ETV Bharat / sports

ಭಾರತ v/s ನ್ಯೂಜಿಲ್ಯಾಂಡ್ ನಡುವಿನ WTC ಫೈನಲ್ ನೋಡುವ ಭಾಗ್ಯ ಆಸ್ಟ್ರೇಲಿಯಾಕ್ಕಿಲ್ಲ

WTC ಫೈನಲ್ ಒಂದು ಪಂದ್ಯದ ಟೂರ್ನಿಯಾಗಿರುವುದರಿಂದ ವಿಶ್ವದಾದ್ಯಂತ ಪ್ರಸಾರ ಮಾಡುವ ಜವಾಬ್ದಾರಿಯನ್ನು ವಹಿಸಿಕೊಂಡಿಲ್ಲ. ಕೇವಲ ಭಾರತ, ಪಾಕಿಸ್ತಾನ,ಬಾಂಗ್ಲಾದೇಶ ಮತ್ತು ಶ್ರೀಲಂಕಾದ ಹಕ್ಕುಗಳನ್ನು ಮಾತ್ರ ಪಡೆದುಕೊಂಡಿದೆ. ಇಂಗ್ಲೆಂಡ್​ನಲ್ಲಿ ಸ್ಕೈಸ್ಪೋರ್ಟ್ಸ್, ದಕ್ಷಿಣ ಆಫ್ರಿಕಾದಲ್ಲಿ ಸೂಪರ್ ಸ್ಪೋರ್ಟ್ಸ್​ ಮತ್ತು ನ್ಯೂಜಿಲ್ಯಾಂಡ್​ನಲ್ಲಿ ಸ್ಕೈ ನೇರ ಪ್ರಸಾರ ಮಾಡಲಿದೆ..

WTC ಫೈನಲ್
WTC ಫೈನಲ್
author img

By

Published : Jun 9, 2021, 9:35 PM IST

ಸಿಡ್ನಿ: ಜೂನ್ 18ರಿಂದ ಪ್ರಾರಂಭವಾಗುವ ಭಾರತ-ನ್ಯೂಜಿಲೆಂಡ್ ನಡುವಿನ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ (WTC)ಪಂದ್ಯಕ್ಕಾಗಿ ಬಹುತೇಕ ಎಲ್ಲ ಕ್ರಿಕೆಟ್​ ಪ್ರೇಮಿ ರಾಷ್ಟ್ರಗಳ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಆದರೆ, ಆಸ್ಟ್ರೇಲಿಯಾ ಅಭಿಮಾನಿಗಳು ಮಾತ್ರ ಈ ಐತಿಹಾಸಿ ಕ್ಷಣವನ್ನು ತಪ್ಪಿಸಿಕೊಳ್ಳಲಿದ್ದಾರೆ. ಏಕೆಂದರೆ, ವಿಶ್ವದ ಅತ್ಯುತ್ತಮ ಟೆಸ್ಟ್ ತಂಡವನ್ನು ನಿರ್ಧರಿಸುವ ಪಂದ್ಯದ ನೇರಪ್ರಸಾರ ಮಾಡುವ ಹಕ್ಕುಗಳನ್ನು ಯಾವುದೇ ಪ್ರಸಾರಕರು ಪಡೆದಿಲ್ಲ ಎಂದು ತಿಳಿದು ಬಂದಿದೆ.

"ಮುಂದಿನ ಶುಕ್ರವಾರದಿಂದ ಸೌತಾಂಪ್ಟನ್‌ನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಪಂದ್ಯವನ್ನು ಆಸ್ಟ್ರೇಲಿಯಾದಲ್ಲಿ ಪ್ರಸಾರ ಮಾಡುವುದಕ್ಕೆ ಪೂರೈಕೆದಾರರನ್ನು ಹುಡುಕಲು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಪರದಾಡುತ್ತಿದೆ" ಎಂದು ಆಸ್ಟ್ರೇಲಿಯಾ ಕ್ರೀಡಾ ವೆಬ್​ಸೈಟ್​ theroar.com.au ವರದಿ ಮಾಡಿದೆ. "ಈ ಹಂತದಲ್ಲಿ WTC ಫೈನಲ್ ಪಂದ್ಯವನ್ನು ಪ್ರಸಾರ ಮಾಡುವ ಹಕ್ಕುಗಳಿಲ್ಲ. ಆದರೆ, ಈ ಕುರಿತು ಚರ್ಚೆಗಳು ನಡೆಯುತ್ತಿವೆ" ಎಂದು ಸ್ಟ್ರೀಮಿಂಗ್ ಪ್ರೊವೈಡರ್​ ಕಾಯೋದ ವಕ್ತಾರರೊಬ್ಬರು ತಿಳಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಐಸಿಸಿ ಮೂಲ, ಪ್ರಸ್ತುತ ಯಾವುದೇ ಒಪ್ಪಂದ ನಡೆದಿಲ್ಲ. ಆದರೆ, ಮುಂದಿನ ದಿನಗಳಲ್ಲಿ ಆಸ್ಟ್ರೇಲಿಯಾದಲ್ಲಿ ನೇರ ಪ್ರಸಾರ ಮಾಡುವ ಒಪ್ಪಂದ ಆಗಲಿದೆ ಎಂಬ ವಿಶ್ವಾಸದಲ್ಲಿ ಐಸಿಸಿ ಇದೆ ಎಂದು ತಿಳಿಸಿದೆ. ಸಾಮಾನ್ಯವಾಗಿ ಐಸಿಸಿ ಬ್ರಾಡ್​ಕಾಸ್ಟ್​ ಪಾಲುದಾರ ಸ್ಟಾರ್​ ಇಂಡಿಯಾ ಜಾಗತಿಕ ಪ್ರಸಾರದ ಜವಾಬ್ದಾರಿ ನಿರ್ವಹಿಸುತ್ತದೆ.

ಆದರೆ, WTC ಫೈನಲ್ ಒಂದು ಪಂದ್ಯದ ಟೂರ್ನಿಯಾಗಿರುವುದರಿಂದ ವಿಶ್ವದಾದ್ಯಂತ ಪ್ರಸಾರ ಮಾಡುವ ಜವಾಬ್ದಾರಿಯನ್ನು ವಹಿಸಿಕೊಂಡಿಲ್ಲ. ಕೇವಲ ಭಾರತ, ಪಾಕಿಸ್ತಾನ,ಬಾಂಗ್ಲಾದೇಶ ಮತ್ತು ಶ್ರೀಲಂಕಾದ ಹಕ್ಕುಗಳನ್ನು ಮಾತ್ರ ಪಡೆದುಕೊಂಡಿದೆ. ಇಂಗ್ಲೆಂಡ್​ನಲ್ಲಿ ಸ್ಕೈಸ್ಪೋರ್ಟ್ಸ್, ದಕ್ಷಿಣ ಆಫ್ರಿಕಾದಲ್ಲಿ ಸೂಪರ್ ಸ್ಪೋರ್ಟ್ಸ್​ ಮತ್ತು ನ್ಯೂಜಿಲ್ಯಾಂಡ್​ನಲ್ಲಿ ಸ್ಕೈ ನೇರ ಪ್ರಸಾರ ಮಾಡಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.