ETV Bharat / sports

ಫಿನಿಶಿಂಗ್ ವಿಚಾರದಲ್ಲಿ ಧೋನಿ ಸಮೀಪವೂ ಯಾರೂ ಬರಲಾರರು: ರಿಯಾನ್​ ಪರಾಗ್​

author img

By

Published : Mar 29, 2023, 1:06 PM IST

ಟೀಮ್​ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್​ ಧೋನಿ ಅವರ ಫಿನಿಶಿಂಗ್​ ಪಾತ್ರದ ಬಗ್ಗೆ ಕ್ರಿಕೆಟರ್ ಹಾಗೂ ಅಲ್​ರೌಂಡರ್​ ರಿಯಾನ್​ ಪರಾಗ್ ಮಾತನಾಡಿದ್ದಾರೆ. ​ ​

ರಿಯಾನ್​ ಪರಾಗ್​
ರಿಯಾನ್​ ಪರಾಗ್​

ಮುಂಬೈ: ಮಹೇಂದ್ರ ಸಿಂಗ್​ ಧೋನಿ ಫಿನಿಶರ್​ ಪಾತ್ರವನ್ನು ಕರಗತ ಮಾಡಿಕೊಂಡಿದ್ದಾರೆ. ಅವರಂತೆ ಫಿನಿಶರ್​ ಪಾತ್ರವನ್ನು ಯಾರೂ ನಿರ್ವಹಿಸಲಾರರು ಎಂದು ರಾಜಸ್ಥಾನ್​ ರಾಯಲ್ಸ್​ ತಂಡದ ಆಲ್​ರೌಂಡರ್​ ರಿಯಾನ್ ಪರಾಗ್​ ಹೇಳಿದ್ದಾರೆ.

ಈ ವರ್ಷ ತನ್ನ 5ನೇ ಐಪಿಎಲ್​ ಆಡಲಿರುವ ಗುಹವಾಟಿಯ 21 ವರ್ಷದ ರಿಯಾನ್​ ಪರಾಗ್​, ನಾನು ಕೂಡ ಧೋನಿಯಂತೆ ಫಿನಿಶರ್​ ರೋಲ್ ನಿರ್ವಹಿಸಲು ಬಯಸುತ್ತಿದ್ದೇನೆ ಎಂದರು. ಹಾಗೆಯೇ ನಮ್ಮ ರಾಯಲ್ಸ್​ ತಂಡ ನನಗೆ ಬ್ಯಾಟಿಂಗ್ ಕ್ರಮಾಂಕದ ಆಯ್ಕೆ ಕೊಟ್ಟರೆ 4ನೇ ಕ್ರಮಾಂಕದಲ್ಲಿ ಆಡಲು ಬಯಸುತ್ತೇನೆ. ಆದರೆ, ಯಾವ ಕ್ರಮಾಂಕದಲ್ಲಿ ಆಡಿದರೆ ಸೂಕ್ತ ಎಂದು ತಂಡಕ್ಕೆ ಅನಿಸಿದರೆ ಅದೇ ಕ್ರಮಾಂಕದಲ್ಲಿ ಬ್ಯಾಟಿಂಗ್​ ಮಾಡುವೆ. ಏಕೆಂದರೆ ​ಇದು ತಂಡದ ನಿರ್ಧಾರ ಎಂದು ಪರಾಗ್ ಹೇಳಿದರು.

"ಕಳೆದ ಮೂರು ವರ್ಷಗಳಿಂದ ನಾನು ಫಿನಿಶಿಂಗ್ ಪಾತ್ರ ನಿಭಾಯಿಸುತ್ತಿದ್ದೇನೆ. ಫಿನಿಶಿಂಗ್​ ವಿಚಾರಕ್ಕೆ ಬಂದಾಗ ನನ್ನ ನೆನಪಿಗೆ ಬರುವ ಒಂದೇ ಒಂದು ಹೆಸರು ಎಂದರೆ ಅದು ಎಂ.ಎಸ್.ಧೋನಿ. ಈ ಹಿಂದೆಯೂ ಇದನ್ನೇ ಹೇಳಿದ್ದೆ. ಧೋನಿ ಹೊರತುಪಡಿಸಿ ಫಿನಿಶಿಂಗ್​ ಕಲೆಯನ್ನು ಬೇರೆ ಯಾರೂ ಕರಗತ ಮಾಡಿಕೊಂಡಿಲ್ಲ ಎಂದೇ ನಾನು ಭಾವಿಸಿದ್ದೇನೆ. ನಾನು ಕೂಡ ಆ ಪಾತ್ರಕ್ಕೆ ಸೇರಲು ಬಯಸುತ್ತಿದ್ದೇನೆ. ಹಾಗಾಗಿ ಧೋನಿ ಪಂದ್ಯಗಳನ್ನು ಹೇಗೆ ಫಿನಿಶ್​ ಮಾಡುತ್ತಾರೆ ಮತ್ತು ಪಂದ್ಯವನ್ನು ಎಷ್ಟು ಗಂಭೀರವಾಗಿ ಪರಿಗಣಿಸುತ್ತಾರೆ ಎಂಬುದರ ಕಡೆಗೆ ನಾನು ಸದಾ ಗಮನ ಹರಿಸಿರುತ್ತೇನೆ" ಎಂದರು.

ಈ ಬಾರಿಯ ಐಪಿಎಲ್​ಗಾಗಿ ಜೈಪುರದಲ್ಲಿ ಅಭ್ಯಾಸ ನಡೆಸಲಾಗಿದೆ. ತಂಡದ ಎಲ್ಲಾ ಆಟಗಾರರು ಬ್ಯಾಟಿಂಗ್​ ಮತ್ತು ಬೌಲಿಂಗ್​ನಲ್ಲಿ ಉತ್ತಮ ಹಿಡಿತದೊಂದಿಗೆ ಆತ್ಮವಿಶ್ವಾಸ ಹೊಂದಿದ್ದಾರೆ ಎಂದು ಅವರು ಹೇಳಿದರು. ತಮ್ಮ ಬೌಲಿಂಗ್‌ನಲ್ಲೂ ಸುಧಾರಣೆ ತರಲು ಶ್ರಮಿಸಿರುವುದಾಗಿ ಪರಾಗ್ ಹೇಳಿಕೊಂಡಿದ್ದಾರೆ. "ಈ ಋತುವಿನಲ್ಲಿ ( ವಿಜಯ ಹಜಾರೆ, ಸೈಯದ್ ಮುಷ್ತಾಕ್ ಅಲಿ) ನಾನು ಸಾಕಷ್ಟು ಓವರ್‌ಗಳು ಬೌಲಿಂಗ್​ ಮಾಡಿದ್ದರಿಂದ (ನನ್ನ ಲೆಗ್ ಬ್ರೇಕ್‌ಗಳಲ್ಲಿ) ಬೌಲಿಂಗ್​ನಲ್ಲಿ ದೊಡ್ಡ ಸುಧಾರಣೆಯಾಗಿದೆ. ನಾನು 350 ಕ್ಕೂ ಹೆಚ್ಚು ಓವರ್‌ಗಳನ್ನು ಬೌಲ್ ಮಾಡಿದ್ದೇನೆ. ಇದಿರಂದ ನಾನು ಬೌಲಿಂಗ್​ಗೂ ಸಮರ್ಥನಾಗಿದ್ದೇನೆ ಎಂದು ತಿಳಿಸಿದರು.

ಬಳಿಕ ತಮ್ಮ ಟ್ರೋಲ್​ ವಿಚಾರದ ಬಗ್ಗೆ ಮಾತನಾಡುತ್ತಾ, ಸಾಮಾಜಿಕ ಮಾಧ್ಯಮದಲ್ಲಿ ನನ್ನ ವಿರುದ್ಧ ಟ್ರೋಲ್ ಆಗುತ್ತಿರುತ್ತವೆ. ಇನ್ನು ಮುಂದೆ ಅದು ನನ್ನ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಹೇಳಿದರು. ಈ ಹಿಂದೆ ಸಾಮಾಜಿಕ ಜಾಲತಾಣಗಲ್ಲಿ ನನ್ನ ವಿರುದ್ಧ ಟ್ರೋಲ್ ಆದಾಗ ಬೇಸರವಾಗುತ್ತಿತ್ತು. ಆದರೆ ಈಗ ಏನು ಮಾಡಬೇಕೆಂಬುದರ ಬಗ್ಗೆ ಅರಿತಿದ್ದೇನೆ ಎಂದು ಹೇಳಿದರು.

2018ರ U-19 ವಿಶ್ವಕಪ್ ವಿಜೇತ ತಂಡದಲ್ಲಿ ಸ್ಥಾನ ಪಡೆದಿದ್ದ ಪರಾಗ್, 2022-23ರ ವಿಜಯ್ ಹಜಾರೆ ಟ್ರೋಫಿಯಲ್ಲಿ ಐದನೇ ಅತಿ ಹೆಚ್ಚು ರನ್​ಗಳಿಸಿದ್ದ ಆಟಗಾರರಾಗಿದ್ದರು. ಈ ಕೂಟದಲ್ಲಿ 69 ಸರಾಸರಿಯೊಂದಿಗೆ 552 ರನ್​ಗಳನ್ನು ಗಳಿಸಿದ್ದ ಪರಾಗ್​ ಮೂರು ಶತಕ ಮತ್ತು ಒಂದು ಅರ್ಧಶತಕ ಸಿಡಿಸಿದ್ದರು. ಇನ್ನು ಸೈಯದ್ ಮುಷ್ತಾಕ್ ಅಲಿ T20 ಟ್ರೋಫಿಯಲ್ಲೂ ಬಲಗೈ ಆಟಗಾರ 165.35 ಸ್ಟ್ರೈಕ್ ರೇಟ್‌ನಲ್ಲಿ ಎರಡು ಅರ್ಧಶತಕಗಳೊಂದಿಗೆ 253 ರನ್ ಗಳಿಸಿದ್ದರು.

ಇದನ್ನೂ ಓದಿ: 'ನನ್ನ ಹೃದಯ ತುಂಬಿ ಬಂತು': ಆರ್‌ಸಿಬಿ ಅಭಿಮಾನಿಗಳ ಪ್ರೀತಿಗೆ ಭಾವನಾತ್ಮಕ ಸಂದೇಶ ಬರೆದ ಎಬಿಡಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.