ಮ್ಯಾಂಚೆಸ್ಟರ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಸರಣಿಯ ನಿರ್ಣಾಯಕ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಹಾಗು ರಿಷಭ್ ಪಂತ್ ಸಮಯೋಚಿತ ಆಟದ ನೆರವಿನಿಂದ ಭಾರತ ತಂಡವು ಆತಿಥೇಯರನ್ನು 5 ವಿಕೆಟ್ಗಳಿಂದ ಮಣಿಸುವ ಮೂಲಕ ಸರಣಿ ವಶಪಡಿಸಿಕೊಂಡಿದೆ.
ನಿನ್ನೆ ನಡೆದ ಪಂದ್ಯದ ಬಳಿಕ ಮಾತನಾಡಿದ ನಾಯಕ ರೋಹಿತ್ ಶರ್ಮಾ, "ಒಳ್ಳೆಯ ಫಾರ್ಮ್ನಲ್ಲಿರುವ ಆಟಗಾರರು ಅವಕಾಶ ದೊರೆಯದೆ ಬೆಂಚ್ ಕಾಯುತ್ತಿದ್ದಾರೆ. ಬೆಂಚ್ನಲ್ಲಿ ಕಾಯುತ್ತಿರುವವರು ಪಂದ್ಯಗಳಲ್ಲಿ ಕಾಣುವಂತಾಗಬೇಕು. ಪಂದ್ಯದ ಸಂದರ್ಭದಲ್ಲಿ ಗಾಯಗಳಾಗಿ ಆಟಗಾರರು ಹೊರಗುಳಿಯುವ ಸಾಧ್ಯತೆಗಳಿರುತ್ತವೆ. ಇಂತಹ ಸಮಯದಲ್ಲಿ ಬೆಂಚ್ ಬಲ ಹೆಚ್ಚಿಸಬೇಕಿರುತ್ತದೆ. ಈ ಬಾರಿ ವೆಸ್ಟ್ ಇಂಡೀಸ್ ವಿರುದ್ದ ನಡೆಯಲಿರುವ ಪಂದ್ಯಗಳಲ್ಲಿ ಉತ್ತಮ ಫಾರ್ಮ್ನಲ್ಲಿದ್ದು ಬೆಂಚ್ ಕಾಯುತ್ತಿರುವ ಭಾರತದ ಕೆಲವು ಆಟಗಾರನ್ನು ಆಯ್ಕೆ ಮಾಡಲಾಗಿದ್ದು ಪಂದ್ಯದಲ್ಲಿ ಅವಕಾಶ ದೊರೆಯಲಿದೆ" ಎಂದು ಹೇಳಿದರು.
ಇದನ್ನೂ ಓದಿ: ಹಾರ್ದಿಕ್ ಮಿಂಚು, ಪಂತ್ ಭರ್ಜರಿ ಶತಕ : ಸರಣಿ ಗೆದ್ದ ಭಾರತ