ಲಾಹೋರ್: ಪಾಕಿಸ್ತಾನ ಪ್ರವಾಸ ಮಾಡಿದ್ದ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮೇಲೆ ಭಯೋತ್ಪಾದಕ ದಾಳಿ ನಡೆಸುವುದಾಗಿ ಬೆದರಿಕೆ ಹಾಕಿದ್ದ ಶಂಕಿತ ಆರೋಪಿಯನ್ನು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಪೊಲೀಸರು ಬಂಧಿಸಿದ್ದಾರೆ. ಇರ್ಫಾನ್ ನಸೀರ್ ಬಂಧಿತ ಆರೋಪಿ. ಇರ್ಫಾನ್ನನ್ನು ಲಾಹೋರ್‌ನಿಂದ 200 ಕಿಲೋಮೀಟರ್ ದೂರದಲ್ಲಿರುವ ಟೋಬಾ ಟೆಕ್ ಸಿಂಗ್‌ನಿಂದ ಬಂಧಿಸಲಾಗಿದೆ.
ಲಾಹೋರ್‌ನಲ್ಲಿ ನಡೆದ ಪಂದ್ಯದ ವೇಳೆ ತಂಡದ ಮೇಲೆ ದಾಳಿ ನಡೆಸಲಾಗುವುದು ಎಂದು ಆಸ್ಟ್ರೇಲಿಯಾದ ಆಂತರಿಕ ಸಚಿವಾಲಯಕ್ಕೆ ಬೆದರಿಕೆ ಕರೆ ಮಾಡಲಾಗಿತ್ತು. ಈ ಬಗ್ಗೆ ಆಸ್ಟ್ರೇಲಿಯಾ ದೂರು ಸಲ್ಲಿಸಿದ ಬಳಿಕ ಪಾಕಿಸ್ತಾನ ಗುಪ್ತಚರ ಸಂಸ್ಥೆಗಳು ತನಿಖೆಯನ್ನು ಪ್ರಾರಂಭಿಸಿದ್ದವು. ಗುರುವಾರದಂದು ಉಗ್ರ ಬೆದರಿಕೆ ಹಾಕಿದ್ದ ವ್ಯಕ್ತಿಯನ್ನು ಹೆಡೆಮುರಿ ಕಟ್ಟಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ.
ಆರೋಪಿಯ ವಿರುದ್ಧ ಭಯೋತ್ಪಾದನಾ ನಿಗ್ರಹ ಕಾಯಿದೆ ಮತ್ತು ಟೆಲಿಗ್ರಾಫ್ ಕಾಯಿದೆಯಡಿ ಪ್ರಕರಣ ದಾಖಲಿಸಲಾಗಿದೆ. ಶಂಕಿತನನ್ನು ಮೊಬೈಲ್ ಡೇಟಾದ ಮೂಲಕ ಪತ್ತೆಹಚ್ಚಲಾಗಿದೆ. ಇನ್ನು ಪಾಕಿಸ್ತಾನ ಪ್ರವಾಸದ ವೇಳೆಯೇ ಆಸ್ಟ್ರೇಲಿಯಾ ಟೆಸ್ಟ್ ತಂಡದ ಸ್ಪಿನ್ನರ್ ಆ್ಯಸ್ಟನ್ ಅಗರ್ ವಿರುದ್ಧವೂ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಜೀವ ಬೆದರಿಕೆ ಹಾಕಲಾಗಿತ್ತು.
ಇದನ್ನೂ ಓದಿ: ಉ.ಕೊರಿಯಾ ಹ್ಯಾಕರ್‌ಗಳಿಂದ $600 ಮಿಲಿಯನ್ ಕ್ರಿಪ್ಟೋ ಕಳವು: ಎಫ್‌ಬಿಐ