ETV Bharat / sports

ನ್ಯೂಜಿಲ್ಯಾಂಡ್ ಮಹಿಳಾ ಕ್ರಿಕೆಟ್​ ತಂಡಕ್ಕೆ ಬಾಂಬ್​ ಬೆದರಿಕೆ ಕರೆ

ನಿರ್ದಿಷ್ಟವಾಗಿ ನ್ಯೂಜಿಲ್ಯಾಂಡ್ ಮಹಿಳಾ ಕ್ರಿಕೆಟ್ ತಂಡವನ್ನೇ ಉಲ್ಲೇಖಿಸದಿದ್ದರೂ ಈ ಬೆದರಿಕೆ ಕರೆಯನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ನ್ಯೂಜಿಲ್ಯಾಂಡ್​ ತಂಡ ಹೇಳಿದೆ. ಈ ಬಗ್ಗೆ ತನಿಖೆ ನಡೆಸಿ ಇದೊಂದು ನಂಬಲಾರ್ಹವಲ್ಲ ಎಂಬ ತೀರ್ಮಾನಕ್ಕೂ ಬರಲಾಗಿದೆ.

http://10.10.50.85//karnataka/21-September-2021/fc738c78-2d58-436b-930b-7da06ebb3cb4_ixbh6in20210921015520_2109newsroom_1632193836_588.jpg

author img

By

Published : Sep 21, 2021, 9:04 AM IST

ಆಕ್ಲೆಂಡ್ (ನ್ಯೂಜಿಲ್ಯಾಂಡ್): ನ್ಯೂಜಿಲ್ಯಾಂಡ್​ನ ಮಹಿಳಾ ಕ್ರಿಕೆಟ್​ ತಂಡಕ್ಕೆ ಬಾಂಬ್​ ಬೆದರಿಕೆ ಕರೆ ಬಂದಿದೆ. ಈ ಸಂಬಂಧದ ಬೆದರಿಕೆ ಇಮೇಲ್ ಬಂದಿರುವುದನ್ನು ನ್ಯೂಜಿಲ್ಯಾಂಡ್ ಕ್ರಿಕೆಟ್ ತಂಡವೇ (NZC) ದೃಢಪಡಿಸಿದೆ.

ನಿರ್ದಿಷ್ಟವಾಗಿ ನ್ಯೂಜಿಲ್ಯಾಂಡ್ ಮಹಿಳಾ ಕ್ರಿಕೆಟ್ ತಂಡವನ್ನೇ ಉಲ್ಲೇಖಿಸದಿದ್ದರೂ ಈ ಬೆದರಿಕೆ ಕರೆಯನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ನ್ಯೂಜಿಲ್ಯಾಂಡ್​ ತಂಡ ಹೇಳಿದೆ. ಈ ಬಗ್ಗೆ ತನಿಖೆ ನಡೆಸಿ ಇದೊಂದು ನಂಬಲಾರ್ಹವಲ್ಲ ಎಂಬ ತೀರ್ಮಾನಕ್ಕೂ ಬರಲಾಗಿದೆ.

ಇದು ಏನೇ ಆದರೂ ಲಿಸೇಸ್ಟರ್​​ ನಲ್ಲಿ ಬಿಗಿ ಭದ್ರತೆ ಒದಗಿಸಲಾಗಿದೆ ಎಂದು ನ್ಯೂಜಿಲ್ಯಾಂಡ್​ ಕ್ರಿಕೆಟ್​ ಹೇಳಿದೆ. ಕ್ರೀಡಾ ಮಾಧ್ಯಮವೊಂದರ ಪ್ರಕಾರ, ನ್ಯೂಜಿಲ್ಯಾಂಡ್​​​​ ತಂಡದ ಮ್ಯಾನೇಜ್​ಮೆಂಟ್​ ಸದಸ್ಯರನ್ನ ಸಂಪರ್ಕಿಸಿದ ಅನಾಮಧೇಯರು, ತಂಡ ಉಳಿದುಕೊಂಡಿರುವ ಹೋಟೆಲ್​ನಲ್ಲಿ ಬಾಂಬ್​ ಇರಿಸಲಾಗಿದೆ ಎಂಬ ಮಾಹಿತಿ ನೀಡಿದ್ದರು. ಅಷ್ಟೇ ಅಲ್ಲ ನೀವು ಪ್ರಯಾಣ ಬೆಳಸುವ ವಿಮಾನದಲ್ಲೂ ಬಾಂಬ್​ ಇರಿಸುವುದಾಗಿಯೂ ಬೆದರಿಸಲಾಗಿತ್ತು ಎಂದು ವರದಿಯಾಗಿದೆ.

ಈ ಬೆದರಿಕೆ ಕರೆ ಬಗ್ಗೆ ಮಂಡಳಿ ಪೊಲೀಸರು ಮತ್ತು ಭಯೋತ್ಪಾದನಾ ನಿಗ್ರಹ ದಳಕ್ಕೆ ಮಾಹಿತಿ ಮುಟ್ಟಿಸಿದೆ. ಈ ಬಗ್ಗೆ ತನಿಖೆ ಮುಂದುವರೆದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.