ಲಾಥಮ್​​ ಮಾಧ್ಯಮಗಳೊಂದಿಗೆ ಮಾತನಾಡಿದ್ದು, ಭದ್ರತಾ ಕಾರಣ ನೀಡಿ ಪ್ರವಾಸದಿಂದ ಹೊರಗುಳಿದಿರುವ ತಂಡದ ನಿರ್ಧಾರದಿಂದ ಪಾಕ್​ ಅಭಿಮಾನಿಗಳಿಗೆ ನಿರಾಶೆಯಾಗಿದೆ ಎಂಬುದನ್ನ ಒಪ್ಪಿಕೊಂಡಿದ್ದಾರೆ.

ರಾವಲ್ಪಿಂಡಿ ಪಂದ್ಯಕ್ಕಾಗಿ ನಾವು 12:30ಕ್ಕೆ ಹೋಟೆಲ್​ ಬಿಡಲು ನಿರ್ಧಾರ ಮಾಡಿದ್ದೆವು. ಆದರೆ ನನ್ನ ವಾಟ್ಸಾಪ್​ ಗ್ರೂಪ್​ನಲ್ಲಿ 12 ಗಂಟೆಗೆ ಟೀಂ ಮೀಟಿಂಗ್​ ಇದೆ ಎಂದು ಸಂದೇಶ ಬಂದಿತು. ಇದರಿಂದ ನಮ್ಮೆಲ್ಲರಿಗೂ ದಿಢೀರ್​​ ಶಾಕ್​ ಆಯಿತು. ಈ ವೇಳೆ ನಮಗೆ ವಿಷಯ ಗೊತ್ತಾಗುತ್ತಿದ್ದಂತೆ ಸರಣಿ ಕ್ಯಾನ್ಸಲ್ ಮಾಡಿಕೊಳ್ಳುತ್ತಿರುವುದಾಗಿ ತಿಳಿಸಿದರು. ಈ ಮಾಹಿತಿ ನೀಡಿದ ಬಳಿಕ ಸುಮಾರು 24 ಗಂಟೆಗಳ ಕಾಲ ಪಾಕಿಸ್ತಾನ ನಮ್ಮ ಸುರಕ್ಷತೆ ಬಗ್ಗೆ ಹೆಚ್ಚಿನ ಜಾಗ್ರತೆ ವಹಿಸಿದ್ದರು. ಹೋಟೆಲ್​ನಲ್ಲಿ ಎಲ್ಲ ರೀತಿಯ ಭದ್ರತೆ ಒದಗಿಸಿ, ನಾವು ದುಬೈಗೆ ತೆರಳಲು ವಿಮಾನವೇರುವವರೆಗೂ ಸುರಕ್ಷಿತವಾಗಿ ನೋಡಿಕೊಂಡಿದ್ದಾರೆ. ಅವರಿಗೆ ಧನ್ಯವಾದಗಳು ಎಂದಿದ್ದಾರೆ.

18 ವರ್ಷಗಳ ನಂತರ ನಾವು ಪಾಕಿಸ್ತಾನಕ್ಕೆ ಪ್ರವಾಸ ಕೈಗೊಂಡಿದ್ದಕ್ಕಾಗಿ ಅಲ್ಲಿನ ಅಧಿಕಾರಿಗಳು ಹಾಗೂ ಪಿಸಿಬಿ ನಮಗೆ ಅಭಿನಂದನೆ ಸಲ್ಲಿಸಿತು. ಆದರೆ ನ್ಯೂಜಿಲ್ಯಾಂಡ್ ಕ್ರಿಕೆಟ್ ಮಂಡಳಿ ಕ್ರಿಕೆಟರ್ಸ್​​ ಸುರಕ್ಷತೆ ದೃಷ್ಠಿಯಿಂದ ಈ ನಿರ್ಧಾರ ಕೈಗೊಂಡಿತ್ತು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಬೆದರಿಕೆ ಬಳಿಕವೂ ನಾವು ಪಾಕಿಸ್ತಾನದಲ್ಲಿ ಉಳಿಯಲು ಸಾಧ್ಯವಿರಲಿಲ್ಲ.. ನ್ಯೂಜಿಲ್ಯಾಂಡ್ ಕ್ರಿಕೆಟ್ CEO

ಸೀಮಿತ ಓವರ್​ಗಳ ಕ್ರಿಕೆಟ್​ ಪಂದ್ಯವನ್ನಾಡಲು ಪಾಕಿಸ್ತಾನಕ್ಕೆ ಪ್ರವಾಸ ಕೈಗೊಂಡಿದ್ದ ನ್ಯೂಜಿಲ್ಯಾಂಡ್​, ಮೊದಲ ಏಕದಿನ ಪಂದ್ಯ ಆರಂಭಗೊಳ್ಳಲು ಕೇವಲ 20 ನಿಮಿಷಗಳ ಕಾಲ ಬಾಕಿ ಇರುವಾಗಲೇ ಸರಣಿ ರದ್ಧು ಮಾಡಿಕೊಳ್ಳುತ್ತಿರುವುದಾಗಿ ಘೋಷಣೆ ಮಾಡಿಕೊಂಡಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.