ಮುಂಬೈ : ರವೀಂದ್ರ ಜಡೇಜಾ ತಮ್ಮ ಅದ್ಭುತ ಆಲ್ರೌಂಡರ್ ಪ್ರದರ್ಶನದ ಮೂಲಕ ನಮ್ಮ ತಂಡವನ್ನು ಸಂಪೂರ್ಣವಾಗಿ ಮಣಿಸಿದರೆಂದು ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ತಿಳಿಸಿದ್ದಾರೆ.
ಈ ರೀತಿಯ ಸೋಲು ಟೂರ್ನಿಯ ಆರಂಭದಲ್ಲೇ ಬಂದಿರುವುದು ಒಳ್ಳೆಯದು. ನಮಗೆ ನಮ್ಮ ತಪ್ಪುಗಳ ಅರಿವಾಗಿದೆ. ತಂಡದಲ್ಲಿ ಇದಕ್ಕೆ ಧನಾತ್ಮಕ ಪ್ರತಿಕ್ರಿಯೆ ಬಂದಿದೆ. ಈ ಪಂದ್ಯದಲ್ಲಿ ನಮ್ಮ ಆರಂಭ ಸಾಕಾಗಲಿಲ್ಲ. ಒಬ್ಬ ಆಟಗಾರ (ಜಡೇಜಾ) ನಮ್ಮನ್ನು ಸಂಪೂರ್ಣವಾಗಿ ಮಣಿಸಿದ. ಇಂದು ಅವರ ಕೌಶಲ್ಯವನ್ನು ಎಲ್ಲರೂ ನೋಡಿದ್ದಾರೆ" ಎಂದು ಕೊಹ್ಲಿ ಪಂದ್ಯದ ನಂತರ ಹೇಳಿದ್ದಾರೆ.
-
I have believed in @imjadeja a lot. I am happy to see him perform with the bat, ball and in the field. When he plays well, it opens up so many options not just for #CSK but for #TeamIndia also: @imVkohli 🤝 pic.twitter.com/GvmQR1Tgk3
— IndianPremierLeague (@IPL) April 25, 2021 " class="align-text-top noRightClick twitterSection" data="
">I have believed in @imjadeja a lot. I am happy to see him perform with the bat, ball and in the field. When he plays well, it opens up so many options not just for #CSK but for #TeamIndia also: @imVkohli 🤝 pic.twitter.com/GvmQR1Tgk3
— IndianPremierLeague (@IPL) April 25, 2021I have believed in @imjadeja a lot. I am happy to see him perform with the bat, ball and in the field. When he plays well, it opens up so many options not just for #CSK but for #TeamIndia also: @imVkohli 🤝 pic.twitter.com/GvmQR1Tgk3
— IndianPremierLeague (@IPL) April 25, 2021
ಹರ್ಷಲ್ ಇಬ್ಬರು ಸೆಟ್ ಬ್ಯಾಟ್ಸ್ಮನ್ಗಳ ವಿಕೆಟ್ ಪಡೆದಿದ್ದರಿಂದ ಮೊದಲ ಇನ್ನಿಂಗ್ಸ್ನಲ್ಲಿ ಕೊನೆಯ ಓವರ್ ತನಕ ನಾವು ಮುನ್ನಡೆ ಸಾಧಿಸಿದ್ದೆವು. ಆದರೆ, ಜಡೇಜಾ ಕೊನೆಯ ಓವರ್ನಲ್ಲಿ ಪಂದ್ಯವನ್ನು ನಮ್ಮಿಂದ ಸ್ವಲ್ಪ ದೂರ ಮಾಡಿದರು. ಆದ್ರೆ, ಬ್ಯಾಟ್, ಬೌಲ್ ಮತ್ತು ಫೀಲ್ಡ್ನಲ್ಲಿ ಜಡೇಜಾ ತೋರುತ್ತಿರುವ ಪ್ರದರ್ಶನ ನನಗೆ ಖುಷಿ ನೀಡಿದೆ.
ಎರಡು ತಿಂಗಳ ನಂತರ ಅವರು ಭಾರತ ತಂಡಕ್ಕೆ ಮರಳಲಿದ್ದಾರೆ. ನನಗೆ ಅವರಂತಹ ಪ್ರೀಮಿಯರ್ ಆಲ್ರೌಂಡರ್ ನೋಡುವುದಕ್ಕೆ ಖುಷಿಯಾಗುತ್ತದೆ. ಅವರು ಆತ್ಮವಿಶ್ವಾಸದಿಂದ ಆಡುವುದರಿಂದ ಅನೇಕ ಅವಕಾಶಗಳನ್ನು ಪಡೆಯಬಹುದು ಎಂದು ತಿಳಿಸಿದ್ದಾರೆ.
ಜಡೇಜಾ ಬ್ಯಾಟಿಂಗ್ನಲ್ಲಿ 28 ಎಸೆತಗಳಲ್ಲಿ 62 ರನ್ಗಳಿಸಿದರೆ, ಬೌಲಿಂಗ್ನಲ್ಲಿ ಕೇವಲ 13 ರನ್ ನೀಡಿ 3 ವಿಕೆಟ್ ಪಡೆದು ಸಿಎಸ್ಕೆಗೆ 69 ರನ್ಗಳ ಗೆಲುವು ತಂದುಕೊಡುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಇದನ್ನು ಓದಿ:ಒಂದೇ ಓವರ್ನಲ್ಲಿ 5 ಸಿಕ್ಸರ್ ಸಹಿತ 37 ರನ್: ಕ್ರಿಸ್ ಗೇಲ್ ದಾಖಲೆ ಸರಿಗಟ್ಟಿದ ಜಡೇಜಾ