ಕ್ವೀನ್ಸ್ಟೌನ್(ನ್ಯೂಜಿಲ್ಯಾಂಡ್): ಮುಂದಿನ ತಿಂಗಳಿಂದ ಆರಂಭವಾಗಲಿರುವ ಮಹಿಳಾ ಏಕದಿನ ವಿಶ್ವಕಪ್ ಕ್ರಿಕೆಟ್‌ಗೆ ಮುಂಚಿತವಾಗಿ ವಿವಿಧ ದೇಶಗಳ ತಂಡಗಳು ಅಭ್ಯಾಸದಲ್ಲಿ ತೊಡಗಿವೆ. ಇದರ ಭಾಗವಾಗಿ, ನ್ಯೂಜಿಲೆಂಡ್ ವಿರುದ್ಧದ ಮಹತ್ವದ ಸರಣಿಯಲ್ಲಿ ಭಾರತೀಯ ಮಹಿಳೆಯರ ತಂಡ ಭಾಗಿಯಾಗಿದ್ದು, ಇಂದು ಮೊದಲ ಮತ್ತು ಏಕೈಕ ಟಿ-20 ಪಂದ್ಯದಲ್ಲಿ 18 ರನ್ಗಳ ಅಂತರದಲ್ಲಿ ಸೋಲು ಕಂಡಿತು.
ಕ್ವೀನ್ಸ್ಟೌನ್ನ ಜಾನ್ ಡೇವಿಸ್ ಓವಲ್ ಕ್ರೀಡಾಂಗಣದಲ್ಲಿ ಪಂದ್ಯ ನಡೆದಿದ್ದು, ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಭಾರತೀಯ ವನಿತೆಯರ ತಂಡಕ್ಕೆ ನ್ಯೂಜಿಲ್ಯಾಂಡ್ 155 ರನ್ಗಳ ಗುರಿ ನೀಡಿತು. ತಂಡದ ಪರವಾಗಿ ಸುಜಿ ಬೇಟ್ಸ್ 36, ಸೋಫಿ ಡಿವೈನ್ 31, ಅಮೇಲಿಯಾ ಕೆರ್ 17, ಮ್ಯಾಡಿ ಗ್ರೀನ್ 26, ಬ್ರೂಕ್ ಹಲ್ಲಿಡೆ 27 ರನ್ಗಳ ಕೊಡುಗೆ ನೀಡಿದರು.
ಈ ವೇಳೆ, ಭಾರತೀಯ ವನಿತೆಯರು ಕೇವಲ 5 ವಿಕೆಟ್ ಪಡೆಯಲಷ್ಟೇ ಶಕ್ತರಾದರು. ಪೂಜಾ ವಸ್ತ್ರಾಕರ್, ದೀಪ್ತಿ ಶರ್ಮ ತಲಾ ಎರಡು ವಿಕೆಟ್ ಪಡೆದರೆ, ರಾಜೇಶ್ವರಿ ಗಾಯಕ್ವಾಡ್ 1 ವಿಕೆಟ್ ಪಡೆದರು.
-
A great start in Queenstown! The team win the one off @kfcnz T20 against India with a strong all round showing. The Kerr sisters and Hayley Jensen each picking up 2 wickets in defending the total. Scorecard | https://t.co/FwwfhYWJPd #NZvIND pic.twitter.com/hExAyX47r7
— WHITE FERNS (@WHITE_FERNS) February 9, 2022 " class="align-text-top noRightClick twitterSection" data="
">A great start in Queenstown! The team win the one off @kfcnz T20 against India with a strong all round showing. The Kerr sisters and Hayley Jensen each picking up 2 wickets in defending the total. Scorecard | https://t.co/FwwfhYWJPd #NZvIND pic.twitter.com/hExAyX47r7
— WHITE FERNS (@WHITE_FERNS) February 9, 2022A great start in Queenstown! The team win the one off @kfcnz T20 against India with a strong all round showing. The Kerr sisters and Hayley Jensen each picking up 2 wickets in defending the total. Scorecard | https://t.co/FwwfhYWJPd #NZvIND pic.twitter.com/hExAyX47r7
— WHITE FERNS (@WHITE_FERNS) February 9, 2022
ನ್ಯೂಜಿಲ್ಯಾಂಡ್ ನೀಡಿದ 155 ರನ್ ಗುರಿ ಬೆನ್ನತ್ತಿದ್ದ ಭಾರತ 8 ವಿಕೆಟ್ ವಿಕೆಟ್ ನಷ್ಟಕ್ಕೆ 137 ರನ್ ಮಾತ್ರ ಗಳಿಸಿತು. ಯಸ್ತಿಕಾ ಭಾಟಿಯಾ 26, ಶಫಾಲಿ ವರ್ಮಾ 13, ಹರ್ಮನ್ಪ್ರೀತ್ ಕೌರ್ 12, ಎಸ್.ಮೇಘನಾ 37, ರೀಚಾ ಘೋಷ್ 12, ಸ್ನೇಹ್ ರಾಣಾ 6, ಪೂಜಾ ವಸ್ತ್ರಾಕರ್ 10, ಸಿಮ್ರಾನ್ ಬಹದ್ದೂರ್ 10 ರನ್ ಗಳಿಸಿದರು.
ಇದನ್ನೂ ಓದಿ: ರಾಹುಲ್ ಕಮ್ಬ್ಯಾಕ್ : ವಿಂಡೀಸ್ ವಿರುದ್ಧ 2ನೇ ಏಕದಿನ ಪಂದ್ಯ ಗೆದ್ದು ಸರಣಿ ವಶಪಡಿಸಿಕೊಳ್ಳುವತ್ತ ಭಾರತ ಚಿತ್ತ
ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ಅತ್ಯುತ್ತಮ ಬೌಲಿಂಗ್ ಮೂಲಕ ಗಮನ ಸೆಳೆಯಿತು. ಜೆಸ್ ಕೆರ್, ಅಮೇಲಿಯಾ ಕೆರ್, ಹರ್ಲೆ ಜೆನ್ಸನ್ ತಲಾ ಎರಡು ವಿಕೆಟ್ ಪಡೆದರೆ, ಸೋಫಿ ಡಿವೈನ್, ತುಹುಹು ತಲಾ ಒಂದು ವಿಕೆಟ್ ಪಡೆದರು.
ಟಿ-20 ನಂತರ 5 ಏಕದಿನ ಪಂದ್ಯಗಳನ್ನು ಟೀಂ ಇಂಡಿಯಾ ನ್ಯೂಜಿಲ್ಯಾಂಡ್ನೊಂದಿಗೆ ಆಡಲಿದೆ. ಮೊದಲ ಏಕದಿನ ಪಂದ್ಯ ಫೆಬ್ರವರಿ 12ರಂದು ನಡೆಯಲಿದೆ.