ETV Bharat / sports

ಮಹೇಂದ್ರ ಸಿಂಗ್ ಧೋನಿ ಭಾರತ ಕ್ರಿಕೆಟ್​ಗೆ ಪದಾರ್ಪಣೆ ಮಾಡಿ ಇಂದಿಗೆ 17 ವರ್ಷದ ಸಂಭ್ರಮ

author img

By

Published : Dec 23, 2021, 4:08 PM IST

ಚಿತ್ತಗಾಂಗ್​​ನಲ್ಲಿ ನಡೆದ ಬಾಂಗ್ಲಾದೇಶದ ವಿರುದ್ಧದ ಏಕದಿನ ಪಂದ್ಯದಲ್ಲಿ ಧೋನಿ ವಿಕೆಟ್ ಕೀಪರ್ ಬ್ಯಾಟರ್​ ಆಗಿ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ್ದರು. ವಿಶ್ವ ಕ್ರಿಕೆಟ್​ನ ಶ್ರೇಷ್ಠ ವಿಕೆಟ್ ಕೀಪರ್ ಹಾಗೂ ಗ್ರೇಟ್ ಫಿನಿಶರ್​ ಎನಿಸಿಕೊಂಡಿರುವ ಧೋನಿ ತಮ್ಮ ಮೊದಲ ಇನ್ನಿಂಗ್ಸ್​​ನಲ್ಲಿ ಶೂನ್ಯಕ್ಕೆ ವಿಕೆಟ್​ ಒಪ್ಪಿಸಿ ನಿರಾಶೆಯನುಭವಿಸಿದ್ದರು.

MS Dhoni made his international debut
ಮಹೇಂದ್ರ ಸಿಂಗ್ ಧೋನಿ ಪದಾರ್ಪಣೆ

ನವದೆಹಲಿ: ಹದಿನೇಳು ವರ್ಷಗಳ ಹಿಂದೆ ಈ ದಿನ ಕ್ರಿಕೆಟ್​ ಜಗತ್ತು ಕಂಡ ಅತ್ಯಂತ ಯಶಸ್ವಿ ನಾಯಕರಲ್ಲಿ ಒಬ್ಬರಾದ ಹಾಗೂ ಭಾರತ ಕ್ರಿಕೆಟ್​ನ ಯಶಸ್ವಿ ನಾಯಕ ಮಹೇಂದ್ರ ಸಿಂಗ್ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್​​ಗೆ ಪದಾರ್ಪಣೆ ಮಾಡಿದ್ದರು.

ಚಿತ್ತಗಾಂಗ್​​ನಲ್ಲಿ ನಡೆದ ಬಾಂಗ್ಲಾದೇಶದ ವಿರುದ್ಧದ ಏಕದಿನ ಪಂದ್ಯದಲ್ಲಿ ಧೋನಿ ವಿಕೆಟ್ ಕೀಪರ್ ಬ್ಯಾಟರ್​ ಆಗಿ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ್ದರು. ವಿಶ್ವ ಕ್ರಿಕೆಟ್​ನ ಶ್ರೇಷ್ಠ ವಿಕೆಟ್ ಕೀಪರ್ ಹಾಗೂ ಗ್ರೇಟ್ ಫಿನಿಶರ್​ ಎನಿಸಿಕೊಂಡಿರುವ ಧೋನಿ ತಮ್ಮ ಮೊದಲ ಇನ್ನಿಂಗ್ಸ್​​ನಲ್ಲಿ ಶೂನ್ಯಕ್ಕೆ ವಿಕೆಟ್​ ಒಪ್ಪಿಸಿ ನಿರಾಶೆಯನುಭವಿಸಿದ್ದರು. ಆ ಪಂದ್ಯದಲ್ಲಿ ಧೋನಿ ಅವರನ್ನು ಬಾಂಗ್ಲಾದೇಶದ ತಪಾಶ್ ಬೈಸ್ಯಾ ಮತ್ತು ಖಲಿದ್ ಮಶುದ್ ಸೇರಿ ಧೋನಿ ಅವರನ್ನು ರನ್​ಔಟ್​ ಮಾಡಿದ್ದರು.

ಪದಾರ್ಪಣೆ ಕೆಟ್ಟದಾಗಿದ್ದ ಹೊರತಾಗಿಯೂ ಧೋನಿ ತಮ್ಮ ವಿಕೆಟ್​ ಕೀಪಿಂಗ್ ಕೌಶಲ್ಯ ಮತ್ತು ಇನ್ನಿಂಗ್ಸ್​ಗಳನ್ನು ಅತ್ಯುತ್ತಮ ರೀತಿಯಲ್ಲಿ ಮುಗಿಸುವ ಮೂಲಕ ವಿಶ್ವದ ಶ್ರೇಷ್ಠ ಫಿನಿಶರ್ ಎಂಬ ಖ್ಯಾತಿಗೆ ಪಾತ್ರರಾದರು.

ಬಹಳ ಬೇಗ ಭಾರತ ತಂಡದ ಸಾರಥ್ಯ ವಹಿಸಿಕೊಂಡ ಜಾರ್ಖಂಡ್ ಕ್ರಿಕೆಟಿಗ ಭಾರತವನ್ನು ಮೊದಲ ಬಾರಿಗೆ ಟೆಸ್ಟ್​ ರ‍್ಯಾಂಕಿಂಗ್​ನಲ್ಲಿ ನಂಬರ್​ 1ಗೆ ಕೊಂಡಯ್ದ ಕೀರ್ತಿಯ ಜೊತೆಗೆ ಐಸಿಸಿ ಆಯೋಜನೆಯ ಎಲ್ಲ ಟೂರ್ನಿಗಳನ್ನು ಗೆದ್ದ ವಿಶ್ವ ಏಕೈಕ ನಾಯಕ ಎಂಬ ಹಿರಿಮೆಗೂ ಪಾತ್ರರಾಗಿದ್ದಾರೆ. ಇವರ ನಾಯಕತ್ವದಲ್ಲಿ ಭಾರತ 2011ರಲ್ಲಿ ಏಕದಿನ ವಿಶ್ವಕಪ್​, 2007ರಲ್ಲಿ ಟಿ-20 ವಿಶ್ವಕಪ್​ ಹಾಗೂ 2013 ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದಿದೆ.

2009ರಲ್ಲಿ ಧೋನಿ ನಾಯಕತ್ವದಲ್ಲಿ ಟೆಸ್ಟ್​ ಶ್ರೇಯಾಂಕದಲ್ಲಿ ಅಗ್ರಸ್ಥಾನಕ್ಕೇರಿದ ಭಾರತ 600ಕ್ಕೂ ಹೆಚ್ಚು ದಿನಗಳ ಕಾಲ ಆ ಸ್ಥಾನವನ್ನು ಉಳಿಸಿಕೊಂಡಿತ್ತು. ಐಸಿಸಿ ಮಾಹಿತಿಯ ಪ್ರಕಾರ ಧೋನಿ 2006ರಿಂದ 2010ರವರೆಗೆ 656 ದಿನಗಳ ಕಾಲ ನಂಬರ್​ ಒನ್​ ಆಗಿದ್ದರು. ಅವರು 2008 ಮತ್ತು 2009ರಲ್ಲಿ ವರ್ಷದ ಏಕದಿನ ಕ್ರಿಕೆಟರ್​ ಗೌರವಕ್ಕೆ ಪಾತ್ರರಾಗಿದ್ದರು.

ಇದರ ಜೊತೆಗೆ 2006, 2008, 2009, 2010,2011, 2012, 2013 ಮತ್ತು 2014ರ ಐಸಿಸಿ ವರ್ಷದ ಏಕದಿನ​ ತಂಡದಲ್ಲಿ ಅವಕಾಶ ಪಡೆದಿದ್ದರೆ, 2009,2010, 2012 ಮತ್ತು 2013ರಲ್ಲಿ ಐಸಿಸಿ ಟೆಸ್ಟ್​ ತಂಡದ ಸದಸ್ಯರಾಗಿದ್ದರು.

ಧೋನಿ ಆಗಸ್ಟ್ 15 2020ರಲ್ಲಿ ಎಲ್ಲ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್​​ಗೆ ನಿವೃತ್ತಿ ಘೋಷಿಸಿದರು. ಅವರು 16 ವರ್ಷಗಳ ವೃತ್ತಿ ಜೀವನದಲ್ಲಿ 4876 ಟೆಸ್ಟ್​, 10,773 ಏಕದಿನ ಮತ್ತು 1617 ಟಿ-20 ರನ್​ಗಳಿಸಿದ್ದಾರೆ.

ಇದನ್ನೂ ಓದಿ:ಸೌರವ್ ಗಂಗೂಲಿ ವಿರಾಟ್​ ಕೊಹ್ಲಿ ನಾಯಕತ್ವ ಕುರಿತಂತೆ ಮಾತನಾಡುವುದು ತಪ್ಪು: ವೆಂಗ್​ಸರ್ಕರ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.