ನವದೆಹಲಿ: ಟಿ20 ವಿಶ್ವಕಪ್ನಲ್ಲಿ ಇಂಗ್ಲೆಂಡ್ ವಿರುದ್ಧ ಸೋಲನುಭವಿಸಿದ ಪಾಕಿಸ್ತಾನ 2ನೇ ಬಾರಿಗೆ ಚಾಂಪಿಯನ್ ಆಗುವ ಕನಸು ನುಚ್ಚು ನೂರಾಯಿತು. ಭಾರತ ಸೆಮಿಫೈನಲ್ನಲ್ಲಿ ಆಂಗ್ಲರ ವಿರುದ್ಧ ಸೋತಾಗ ಪಾಕ್ ಮಾಜಿ ವೇಗಿ ಶೋಯೆಬ್ ಮಲಿಕ್ ಒಡೆದ ಹೃದಯದ ಇಮೋಜಿ ಹಾಕಿ ಅಣಕಿಸಿದ್ದರು. ಇಂದು ಪಾಕ್ ಸೋತಿದ್ದು, ಇದಕ್ಕೆ ಭಾರತದ ವೇಗಿ ಮೊಹಮದ್ ಶಮಿ ತಿರುಗೇಟು ನೀಡಿದ್ದಾರೆ.
ಟ್ವಿಟರ್ನಲ್ಲಿ ಹೃದಯ ಒಡೆದ ಮೂರು ಇಮೋಜಿಗಳನ್ನು ಹಂಚಿಕೊಂಡ ಶಮಿ, "ಸ್ವಾರಿ ಬ್ರದರ್, ಮಾಡಿದ ಕರ್ಮದ ಪ್ರತಿಫಲ" ಎಂದು ಬರೆದು ತಿವಿದಿದ್ದಾರೆ. ಶೋಯೆಬ್ ಅಖ್ತರ್ರ ಟ್ವೀಟ್ ಅನ್ನು ರೀಟ್ವಿಟ್ ಮಾಡಿರುವ ಶಮಿ ಪಾಕ್ ಮಾಜಿ ಆಟಗಾರನಿಗೆ ಗುದ್ದು ನೀಡಿದ್ದಾರೆ.
ಇದಕ್ಕೆ ತರಹೇವಾರಿ ಕಮೆಂಟ್ಗಳು ಬಂದಿದ್ದು, ಶೋಯೆಬ್ ಬೆವರಿಳಿಸಿದ್ದಾರೆ. ಆಟದಲ್ಲಿ ಸೋಲು ಗೆಲುವು ಸಹಜ. ಅದನ್ನು ಸ್ಫೂರ್ತಿದಾಯಕವಾಗಿ ಸ್ವೀಕರಿಸಬೇಕು ಎಂದು ಸಲಹೆ ನೀಡಿದ್ದಾರೆ. ಅಲ್ಲದೇ, ಈ ಹಿಂದೆ ಪಾಕಿಸ್ತಾನ ಭಾರತದ ಎದುರು ಹೀನಾಯ ಆಟವಾಡಿದ ಬಗ್ಗೆಯೂ ಕಮೆಂಟ್ ಮಾಡಲಾಗಿದೆ.
ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ನಲ್ಲಿ ಭಾರತ ಕಳಪೆ ಆಟವಾಡಿತ್ತು. ಮೊದಲು ಬ್ಯಾಟ್ ಮಾಡಿದ್ದ ಟೀಂ ಇಂಡಿಯಾ 6 ವಿಕೆಟ್ ಕಳೆದುಕೊಂಡು 168 ರನ್ ಪೇರಿಸಿತ್ತು. ಗುರಿ ಬೆನ್ನತ್ತಿದ ಇಂಗ್ಲೆಂಡ್ ನಾಯಕ ಜೋಸ್ ಬಟ್ಲರ್ ಮತ್ತು ಅಲೆಕ್ಸ್ ಹೇಲ್ಸ್ರ ಬಿರುಗಾಳಿ ಬ್ಯಾಟಿಂಗ್ನಿಂದಾಗಿ ವಿಕೆಟ್ ನಷ್ಟವಿಲ್ಲದೇ ಗುರಿ ಮುಟ್ಟಿದ್ದರು. ಇದು ವಿಶ್ವಕಪ್ನಲ್ಲಿಯೇ ದಾಖಲಾದ ಹೀನಾಯ ಸೋಲಾಗಿದೆ.
-
Sorry brother
— Mohammad Shami (@MdShami11) November 13, 2022 " class="align-text-top noRightClick twitterSection" data="
It’s call karma 💔💔💔 https://t.co/DpaIliRYkd
">Sorry brother
— Mohammad Shami (@MdShami11) November 13, 2022
It’s call karma 💔💔💔 https://t.co/DpaIliRYkdSorry brother
— Mohammad Shami (@MdShami11) November 13, 2022
It’s call karma 💔💔💔 https://t.co/DpaIliRYkd
ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಅದೃಷ್ಟದ ಮೂಲಕ ಫೈನಲ್ ತಲುಪಿದ್ದ ಪಾಕಿಸ್ತಾನ ಅದೇ ಇಂಗ್ಲೆಂಡ್ ಮುಂದೆ ಮಂಡಿಯೂರಿ ವಿಶ್ವಕಪ್ ಕಳೆದುಕೊಂಡಿತು. ಕಳಪೆ ಬ್ಯಾಟಿಂಗ್ನಿಂದಾಗಿ 137 ರನ್ ಗಳಿಸಿದ್ದ ಪಾಕ್ ಗುರಿಯನ್ನು ಇಂಗ್ಲೆಂಡ್ ಒಂದು ಓವರ್ ಬಾಕಿ ಇರುವಾಗಲೇ ವಿಜಯದುಂದುಭಿ ಮೊಳಗಿಸಿತು.
ಓದಿ: ಟಿ20 ಕ್ರಿಕೆಟ್ಗೆ ಇಂಗ್ಲೆಂಡ್ ಕಿಂಗ್.. ಪಾಕ್ ಪುಡಿಗಟ್ಟಿ ಚಾಂಪಿಯನ್ ಆದ ಇಂಗ್ಲೆಂಡ್