ETV Bharat / sports

ಪಾಕಿಸ್ತಾನಕ್ಕೆ ಮತ್ತೆ ಮುಖಭಂಗ: ಭದ್ರತಾ ಕಾರಣಕ್ಕೆ ನ್ಯೂಜಿಲ್ಯಾಂಡ್‌-ಪಾಕ್‌ ಕ್ರಿಕೆಟ್‌ ಸರಣಿ ರದ್ದು - ನ್ಯೂಜಿಲ್ಯಾಂಡ್​ ತಂಡ

ಪಾಕ್​ ಪ್ರವಾಸ ಕೈಗೊಂಡಿದ್ದ ನ್ಯೂಜಿಲ್ಯಾಂಡ್​ ತಂಡ ಭದ್ರತೆ ದೃಷ್ಠಿಯಿಂದ ಪ್ರವಾಸ ರದ್ದುಪಡಿಸಿಕೊಂಡಿದ್ದು, ಇದೀಗ ತವರಿಗೆ ವಾಪಸ್​ ತೆರಳಲು ಸಜ್ಜಾಗಿದೆ.

New Zealand tour of Pakistan
New Zealand tour of Pakistan
author img

By

Published : Sep 17, 2021, 4:06 PM IST

Updated : Sep 17, 2021, 4:15 PM IST

ರಾವಲ್ಪಿಂಡಿ(ಪಾಕಿಸ್ತಾನ): 18 ವರ್ಷಗಳ ಬಳಿಕ ಪಾಕಿಸ್ತಾನ ಪ್ರವಾಸ ಕೈಗೊಂಡಿದ್ದ ನ್ಯೂಜಿಲ್ಯಾಂಡ್ ತಂಡ ಭದ್ರತಾ ದೃಷ್ಟಿಯಿಂದ ತಮ್ಮ ಪ್ರವಾಸ ರದ್ದುಪಡಿಸಿದೆ.

ಉಭಯ ತಂಡಗಳ ನಡುವೆ ಇಂದಿನಿಂದ ರಾವಲ್ಪಿಂಡಿ ಮೈದಾನದಲ್ಲಿ ಮೊದಲ ಏಕದಿನ ಪಂದ್ಯ ಆರಂಭಗೊಳ್ಳಬೇಕಾಗಿತ್ತು. ಪಂದ್ಯ ಆರಂಭಗೊಳ್ಳಲು ಕೇವಲ 20 ನಿಮಿಷಗಳು ಬಾಕಿ ಇರುವಾಗಲೇ ಕಿವೀಸ್​​​ ಮಹತ್ವದ ನಿರ್ಧಾರ ಕೈಗೊಂಡಿತು.

ಈ ಹಿಂದೆ 2003ರಲ್ಲಿ ಪಾಕಿಸ್ತಾನ ತಂಡ ನ್ಯೂಜಿಲ್ಯಾಂಡ್​ ಪ್ರವಾಸ ಕೈಗೊಂಡಿತ್ತು. ಇದಾದ ಬಳಿಕ ಭದ್ರತೆ ದೃಷ್ಟಿಯಿಂದ ಇಲ್ಲಿಗೆ ಬಂದಿರಲಿಲ್ಲ. ಇದೀಗ ಪಾಕ್​ ಜೊತೆ ಮೂರು ಏಕದಿನ ಹಾಗೂ ಐದು ಟಿ-20 ಪಂದ್ಯಗಳನ್ನಾಡಲು ಟೀಂ ಆಗಮಿಸಿತ್ತು. ರಾವಲ್ಪಿಂಡಿ ಹಾಗೂ ಲಾಹೋರ್​​ನಲ್ಲಿ ಮೂರು ಏಕದಿನ ಹಾಗೂ ಐದು ಟಿ-20 ಪಂದ್ಯಗಳು ಆಯೋಜನೆಗೊಂಡಿದ್ದವು.

ಇದನ್ನೂ ಓದಿ: 18 ವರ್ಷಗಳ ಬಳಿಕ ಪಾಕ್​ಗೆ ಬಂದ ನ್ಯೂಜಿಲ್ಯಾಂಡ್​ ತಂಡ.. ಏಕದಿನ, ಟಿ-20 ಸರಣಿಯಲ್ಲಿ ಭಾಗಿ..

2009ರಲ್ಲಿ ಪಾಕಿಸ್ತಾನದ ಪ್ರವಾಸ ಕೈಗೊಂಡಿದ್ದ ಸಂದರ್ಭದಲ್ಲಿ ಶ್ರೀಲಂಕಾ ಕ್ರಿಕೆಟ್ ತಂಡದ ಮೇಲೆ ಭೀಕರ ಭಯೋತ್ಪಾದಕ ದಾಳಿ ನಡೆದಿತ್ತು. ಇದಾದ ಬಳಿಕ ಬಹುತೇಕ ತಂಡಗಳು ಪಾಕ್‌ಗೆ ಪ್ರವಾಸ ಕೈಗೊಳ್ಳಲು ಹಿಂದೇಟು ಹಾಕುತ್ತಿವೆ. ಇದರ ಹೊರತಾಗಿ ನ್ಯೂಜಿಲ್ಯಾಂಡ್ ತಂಡ ಕಳೆದ ನಾಲ್ಕು ದಿನಗಳ ಹಿಂದೆ ಪಾಕ್​ಗೆ ಬಂದಿಳಿದಿತ್ತು.

ಕಳೆದ ಎರಡು ವರ್ಷದಿಂದೀಚೆಗೆ ಕೆಲವು ಅಂತಾರಾಷ್ಟ್ರೀಯ ತಂಡಗಳು ಇಲ್ಲಿಗೆ ಪ್ರಯಾಣ ಕೈಗೊಳ್ಳುತ್ತಿವೆ. ನ್ಯೂಜಿಲ್ಯಾಂಡ್​ ಕೂಡ ಪಾಕ್​​ ಪ್ರವಾಸ ಕೈಗೊಂಡಿತ್ತು.

ಪಂದ್ಯ ಆರಂಭಗೊಳ್ಳಲು 20 ನಿಮಿಷ ಬಾಕಿ ಇರುವಾಗ ನಿರ್ಧಾರ

ನ್ಯೂಜಿಲ್ಯಾಂಡ್​-ಪಾಕಿಸ್ತಾನ ತಂಡಗಳ ನಡುವೆ ಮೊದಲ ಏಕದಿನ ಪಂದ್ಯ ಆರಂಭಗೊಳ್ಳಲು ಕೇವಲ 20 ನಿಮಿಷಗಳ ಕಾಲ ಬಾಕಿ ಇರುವಾಗ ಕಿವೀಸ್ ತಂಡ ಈ ನಿರ್ಧಾರ ಕೈಗೊಂಡಿದೆ. ಹೀಗಾಗಿ ಪ್ರವಾಸಿ ಆಟಗಾರರು ಮೈದಾನಕ್ಕೆ ಇಳಿಯುವ ಬದಲು ಹೋಟೆಲ್​ನ ಕೊಠಡಿಗಳಲ್ಲಿ ಉಳಿದುಕೊಂಡಿದ್ದರು ಎಂದು ವರದಿಯಾಗಿದೆ.

ನ್ಯೂಜಿಲ್ಯಾಂಡ್​ ಪಿಎಂ ಜೊತೆ ಪಾಕ್ ಪ್ರಧಾನಿ ಮಾತು

  • We have assured the NZ cricket board of the same. The Prime Minister spoke personally to the Prime Minister of New Zealand and informed her that we have one of the best Intelligence systems in the world and that no security threat of any kind exists for the visiting team.
    2/4

    — Pakistan Cricket (@TheRealPCB) September 17, 2021 " class="align-text-top noRightClick twitterSection" data=" ">

ಪಾಕ್‌ ಅಸಮಾಧಾನ

ಭದ್ರತಾ ವಿಚಾರವಾಗಿ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್​​​ ನ್ಯೂಜಿಲ್ಯಾಂಡ್ ಪ್ರಧಾನಿ ಜಸಿಂಡಾ ಅರ್ಡೆನ್‌​​ ಅವರೊಂದಿಗೆ ಮಾತುಕತೆ ನಡೆಸಿ, ಭದ್ರತಾ ವ್ಯವಸ್ಥೆ ಬಗ್ಗೆ ಮಾಹಿತಿ ನೀಡಿದ್ದರು ಎಂದು ಪಿಸಿಬಿ ಮಾಹಿತಿ ತಿಳಿಸಿದೆ. ಜೊತೆಗೆ ನ್ಯೂಜಿಲ್ಯಾಂಡ್​ ಬೋರ್ಡ್​ ಇಂದು ಬೆಳಗ್ಗೆ ನಮಗೆ ಭದ್ರತಾ ಎಚ್ಚರಿಕೆ ಬಗ್ಗೆ ಮಾಹಿತಿ ನೀಡಿತ್ತು. ಇದರ ಜೊತೆಗೆ ಏಕಪಕ್ಷೀಯವಾಗಿ ಸರಣಿ ಮುಂದೂಡಲು ನಿರ್ಧಾರ ಕೈಗೊಂಡಿದೆ ಎಂದು ಪಾಕ್ ಕ್ರಿಕೆಟ್‌ ಮಂಡಳಿ ಹೇಳಿದೆ.

ನ್ಯೂಜಿಲ್ಯಾಂಡ್​​ ಕ್ರಿಕೆಟ್ ಮಂಡಳಿಗೆ ನಾವು ಎಲ್ಲ ರೀತಿಯ ಆಶ್ವಾಸನೆ ನೀಡಿದ್ದೇವೆ. ಖುದ್ದಾಗಿ ಪ್ರಧಾನ ಮಂತ್ರಿ ದೂರವಾಣಿ ಮೂಲಕ ಮಾತನಾಡಿದ್ದಾರೆ. ನಮ್ಮಲ್ಲಿ ವಿಶ್ವದ ಅತ್ಯುತ್ತಮ ಗುಪ್ತಚರ ವ್ಯವಸ್ಥೆ ಇದೆ. ಇಷ್ಟರ ಮಧ್ಯೆ ನ್ಯೂಜಿಲ್ಯಾಂಡ್ ಈ ನಿರ್ಧಾರ ಕೈಗೊಂಡಿದೆ ಎಂದಿದೆ.

ಕೆಲವೊಂದು ರಾಷ್ಟ್ರಗಳಿಗೆ ಆತಂಕ

ನ್ಯೂಜಿಲ್ಯಾಂಡ್ ನಂತರ, ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ತಂಡಗಳು ಪಾಕಿಸ್ತಾನ ಪ್ರವಾಸ ಮಾಡಬೇಕಾಗಿದ್ದು, ಅವು ಕೂಡ ಇದರ ಬಗ್ಗೆ ವಿಚಾರಣೆ ನಡೆಸುವ ಸಾಧ್ಯತೆ ದಟ್ಟವಾಗಿದೆ.

Last Updated : Sep 17, 2021, 4:15 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.