ಪುಣೆ (ಮಹಾರಾಷ್ಟ್ರ): ನಡೆಯುತ್ತಿರುವ ವಿಶ್ವಕಪ್ನಲ್ಲಿ ಮೊದಲ ಇನ್ನಿಂಗ್ಸ್ನಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸುತ್ತ ಬಂದಿರುವ ದಕ್ಷಿಣ ಆಫ್ರಿಕಾ ಇಂದು ನ್ಯೂಜಿಲೆಂಡ್ ಎದುರು ದೊಡ್ಡ ಮೊತ್ತವನ್ನು ಕಲೆಹಾಕಿದೆ. ಕ್ವಿಂಟನ್ ಡಿ ಕಾಕ್ ಮತ್ತು ರಾಸ್ಸಿ ವ್ಯಾನ್ ಡೆರ್ ಡುಸ್ಸೆನ್ ಆಡಿದ ಶತಕದ ಇನ್ನಿಂಗ್ಸ್ ಬಲದಿಂದ ಹರಿಣಗಳು ನಿಗದಿತ ಓವರ್ ಅಂತ್ಯಕ್ಕೆ 4 ವಿಕೆಟ್ ನಷ್ಟಕ್ಕೆ 357 ರನ್ ಗಳಿಸಿದ್ದಾರೆ. ಸೆಮೀಸ್ ಸ್ಥಾನವನ್ನು ಉಳಿಸಿಕೊಳ್ಳಲು ಉಭಯ ತಂಡಗಳಿಗೆ ಈ ಪಂದ್ಯದ ಗೆಲುವು ಮುಖ್ಯವಾಗಿದೆ. ದಕ್ಷಿಣ ಆಫ್ರಿಕಾ ಪಂದ್ಯ ಗೆದ್ದಲ್ಲಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯಲಿದೆ.
-
🔄 Change Of Innings
— Proteas Men (@ProteasMenCSA) November 1, 2023 " class="align-text-top noRightClick twitterSection" data="
Rassie van der Dussen (133) & Quinton de Kock(114) led a batting exhibition from the Proteas 🇿🇦🏏
Some ferocious hitting from David Miller in the last 10 overs ensured the Proteas reach 357/4
🇳🇿 need 358 runs to win #NZvSA #BePartOfIt #CWC23 pic.twitter.com/5ya5RBL1zh
">🔄 Change Of Innings
— Proteas Men (@ProteasMenCSA) November 1, 2023
Rassie van der Dussen (133) & Quinton de Kock(114) led a batting exhibition from the Proteas 🇿🇦🏏
Some ferocious hitting from David Miller in the last 10 overs ensured the Proteas reach 357/4
🇳🇿 need 358 runs to win #NZvSA #BePartOfIt #CWC23 pic.twitter.com/5ya5RBL1zh🔄 Change Of Innings
— Proteas Men (@ProteasMenCSA) November 1, 2023
Rassie van der Dussen (133) & Quinton de Kock(114) led a batting exhibition from the Proteas 🇿🇦🏏
Some ferocious hitting from David Miller in the last 10 overs ensured the Proteas reach 357/4
🇳🇿 need 358 runs to win #NZvSA #BePartOfIt #CWC23 pic.twitter.com/5ya5RBL1zh
ಕಳೆದ 7 ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕಾ ಮೊದಲು ಬ್ಯಾಟಿಂಗ್ ಮಾಡಿದಾಗ 300ರ ಗಡಿ ದಾಟಿ ರನ್ ಕಲೆಹಾಕಿದೆ. ಹರಿಣಗಳು ರನ್ನ ಒತ್ತಡ ಇಲ್ಲದಿದ್ದಾಗ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಈ ಪಂದ್ಯದಲ್ಲೂ ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿದ ತಂಡ ಉತ್ತಮ ಆರಂಭವನ್ನು ಪಡೆಯದಿದ್ದರೂ, ನಂತರ ದೊಡ್ಡ ಮೊತ್ತವನ್ನೇ ಪೇರಿಸಿದೆ. ದಕ್ಷಿಣ ಆಫ್ರಿಕಾ ತಂಡದ ನಾಯಕ ತೆಂಬಾ ಬವುಮಾ ನಡೆಯುತ್ತಿರುವ ವಿಶ್ವಕಪ್ನಲ್ಲಿ ಸತತ ವೈಫಲ್ಯತೆ ಎದುರಿಸುತ್ತಿದ್ದಾರೆ. ಈ ಪಂದ್ಯದಲ್ಲೂ 24ರನ್ಗೆ ಅವರ ಇನ್ನಿಂಗ್ಸ್ ಮುಕ್ತಾಯವಾಗಿತ್ತು.
-
𝙀𝙥 4: 𝙏𝙝𝙚 𝙌𝙪𝙞𝙣𝙣𝙮 𝙎𝙝𝙤𝙬
— Proteas Men (@ProteasMenCSA) November 1, 2023 " class="align-text-top noRightClick twitterSection" data="
A 4️⃣th century for Quinton de Kock in this #CWC23 🇿🇦💯
We are running out of superlatives 😲#NZvSA #CWC23 #BePartOfIt pic.twitter.com/aMKiya8FAr
">𝙀𝙥 4: 𝙏𝙝𝙚 𝙌𝙪𝙞𝙣𝙣𝙮 𝙎𝙝𝙤𝙬
— Proteas Men (@ProteasMenCSA) November 1, 2023
A 4️⃣th century for Quinton de Kock in this #CWC23 🇿🇦💯
We are running out of superlatives 😲#NZvSA #CWC23 #BePartOfIt pic.twitter.com/aMKiya8FAr𝙀𝙥 4: 𝙏𝙝𝙚 𝙌𝙪𝙞𝙣𝙣𝙮 𝙎𝙝𝙤𝙬
— Proteas Men (@ProteasMenCSA) November 1, 2023
A 4️⃣th century for Quinton de Kock in this #CWC23 🇿🇦💯
We are running out of superlatives 😲#NZvSA #CWC23 #BePartOfIt pic.twitter.com/aMKiya8FAr
ಡಿ ಕಾಕ್, ಡುಸ್ಸೆನ್ ದ್ವಿಶತಕದ ಜೊತೆಯಾಟ: ಎರಡನೇ ವಿಕೆಟ್ಗೆ ಒಂದಾದ ಕ್ವಿಂಟನ್ ಡಿ ಕಾಕ್ ಮತ್ತು ರಾಸ್ಸಿ ವ್ಯಾನ್ ಡೆರ್ ಡುಸ್ಸೆನ್ ಅವರು ಕಿವೀಸ್ ತಂಡ ಪ್ರಬಲ ಬೌಲಿಂಗ್ ದಾಳಿಯನ್ನು ತಾಳ್ಮೆಯಿಂದ ಎದುರಿಸಿದರು. ಮೊದಲ ಪವರ್ ಪ್ಲೇ ಅಂತ್ಯಕ್ಕೆ ತಂಡ 1 ವಿಕೆಟ್ ಕಳೆದುಕೊಂಡು 47 ರನ್ ಮಾತ್ರ ಗಳಿಸಿತ್ತು. 20 ಓವರ್ ವೇಳೆಗೆ ಈ ಇಬ್ಬರೂ ಬ್ಯಾಟರ್ಗಳು ಸೆಟ್ ಆಗಿ ನಿಂತಿದ್ದರೂ ರನ್ ಕದಿಯುವಲ್ಲಿ ವಿಫಲರಾದರು. ಇಬ್ಬರು ಬ್ಯಾಟರ್ಗಳು 100ರ ಕ್ಕಿಂತ ಕಡಿಮೆ ಸ್ಟ್ರೈಕ್ ರೇಟ್ನಲ್ಲಿ ಬ್ಯಾಟ್ ಬೀಸುತ್ತಿದ್ದರು. ಉಭಯ ಬ್ಯಾಟರ್ಗಳು ಶತಕ ಮಾಡಿಕೊಂಡು ದ್ವಿಶತಕದ ಪಾಲುದಾರಿಕೆಯನ್ನು ಹಂಚಿಕೊಂಡರು.
-
HATS OFF TO RASSIE 👏
— Proteas Men (@ProteasMenCSA) November 1, 2023 " class="align-text-top noRightClick twitterSection" data="
Some classy display with the bat from Rassie van der Dussen to reach a 💯
This is century number 2️⃣ in the #CWC23 🇿🇦#NZvSA #BePartOfIt pic.twitter.com/mHUO26Hr4P
">HATS OFF TO RASSIE 👏
— Proteas Men (@ProteasMenCSA) November 1, 2023
Some classy display with the bat from Rassie van der Dussen to reach a 💯
This is century number 2️⃣ in the #CWC23 🇿🇦#NZvSA #BePartOfIt pic.twitter.com/mHUO26Hr4PHATS OFF TO RASSIE 👏
— Proteas Men (@ProteasMenCSA) November 1, 2023
Some classy display with the bat from Rassie van der Dussen to reach a 💯
This is century number 2️⃣ in the #CWC23 🇿🇦#NZvSA #BePartOfIt pic.twitter.com/mHUO26Hr4P
ವಿಶ್ವಕಪ್ನಲ್ಲಿ ಡಿ ಕಾಕ್ 4ನೇ, ಡುಸೆನ್ 2ನೇ ಶತಕ: ನಡೆಯುತ್ತಿರುವ ವಿಶ್ವಕಪ್ನಲ್ಲಿ ಉತ್ತಮ ಫಾರ್ಮ್ನಲ್ಲಿರುವ ಕ್ವಿಂಟನ್ ಡಿ ಕಾಕ್ ತಮ್ಮ ನಾಲ್ಕನೇ ಶತಕವನ್ನು ದಾಖಲಿಸಿದರು. ಇನ್ನಿಂಗ್ಸ್ನಲ್ಲಿ 116 ಬಾಲ್ ಎದುರಿಸಿದ ಅವರು 10 ಬೌಂಡರಿ, 3 ಸಿಕ್ಸ್ನಿಂದ 114 ರನ್ ಕಲೆಹಾಕಿದರು. 3ನೇ ವಿಕೆಟ್ಗೆ ಬಂದ ರಾಸ್ಸಿ ವ್ಯಾನ್ ಡೆರ್ ಡುಸ್ಸೆನ್ 118 ಬಾಲ್ ಎದುರಿಸಿ 9 ಬೌಂಡರಿ, 5 ಸಿಕ್ಸ್ನ ನೆರವಿನಿಂದ 133 ರನ್ ಗಳಿಸಿ ವಿಕೆಟ್ ಕೊಟ್ಟರು.
- " class="align-text-top noRightClick twitterSection" data="">
ಡೇವಿಡ್ ಮಿಲ್ಲರ್ ಅರ್ಧಶತಕ: ಕೊನೆಯ 10 ಓವರ್ ಬಾಕಿ ಇದ್ದಾಗ ಬ್ಯಾಟಿಂಗ್ಗೆ ಇಳಿದ ಬಿರುಸಿನ ಆಟಗಾರ ಮಿಲ್ಲರ್ ಅಬ್ಬರಕ್ಕೆ ಮುಂದಾದರು. 30 ಬಾಲ್ ಎದುರಿಸಿದ ಮಿಲ್ಲರ್ 2 ಬೌಂಡರಿ ಮತ್ತು 4 ಸಿಕ್ಸ್ನ ನೆರವಿನಿಂದ 53 ರನ್ ಕಲೆಹಾಕಿ ಇನ್ನಿಂಗ್ಸ್ನ ಕೊನೆ ಬಾಲ್ಗೂ ಮುನ್ನ ವಿಕೆಟ್ ಒಪ್ಪಿಸಿದರು. ಮೂವರ ಇನ್ನಿಂಗ್ಸ್ನಿಂದ ದಕ್ಷಿಣ ಆಫ್ರಿಕಾ 50 ಓವರ್ಗೆ 4 ವಿಕೆಟ್ ಕಳೆದುಕೊಂಡು 357 ರನ್ ಗಳಿಸಿತು. ಕಿವೀಸ್ ಪರ್ ಟಿಮ್ ಸೌಥಿ 2 ಮತ್ತು ಜೇಮ್ಸ್ ನೀಶಮ್, ಟ್ರೆಂಟ್ ಬೌಲ್ಟ್ ತಲಾ ಒಂದೊಂದು ವಿಕೆಟ್ ಪಡೆದರು.
ಇದನ್ನೂ ಓದಿ: ಪಾಕ್-ಬಾಂಗ್ಲಾ ಪಂದ್ಯದ ವೇಳೆ ಪ್ಯಾಲೆಸ್ಟೈನ್ ಪರ ಬಾವುಟ ಪ್ರದರ್ಶಿಸಿದ ನಾಲ್ವರ ಬಂಧನ, ಬಿಡುಗಡೆ