ನ್ಯೂಜಿಲ್ಯಾಂಡ್ : ಮಳೆಯಿಂದಾಗಿ ತಡವಾಗಿ ಆರಂಭವಾದ 4ನೇ ಏಕದಿನ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ವನಿತೆಯರು ರನ್ ಮಳೆ ಸುರಿಸಿ ಭಾರತ ವನಿತೆಯರ ವಿರುದ್ಧ 63 ರನ್ಗಳ ಭರ್ಜರಿ ಜಯ ಸಾಧಿಸಿದ್ದಾರೆ. 5 ಪಂದ್ಯಗಳ ಸರಣಿಯಲ್ಲಿ ನ್ಯೂಜಿಲ್ಯಾಂಡ್ ತಂಡ ಸಾರ್ವಭೌಮ ಸಾಧಿಸಿ 4-0 ಅಂತರದಲ್ಲಿ ಮುನ್ನಡೆ ಪಡೆದಿದೆ.
ಕ್ವೀನ್ಸ್ಟೌನ್ನಲ್ಲಿ ನಡೆದ 4ನೇ ಏಕದಿನ ಪಂದ್ಯಕ್ಕೆ ವರುಣ ಅಡ್ಡಿಪಡಿಸಿದ ಕಾರಣ 20 ಓವರ್ಗೆ ಕಡಿತ ಮಾಡಲಾಯಿತು. ಏಕದಿನ ಪಂದ್ಯ ಟಿ-20 ಯಾಗಿ ಮಾರ್ಪಟ್ಟು ನ್ಯೂಜಿಲ್ಯಾಂಡ್ ವನಿತೆಯರು ಭಾರತ ವನಿತೆಯರ ಮೇಲೆ ಸವಾರಿ ಮಾಡಿದರು.
-
New Zealand win the fourth ODI against India by 63 runs 👏
— ICC (@ICC) February 22, 2022 " class="align-text-top noRightClick twitterSection" data="
The hosts take a 4-0 lead in the five-match series.#NZvIND pic.twitter.com/C41X4Rk1gt
">New Zealand win the fourth ODI against India by 63 runs 👏
— ICC (@ICC) February 22, 2022
The hosts take a 4-0 lead in the five-match series.#NZvIND pic.twitter.com/C41X4Rk1gtNew Zealand win the fourth ODI against India by 63 runs 👏
— ICC (@ICC) February 22, 2022
The hosts take a 4-0 lead in the five-match series.#NZvIND pic.twitter.com/C41X4Rk1gt
ಬ್ಯಾಟಿಂಗ್ ಆರಂಭಿಸಿದ ನಾಯಕಿ ಎಸ್.ಡೆವೈನ್(32) ಮತ್ತು ಬೇಟ್ಸ್(41) ಮೊದಲ ವಿಕೆಟ್ ಜೊತೆಯಾಟದಲ್ಲಿ 53 ರನ್ ಚಚ್ಚಿದರು. ಬಳಿಕ ಬಂದ ಅಮೇಲಿಯಾ ಕೆರ್ 33 ಎಸೆತಗಳಲ್ಲಿ 68 ರನ್ ಸಿಡಿಸಿದರು. ಇದರಲ್ಲಿ ಭರ್ಜರಿ 11 ಬೌಂಡರಿ ಮತ್ತು 1 ಸಿಕ್ಸರ್ಗಳಿದ್ದವು.
ಇದಲ್ಲದೇ, ಸೆಟ್ಟರ್ಥ್ವೇಟ್ 3 ಬೌಂಡರಿ 2 ಸಿಕ್ಸರ್ಗಳ ಸಮೇತ 32 ರನ್ ಬಾರಿಸಿದರು. ತಂಡ ಅಂತಿಮವಾಗಿ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 191 ರನ್ ಗಳಿಸಿತು.
ದುಬಾರಿ ಬೌಲಿಂಗ್ : ಇನ್ನು ಭಾರತದ ವನಿತೆಯರ ಬೌಲಿಂಗ್ ಮೊನಚು ಕಳೆದುಕೊಂಡಿದ್ದು, ನ್ಯೂಜಿಲ್ಯಾಂಡ್ ಬೃಹತ್ ಮೊತ್ತ ಕಲೆ ಹಾಕಿತು. ದೀಪ್ತಿ ಶರ್ಮಾ, ಮೇಘನಾ ಸಿಂಗ್ ತಲಾ 1, ರೇಣುಕಾ ಸಿಂಗ್ 2 ವಿಕೆಟ್ ಪಡೆದರೂ ದುಬಾರಿಯಾದರು.
ಭಾರತ ವನಿತೆಯರ ಪೆವಿಲಿಯನ್ ಪರೇಡ್ : ಇನ್ನು ಬೃಹತ್ ಮೊತ್ತ ಬೆಂಬತ್ತಿದ ಭಾರತದ ವನಿತೆಯರು ಒಂದರ ಹಿಂದೆ ಒಂದು ವಿಕೆಟ್ ಕಳೆದುಕೊಂಡು ಪೆವಿಲಿಯನ್ ಪರೇಡ್ ನಡೆಸಿದರು. ಭಾರತದ ಭರವಸೆಯ ಬ್ಯಾಟರ್ ಸ್ಮೃತಿ ಮಂದಾನಾ 13 ರನ್ ಗಳಿಸಿ ಡಗ್ಔಟ್ ಸೇರಿದರು. ಬಳಿಕ ದಿಢೀರ್ ಕುಸಿತ ಕಂಡ ಭಾರತ, 19 ರನ್ ಗಳಿಸುವಷ್ಟರಲ್ಲಿ ಪ್ರಮುಖ 4 ವಿಕೆಟ್ ಕಳೆದುಕೊಂಡಿತು.
ಈ ವೇಳೆ ಕ್ರೀಸ್ಗಿಳಿದ ನಾಯಕಿ ಮಿಥಾಲಿ ರಾಜ್(30) ಮತ್ತು ವಿಕೆಟ್ ಕೀಪರ್ ರಿಚಾ ಘೋಷ್ರ ಹೊಡಿಬಡಿ ಆಟದಿಂದಾಗಿ ಭಾರತ 100ರ ಗಡಿ ದಾಟಿತು. ಈ ಇಬ್ಬರು ಔಟಾದ ಬಳಿಕ ಭಾರತ ಮತ್ತೆ ದಿಢೀರ್ ಕುಸಿದು 17.5 ಓವರ್ಗಳಲ್ಲಿ 128 ರನ್ ಗಳಿಸಲಷ್ಟೇ ಶಕ್ತವಾಗಿ ಮತ್ತೊಂದು ಸೋಲು ಅನುಭವಿಸಿತು. ಭಾರತದ 4 ಬ್ಯಾಟರ್ಗಳು ಸೊನ್ನೆ ಸುತ್ತಿದರೆ, ಇನ್ನು ನಾಲ್ವರು ಒಂದಂಕಿ ಮೊತ್ತದಲ್ಲಿ ಔಟಾಗಿದ್ದು ಭಾರತದ ಬ್ಯಾಟಿಂಗ್ ವೈಫಲ್ಯಕ್ಕೆ ಸಾಕ್ಷಿಯಾಗಿತ್ತು.
-
Richa Ghosh brings up the fastest fifty by an Indian batter in Women's ODI 🔥
— ICC (@ICC) February 22, 2022 " class="align-text-top noRightClick twitterSection" data="
She needed just 26 balls to reach the milestone 👏
Watch all the #NZvIND action LIVE or on-demand on https://t.co/CPDKNxoJ9v (in select regions) 📺 pic.twitter.com/ad34maGg4A
">Richa Ghosh brings up the fastest fifty by an Indian batter in Women's ODI 🔥
— ICC (@ICC) February 22, 2022
She needed just 26 balls to reach the milestone 👏
Watch all the #NZvIND action LIVE or on-demand on https://t.co/CPDKNxoJ9v (in select regions) 📺 pic.twitter.com/ad34maGg4ARicha Ghosh brings up the fastest fifty by an Indian batter in Women's ODI 🔥
— ICC (@ICC) February 22, 2022
She needed just 26 balls to reach the milestone 👏
Watch all the #NZvIND action LIVE or on-demand on https://t.co/CPDKNxoJ9v (in select regions) 📺 pic.twitter.com/ad34maGg4A
ಭಾರತದ ರಿಚಾ ಘೋಷ್ ಸ್ಪೀಡ್ ಫಿಫ್ಟಿ: 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಇಳಿದ ವಿಕೆಟ್ ಕೀಪರ್ ರಿಚಾ ಘೋಷ್ ನ್ಯೂಜಿಲ್ಯಾಂಡ್ ವನಿತೆಯರ ಬೌಲಿಂಗ್ ಪಡೆಯನ್ನು ಛಿದ್ರ ಮಾಡಿದರು. ಕೇವಲ 29 ಎಸೆತಗಳಲ್ಲಿ 52 ರನ್ ಸಿಡಿಸಿ ಏಕದಿನ ಪಂದ್ಯದಲ್ಲಿ ವೇಗದ ಅರ್ಧಶತಕ ಸಿಡಿಸಿದ ಗೌರವಕ್ಕೆ ಭಾಜನರಾದರು. ಇವರ ಇನ್ನಿಂಗ್ಸ್ನಲ್ಲಿ 4 ಸಿಕ್ಸ್, 4 ಬೌಂಡರಿಗಳಿದ್ದವು.
ನ್ಯೂಜಿಲ್ಯಾಂಡ್ ಪರ ಬ್ಯಾಟಿಂಗ್ನಲ್ಲಿ ಮಿಂಚಿದ್ದ ಅಮೇಲಿಯಾ ಕೆರ್ ಬೌಲಿಂಗ್ನಲ್ಲಿ 3 ವಿಕೆಟ್ ಪಡೆದರೆ, ಹೈಲೈ ಜಾನಸನ್ 3, ಫ್ರಾನ್ಸಸ್ ಮೆಕ್ಕೇ 2, ಜೆಸ್ ಕೆರ್ 2 ವಿಕೆಟ್ ಪಡೆದು ಭಾರತದ ಬ್ಯಾಟಿಂಗ್ ಬೆನ್ನೆಲುಬು ಮುರಿದರು.