ETV Bharat / sports

On This Day: ಕಪಿಲ್​ ದೇವ್​ ಅಜೇಯ ಶತಕದ ವಿಶ್ವಕಪ್​ ಇನ್ನಿಂಗ್ಸ್​.. ಬಿಬಿಸಿ ಮುಷ್ಕರದಿಂದ ಟಿವಿಯಲ್ಲಿ ಪ್ರಸಾರವಾಗದ ಪಂದ್ಯ - ETV Bharath Kannada news

40 ವರ್ಷಗಳ ಹಿಂದೆ ಇದೇ ದಿನ ಭಾರತದ ಶ್ರೇಷ್ಠ ನಾಯಕ ಕಪಿಲ್ ದೇವ್ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಅತ್ಯುತ್ತಮ ಇನ್ನಿಂಗ್ಸ್ ಆಡಿದ್ದರು. ಈ ದಿನ ಜಿಂಬಾಬ್ವೆ ವಿರುದ್ಧ ಕಪಿಲ್ ದೇವ್ ಅಜೇಯ 175 ರನ್ ಗಳಿಸಿದ್ದು ದಾಖಲೆಯಾಗಿದೆ.

kapil dev
ಕಪಿಲ್​ ದೇವ್
author img

By

Published : Jun 18, 2023, 5:57 PM IST

ನವದೆಹಲಿ: ಇಂದಿನ ದಿನ ಅಂದರೆ ಜೂನ್ 18 ಭಾರತೀಯ ಕ್ರಿಕೆಟ್‌ಗೆ ತುಂಬಾ ವಿಶೇಷವಾಗಿದೆ. ಈ ದಿನ ಭಾರತಕ್ಕೆ ಮೊದಲ ವಿಶ್ವಕಪ್ ಗೆದ್ದು ಕೊಟ್ಟ ಶ್ರೇಷ್ಠ ನಾಯಕ ಕಪಿಲ್ ದೇವ್ ಏಕದಿನ ಕ್ರಿಕೆಟ್‌ನ ಐತಿಹಾಸಿಕ ಇನ್ನಿಂಗ್ಸ್ ಆಡಿದರು. 1983ರ ವಿಶ್ವಕಪ್‌ನಲ್ಲಿ ಜಿಂಬಾಬ್ವೆ ವಿರುದ್ಧದ ಲೀಗ್ ಪಂದ್ಯದಲ್ಲಿ ಕಪಿಲ್ ದೇವ್ 175 ರನ್‌ಗಳ ಅಬ್ಬರದ ಇನ್ನಿಂಗ್ಸ್ ಆಡಿದ್ದರು. ಇದು ಏಕದಿನದಲ್ಲಿ ಯಾವುದೇ ಭಾರತೀಯ ಆಟಗಾರ ಗಳಿಸಿದ ಮೊದಲ ಶತಕವಾಗಿದೆ. ಈ ಇನ್ನಿಂಗ್ಸ್‌ನೊಂದಿಗೆ ಕಪಿಲ್ ದೇವ್ ಭಾರತವನ್ನು ಸಂಕಷ್ಟದಿಂದ ಪಾರು ಮಾಡಿದ್ದಲ್ಲದೆ, ತಂಡವನ್ನು ಫೈನಲ್‌ಗೆ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಿದರು.

ಕಪಿಲ್ ದೇವ್ ಕ್ರೀಸ್ ಬರುವ ಮೊದಲು ಸಂಕಷ್ಟದಲ್ಲಿ ಭಾರತ: 1983ರ ವಿಶ್ವಕಪ್‌ನ 20ನೇ ಲೀಗ್ ಪಂದ್ಯವು ಭಾರತ ಮತ್ತು ಜಿಂಬಾಬ್ವೆ ನಡುವೆ ಇಂಗ್ಲೆಂಡ್‌ನ ಟನ್‌ಬ್ರಿಡ್ಜ್ ವೆಲ್ಸ್‌ನಲ್ಲಿ ನಡೆಯುತ್ತಿತ್ತು. ಟಾಸ್ ಗೆದ್ದ ನಂತರ, ಭಾರತ ತಂಡದ ನಾಯಕ ಕಪಿಲ್ ದೇವ್ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು, ಇದು ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಿಂದ ತಪ್ಪಾದ ನಿರ್ಧಾರ ಎಂದು ಸಾಬೀತಾಯಿತು. ಸುನಿಲ್ ಗವಾಸ್ಕರ್ ಮತ್ತು ಕೆ. ಶ್ರೀಕಾಂತ್ ಅವರ ಆರಂಭಿಕ ಜೋಡಿ ಖಾತೆ ತೆರೆಯದೆ ಪೆವಿಲಿಯನ್​ಗೆ ಮರಳಿತು. ಮೊಹಿಂದರ್ ಅಮರನಾಥ್ (5), ಸಂದೀಪ್ ಪಾಟೀಲ್ (1) ಮತ್ತು ಯಶಪಾಲ್ ಶರ್ಮಾ (9) ರನ್ ಗಳಿಸಿ ಔಟಾದರು. 17 ರನ್ ಗಳಿಸುವಷ್ಟರಲ್ಲಿ 5 ವಿಕೆಟ್ ಕಳೆದುಕೊಂಡ ಭಾರತ ಸಂಕಷ್ಟದಲ್ಲಿತ್ತು. ಆದರೆ ಇದಾದ ಬಳಿಕ ಮೈದಾನಕ್ಕಿಳಿದ ನಾಯಕ ಕಪಿಲ್ ದೇವ್ ಬಿರುಸಿನ ಶತಕ ಬಾರಿಸುವ ಮೂಲಕ ಪಂದ್ಯಕ್ಕೆ ತಿರುವು ನೀಡಿದರು.

  • Kapil Dev played one of the greatest knocks ever on this day in 1983, India was 17 for 5 then Kapil Dev smashed 175* runs from 138 balls including 16 fours & 6 sixes helping India to reach 266 for 8 in the World Cup.

    The Greatest all-rounder in Indian cricket history. pic.twitter.com/7GOB4Zv7fB

    — Johns. (@CricCrazyJohns) June 18, 2023 " class="align-text-top noRightClick twitterSection" data=" ">

ಕಪಿಲ್ ದೇವ್ 175 ರನ್​ನ ಐತಿಹಾಸಿಕ ಇನ್ನಿಂಗ್ಸ್ : ಭಾರತದ ನಾಯಕ ಮೈದಾನದಲ್ಲಿ ಬ್ಯಾಟಿಂಗ್ ಮಾಡಲು ಹೊರಬಂದಾಗ ಭಾರತ 17 ರನ್ ಗಳಿಸುವಷ್ಟರಲ್ಲಿ 5 ವಿಕೆಟ್ ಕಳೆದುಕೊಂಡಿತ್ತು. ಆದರೆ ಆ ನಂತರ ನಡೆದದ್ದು ಪವಾಡವೇ. ಕಪಿಲ್ ಒಂದು ತುದಿಯನ್ನು ನಿಭಾಯಿಸುವ ಮೂಲಕ ತನ್ನ ಇನ್ನಿಂಗ್ಸ್ ಅನ್ನು ಪ್ರಾರಂಭಿಸಿದರು ಮತ್ತು ಸ್ಕೋರ್ಬೋರ್ಡ್ ಅನ್ನು ವೇಗವಾಗಿ ಹೆಚ್ಚಿಸಲು ಪ್ರಾರಂಭಿಸಿದರು. ಈ ದಿನ ಕಪಿಲ್ ವಿಭಿನ್ನ ರೂಪದಲ್ಲಿ ಕಾಣಿಸಿಕೊಂಡರು. ಮೈದಾನದ ಸುತ್ತಲೂ ಬೌಂಡರಿ ಹಾಗೂ ಸಿಕ್ಸರ್‌ಗಳ ಮಳೆ ಸುರಿಸತೊಡಗಿದರು.

ಕಪಿಲ್ ರೋಜರ್ ಬಿನ್ನಿ (22) ಜೊತೆಗೆ 60 ರನ್​ನ ಜೊತೆಯಾಟ ಮಾಡಿದರು. ಮದನ್ ಲಾಲ್ (17) ಜೊತೆಗೆ 62 ರನ್​ ಜೊತೆಯಾಟ ಮತ್ತು ಸೈಯದ್ ಕಿರ್ಮಾನಿ (ಔಟಾಗದೆ 24) 126 ರನ್ ಜೊತೆಯಾಟ ಆಡಿದರು. ಇದರಿಂದ ಭಾರತ ನಿಗದಿತ 60 ಓವರ್‌ಗಳಲ್ಲಿ 8 ವಿಕೆಟ್‌ಗೆ 266 ರನ್ ಗಳಿಸಿತು. ಕಪಿಲ್ ದೇವ್ 138 ಎಸೆತಗಳಲ್ಲಿ 16 ಬೌಂಡರಿ ಮತ್ತು 6 ಸಿಕ್ಸರ್‌ಗಳ ನೆರವಿನಿಂದ 175 ರನ್ ಗಳಿಸಿದರು. ಈ ಪಂದ್ಯದಲ್ಲಿ ಕಪಿಲ್​ ದೇವ್​ 126.81 ರ ಸ್ಟ್ರೈಕ್ ರೇಟ್​ನಲ್ಲಿ ಬ್ಯಾಟ್​ ಬೀಸಿದ್ದರು.

ಭಾರತಕ್ಕೆ 31 ರನ್​ನ ಗೆಲುವು: ಭಾರತ ನೀಡಿದ 266 ರನ್‌ಗಳ ಗುರಿಗೆ ಉತ್ತರವಾಗಿ ಜಿಂಬಾಬ್ವೆ ತಂಡವು 57 ಓವರ್‌ಗಳಲ್ಲಿ 235 ರನ್‌ ಗಳಿಸಿ ಆಲೌಟ್ ಆಯಿತು. ಈ ಮೂಲಕ ಭಾರತ ಪಂದ್ಯವನ್ನು 31 ರನ್‌ಗಳಿಂದ ಗೆದ್ದುಕೊಂಡಿತು. 175 ರನ್‌ಗಳ ಐತಿಹಾಸಿಕ ಅಜೇಯ ಇನ್ನಿಂಗ್ಸ್ ಮತ್ತು ಬೌಲಿಂಗ್‌ನಲ್ಲಿ 1 ವಿಕೆಟ್ ಪಡೆದ ಕಪಿಲ್ ದೇವ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು. ಆ ಸಮಯದಲ್ಲಿ ಇದು ಏಕದಿನ ಕ್ರಿಕೆಟ್‌ನಲ್ಲಿ ಯಾವುದೇ ಆಟಗಾರ ಮಾಡಿದ ದೊಡ್ಡ ಸ್ಕೋರ್ ಇದಾಗಿತ್ತು. ಆದರೆ, ಬಿಬಿಸಿ ತಂತ್ರಜ್ಞರ ಮುಷ್ಕರದಿಂದಾಗಿ ಈ ಪಂದ್ಯವನ್ನು ಟಿವಿಯಲ್ಲಿ ನೇರಪ್ರಸಾರ ಮಾಡಲಾಗಲಿಲ್ಲ.

ಇದನ್ನೂ ಓದಿ: Usman Khawaja: ಆ್ಯಶಸ್​ ಟೆಸ್ಟ್​- ಇಂಗ್ಲೆಂಡ್​ ನೆಲದಲ್ಲಿ ಉಸ್ಮಾನ್​ ಖವಾಜಾ ಚೊಚ್ಚಲ ಶತಕ, ಆಸೀಸ್​ 5ಕ್ಕೆ 311

ETV Bharat Logo

Copyright © 2024 Ushodaya Enterprises Pvt. Ltd., All Rights Reserved.