ಮುಂಬೈ: ಕ್ರಿಕೆಟ್ನ ಅಸಂಖ್ಯ ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡಿರುವ ಭಾರತದ ಲೆಜೆಂಡರಿ ಬ್ಯಾಟರ್ ಸಚಿನ್ ತೆಂಡೂಲ್ಕರ್ ಏಕದಿನ ಕ್ರಿಕೆಟ್ನಲ್ಲಿ ಚೊಚ್ಚಲ ದ್ವಿಶತಕ ಸಿಡಿಸಿ ಇಂದಿಗೆ 12 ವರ್ಷಗಳ ಸಂಭ್ರಮ.
ಏಕದಿನ ಕ್ರಿಕೆಟ್ನ ನಾಲ್ಕು ದಶಕಗಳಲ್ಲಿ ಅಸಾಧ್ಯವಾಗಿದ್ದ ದ್ವಿಶತಕವನ್ನು ಕೊನೆಗೂ ಕ್ರಿಕೆಟ್ ದೇವರಾದ ಸಚಿನ್ ತೆಂಡೂಲ್ಕರ್ 2010 ಫೆ.24ರಂದು ದಕ್ಷಿಣ ಆಫ್ರಿಕಾ ವಿರುದ್ಧ ಸಿಡಿಸಿ ವಿಶ್ವಕ್ರಿಕೆಟ್ ತಮ್ಮತ್ತ ಒಮ್ಮೆ ತಿರುಗಿ ನೋಡುವಂತೆ ಮಾಡಿದ್ದರು. 150 ಹೊಡೆಯುವುದೇ ದುಸ್ತರವಾಗಿದ್ದ ಕಾಲದಲ್ಲಿ ಅಂದು ವಿಶ್ವದ ಬಲಿಷ್ಠ ಬೌಲಿಂಗ್ ಶಕ್ತಿಯಾಗಿದ್ದ ದಕ್ಷಿಣ ಆಫ್ರಿಕಾ ವಿರುದ್ಧ ಸಚಿನ್ ದ್ವಿಶತಕ ಸಾಧಿಸಿ ತಾವೂಬ್ಬ ಶ್ರೇಷ್ಠ ಕ್ರಿಕೆಟಿಗ ಎನ್ನುವುದನ್ನು ತೋರಿಸಿದ್ದರು.
-
🗓️ #OnThisDay in 2010
— BCCI (@BCCI) February 24, 2022 " class="align-text-top noRightClick twitterSection" data="
The legendary @sachin_rt etched his name in the record books as he became the first batter to score a double ton in ODIs (Men's). 🔝 👏 👍 🙌
Let's relive that special knock from the batting maestro 🎥 🔽https://t.co/i9vCBxzhA6 pic.twitter.com/1LRbuYVe8K
">🗓️ #OnThisDay in 2010
— BCCI (@BCCI) February 24, 2022
The legendary @sachin_rt etched his name in the record books as he became the first batter to score a double ton in ODIs (Men's). 🔝 👏 👍 🙌
Let's relive that special knock from the batting maestro 🎥 🔽https://t.co/i9vCBxzhA6 pic.twitter.com/1LRbuYVe8K🗓️ #OnThisDay in 2010
— BCCI (@BCCI) February 24, 2022
The legendary @sachin_rt etched his name in the record books as he became the first batter to score a double ton in ODIs (Men's). 🔝 👏 👍 🙌
Let's relive that special knock from the batting maestro 🎥 🔽https://t.co/i9vCBxzhA6 pic.twitter.com/1LRbuYVe8K
ಫೆಬ್ರವರಿ 24, 2010 ರಂದು ಗ್ವಾಲಿಯರ್ ಮೈದಾನದಲ್ಲಿ ದಕ್ಷಿಣ ಆಫ್ರಿಕಾ ಮತ್ತು ಭಾರತದ ನಡುವೆ ಏಕದಿನ ಸರಣಿಯ ಎರಡನೇ ಪಂದ್ಯ ನಡೆದಿತ್ತು. ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಏಕದಿನ ಕ್ರಿಕೆಟ್ ಇತಿಹಾಸದ ಪ್ರಪ್ರಥಮ ದ್ವಿಶತಕ ಸಿಡಿಸಿದ್ದರು. 147 ಎಸೆತಗಳನ್ನೆದುರಿಸಿದ್ದ ಸಚಿನ್ ನಲ್ಲಿ ಭರ್ಜರಿ 25 ಬೌಂಡರಿ ಮತ್ತು 3 ಸಿಕ್ಸರ್ ಸಹಿತ 200 ರನ್ಗಳಿಸಿ ಔಟಾಗದೇ ಉಳಿದಿದ್ದರು. ಈ ಪಂದ್ಯದಲ್ಲಿ ಭಾರತ 153 ರನ್ಗಳ ಜಯ ಸಾಧಿಸಿತ್ತು.
ಇದನ್ನೂ ಓದಿ:ಜೂಜೂ, ಮದ್ಯ, ತಂಬಾಕಿಗೆ ಎಂದಿಗೂ ನನ್ನ ಬೆಂಬಲವಿಲ್ಲ: ತಮ್ಮ ಫೋಟೋ ಬಳಸಿದ ಕ್ಯಾಸಿನೋ ವಿರುದ್ಧ ಸಚಿನ್ ಕೇಸ್
ಸಚಿನ್ ಈ ಸಾಧನೆ ಮಾಡಿದ ನಂತರ ಇಲ್ಲಿಯವರೆಗೆ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ನಲ್ಲಿ 8 ದ್ವಿಶತಕಗಳು ದಾಖಲಾಗಿವೆ. ಅದರಲ್ಲಿ ಭಾರತದ ಬ್ಯಾಟ್ಸ್ಮನ್ಗಳೇ 5 ದ್ವಿಶತಕ ಸಿಡಿಸಿದ್ದಾರೆ. ಅದರಲ್ಲೂ ಪ್ರಸ್ತುತ ಭಾರತ ತಂಡದ ನಾಯಕ ಹಿಟ್ಮ್ಯಾನ್ ರೋಹಿತ್ ಶರ್ಮಾ 3 ಬಾರಿ ಈ ಸಾಧನೆ ಮಾಡಿದ್ದಾರೆ. ಸಚಿನ್ಗಿಂತ ಮೊದಲೇ ಆಸ್ಚ್ರೇಲಿಯಾ ಮಹಿಳಾ ತಂಡದ ಮಾಜಿ ನಾಯಕಿ ಬೆಲಿಂಡಾ ಕ್ಲಾರ್ಕ್ 1997ರಲ್ಲೇ ಡೆನ್ಮಾರ್ಕ್ ವಿರುದ್ಧದ ಅಜೇಯ 229ರನ್ ಸಿಡಿಸಿದ್ದರು. ಇದು ಏಕದಿನ ಕ್ರಿಕೆಟ್ ಜಗತ್ತಿನ ಮೊಟ್ಟ ಮೊದಲ ದ್ವಿಶತಕವಾಗಿತ್ತು.
ಏಕದಿನ ಕ್ರಿಕೆಟ್ನ ದ್ವಿಶತಕಗಳು
- ಸಚಿನ್ ತೆಂಡೂಲ್ಕರ್(200) 2010
- ವಿರೇಂದ್ರ ಸೆಹ್ವಾಗ್(219) 2011
- ರೋಹಿತ್ ಶರ್ಮಾ(209) 2013
- ರೋಹಿತ್ ಶರ್ಮಾ(264) 2013
- ಕ್ರಿಸ್ ಗೇಲ್(215) 2015
- ಮಾರ್ಟಿನ್ ಗಪ್ಟಿಲ್(237)2015
- ರೋಹಿತ್ ಶರ್ಮಾ(208)2017