ಕರಾಚಿ: ಆತಿಥೇಯ ಪಾಕಿಸ್ತಾನದ ವಿರುದ್ಧ ನಡೆದ ಮೂರನೇ ಟಿ-20 ಪಂದ್ಯದಲ್ಲೂ ಸೋಲು ಕಾಣುವ ಮೂಲಕ ಪ್ರವಾಸಿ ವೆಸ್ಟ್ ಇಂಡೀಸ್ ತಂಡ ವೈಟ್ವಾಶ್ ಮುಖಭಂಗಕ್ಕೊಳಗಾಗಿದೆ.
ಕರಾಚಿಯ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ವೆಸ್ಟ್ ಇಂಡೀಸ್ ನಿಗದಿತ 20 ಓವರ್ಗಳಲ್ಲಿ ಕೇವಲ 3 ವಿಕೆಟ್ನಷ್ಟಕ್ಕೆ ದಾಖಲೆಯ 207ರನ್ಗಳಿಕೆ ಮಾಡಿತು.
ತಂಡದ ಪರ ಆರಂಭಿಕರಾದ ಬ್ರಾಡಾನ್ ಕಿಂಗ್(43 ರನ್) ಹಾಗೂ ಶಾಮ್ರಾ ಬ್ರೊಕ್ಸ್(49) ಮೊದಲ ವಿಕೆಟ್ನಷ್ಟಕ್ಕೆ 66ರನ್ಗಳ ಉತ್ತಮ ಅಡಿಪಾಯ ಹಾಕಿದರು. 43ರನ್ಗಳಿಕೆ ಮಾಡಿದ್ದ ಕಿಂಗ್ ವಿಕೆಟ್ ಒಪ್ಪಿಸುತ್ತಿದ್ದಂತೆ ಕಣಕ್ಕಿಳಿದ ವಿಕೆಟ್ ಕೀಪರ್ ಕಮ್ ಕ್ಯಾಪ್ಟನ್ ಪೂರನ್ ಕೇವಲ 37 ಎಸೆತಗಳಲ್ಲಿ 6 ಸಿಕ್ಸರ್, 2 ಬೌಂಡರಿ ಸೇರಿದಂತೆ 64ರನ್ಗಳಿಕೆ ಮಾಡಿದರು. ಇದಾದ ಬಳಿಕ ಬ್ರಾವೋ ಅಜೇಯ 34ರನ್ ಹಾಗೂ ಪೂವಲ್ 6ರನ್ಗಳಿಕೆ ಮಾಡಿ ತಂಡ 207ರನ್ಗಳಿಕೆ ಮಾಡುವಂತೆ ಮಾಡಿದರು.
-
What a magnificent effort by Pakistan 👏
— ICC (@ICC) December 16, 2021 " class="align-text-top noRightClick twitterSection" data="
They chase down the target of 208 in 18.5 overs, winning the series 3-0!
📝 https://t.co/0SFIcRqfhC pic.twitter.com/Dx13KHD7YM
">What a magnificent effort by Pakistan 👏
— ICC (@ICC) December 16, 2021
They chase down the target of 208 in 18.5 overs, winning the series 3-0!
📝 https://t.co/0SFIcRqfhC pic.twitter.com/Dx13KHD7YMWhat a magnificent effort by Pakistan 👏
— ICC (@ICC) December 16, 2021
They chase down the target of 208 in 18.5 overs, winning the series 3-0!
📝 https://t.co/0SFIcRqfhC pic.twitter.com/Dx13KHD7YM
208ರನ್ಗಳ ಬೃಹತ್ ಗುರಿ ಬೆನ್ನತ್ತಿದ್ದ ಪಾಕಿಸ್ತಾನ ತಂಡ ಆರಂಭದಿಂದಲೇ ಸ್ಪೋಟಕ ಆರಂಭ ಪಡೆದುಕೊಂಡಿತು. ಆರಂಭಿಕರಾಗಿ ಕಣಕ್ಕಿಳಿದ ವಿಕೆಟ್ ಕೀಪರ್ ಬ್ಯಾಟರ್ ರಿಜ್ವಾನ್(87) ಹಾಗೂ ಕ್ಯಾಪ್ಟನ್ ಬಾಬರ್ ಆಜಂ(79ರನ್) ತಂಡಕ್ಕೆ 158ರನ್ಗಳ ಬದ್ರ ಬುನಾದಿ ಹಾಕಿದರು. ವೆಸ್ಟ್ ಇಂಡೀಸ್ ಬೌಲರ್ಗಳನ್ನ ಹಿಗ್ಗಾಮುಗ್ಗಾ ಥಳಿಸಿದ ಈ ಜೋಡಿ 15 ಓವರ್ಗಳಲ್ಲಿ 185ರನ್ಗಳಿಕೆ ಮಾಡಿತು.
ಸ್ಪೋಟಕ 79ರನ್ಗಳಿಕೆ ಮಾಡಿದ್ದ ಬಾಬರ್ ಕ್ಯಾಚ್ ನೀಡಿ ವಿಕೆಟ್ ಒಪ್ಪಿಸುತ್ತಿದ್ದಂತೆ ಕಣಕ್ಕಿಳಿದ ಫಖಾರ್ ಜಮಾನ್ 12ರನ್ಗಳಿಕೆ ಮಾಡಿ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದರು.ಈ ವೇಳೆ ಬ್ಯಾಟಿಂಗ್ ಮಾಡಲು ಬಂದ ಸ್ಪೋಟಕ ಬ್ಯಾಟರ್ ಆಸೀಫ್ ಅಲಿ ಕೇವಲ 7 ಎಸೆತಗಳಲ್ಲಿ 2 ಸಿಕ್ಸರ್, 2 ಬೌಂಡರಿ ಸಿಡಿಸಿ 21ರನ್ಗಳಿಕೆ ಮಾಡಿ ತಂಡವನ್ನ ಗೆಲುವಿನ ದಡ ಮುಟ್ಟಿಸಿದರು. ಈ ಮೂಲಕ ತಂಡ 18.5 ಓವರ್ಗಳಲ್ಲಿ ಕೇವಲ 3 ವಿಕೆಟ್ನಷ್ಟಕ್ಕೆ 208ರನ್ಗಳಿಕೆ ಮಾಡಿ ಜಯ ಸಾಧಿಸುವ ಜೊತೆಗೆ ಸರಣಿಯಲ್ಲಿ ಕ್ಲೀನ್ ಸ್ವೀಪ್ ಸಾಧನೆ ಮಾಡಿತು.