ನವದೆಹಲಿ: ಭಾರತದ ಬಾಕ್ಸರ್ಗಳಾದ ನಿಖಾತ್ ಜರೀನ್ ಮತ್ತು ನೀತು ಬಲ್ಗೇರಿಯಾದ ಸೋಫಿಯಾದಲ್ಲಿ ನಡೆಯುತ್ತಿರುವ 73ನೇ ಸ್ಟ್ರಾಂಡ್ಜಾ ಮೆಮೊರಿಯಲ್ ಬಾಕ್ಸಿಂಗ್ ಟೂರ್ನಮೆಂಟ್ನಲ್ಲಿ ಚಿನ್ನದ ಪದಕ ಜಯಿಸಿದ್ದಾರೆ.
25 ವರ್ಷದ ಜರೀನ್ ಮಾಜಿ ವಿಶ್ವಚಾಂಪಿಯನ್ ಉಕ್ರೇನ್ನ ಕೆ.ತೆಟಿಯಾನ ವಿರುದ್ಧ 4-1 ಅಂಕಗಳ ಅಂತರದಲ್ಲಿ ಜಯ ಸಾಧಿಸಿದರು. ಅವರು ಸೆಮಿಫೈನಲ್ನಲ್ಲಿ ಟೋಕಿಯೋ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಟರ್ಕಿಯ ಬುಸೆ ನಾಜ್ ಜಾಕಿರೋಗ್ಲು ವಿರುದ್ಧ ಜಯ ಸಾಧಿಸಿ ಫೈನಲ್ ತಲುಪಿದ್ದರು.
-
𝐅𝐈𝐑𝐄 𝐇𝐀𝐈…𝐅𝐈𝐑𝐄 🔥🔥
— Boxing Federation (@BFI_official) February 27, 2022 " class="align-text-top noRightClick twitterSection" data="
Second 𝗚𝗼𝗹𝗱 𝗺𝗲𝗱𝗮𝗹🥇comes home! 🇮🇳@nikhat_zareen puts up a fiery display to beat former world championship medallist Ukraine 🇺🇦’s K.Tetiana4️⃣-1️⃣in the final of #StrandjaBoxingTournament2022
Well done, champ! 👏🔝#PunchMeinHaiDum#boxing pic.twitter.com/otNye4NsGx
">𝐅𝐈𝐑𝐄 𝐇𝐀𝐈…𝐅𝐈𝐑𝐄 🔥🔥
— Boxing Federation (@BFI_official) February 27, 2022
Second 𝗚𝗼𝗹𝗱 𝗺𝗲𝗱𝗮𝗹🥇comes home! 🇮🇳@nikhat_zareen puts up a fiery display to beat former world championship medallist Ukraine 🇺🇦’s K.Tetiana4️⃣-1️⃣in the final of #StrandjaBoxingTournament2022
Well done, champ! 👏🔝#PunchMeinHaiDum#boxing pic.twitter.com/otNye4NsGx𝐅𝐈𝐑𝐄 𝐇𝐀𝐈…𝐅𝐈𝐑𝐄 🔥🔥
— Boxing Federation (@BFI_official) February 27, 2022
Second 𝗚𝗼𝗹𝗱 𝗺𝗲𝗱𝗮𝗹🥇comes home! 🇮🇳@nikhat_zareen puts up a fiery display to beat former world championship medallist Ukraine 🇺🇦’s K.Tetiana4️⃣-1️⃣in the final of #StrandjaBoxingTournament2022
Well done, champ! 👏🔝#PunchMeinHaiDum#boxing pic.twitter.com/otNye4NsGx
ಮಾಜಿ ಜೂನಿಯರ್ ವಿಶ್ವ ಚಾಂಪಿಯನ್ ನಿಖಾತ್ ಯುರೋಪ್ನ ಅತ್ಯಂತ ಹಳೆಯ ಅಂತಾರಾಷ್ಟ್ರೀಯ ಬಾಕ್ಸಿಂಗ್ ಟೂರ್ನಮೆಂಟ್ನಲ್ಲಿ ಗೆದ್ದ 2ನೇ ಚಿನ್ನದ ಪದಕವಾಗಿದೆ. ಅವರು 2019ರ ಆವೃತ್ತಿಯಲ್ಲಿ ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದರು.
ನೀತು 48 ಕೆಜಿ ವಿಭಾಗದಲ್ಲಿ ಹಾಲಿ ಯೂತ್ ವಿಶ್ವಚಾಂಪಿಯನ್ಶಿಪ್ ಕಂಚಿನ ಪದಕ ವಿಜೇತೆ ಇಟಲಿಯ ಎರಿಕಾ ಪ್ರಿಸಿಯಾಂಡ್ರೊ ವಿರುದ್ಧ 5-0 ಬಾಟ್ಗಳ ಅಂತರದಲ್ಲಿ ಗೆದ್ದು ಸ್ವರ್ಣಕ್ಕೆ ಮುತ್ತಿಕ್ಕಿದರು.
81+ ಕೆಜಿ ವಿಭಾಗದಲ್ಲಿ ನಂದಿನಿ ಕಂಚಿನ ಪದಕ ಪಡೆದರು. ಭಾರತದ ಬಾಕ್ಸಿಂಗ್ ತಂಡ ಈ ವರ್ಷದ ಮೊದಲ ಟೂರ್ನೆಮೆಂಟ್ನಲ್ಲಿ 3 ಪದಕಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದೆ.
ಇದನ್ನೂ ಓದಿ:ಕೆಕೆಆರ್-ಸಿಎಸ್ಕೆ ನಡುವೆ ಐಪಿಎಲ್ ಉದ್ಘಾಟನಾ ಪಂದ್ಯ: ಶೇ.25 ರಷ್ಟು ಪ್ರೇಕ್ಷಕರಿಗೆ ಅಸ್ತು ಎಂದ 'ಮಹಾ'ಸರ್ಕಾರ