ಸೌತಾಂಪ್ಟನ್: ಗಾಯಗೊಂಡಿದ್ದ ನ್ಯೂಜಿಲ್ಯಾಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಮತ್ತು ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಬಿಜೆ ವಾಟ್ಲಿಂಗ್ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯಕ್ಕೆ ಲಭ್ಯರಾಗುತ್ತಾರೆ ಎಂದು ನ್ಯೂಜಿಲ್ಯಾಂಡ್ ಕ್ರಿಕೆಟ್ ಮಂಡಳಿ ಕೆಲವು ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಖಚಿತಪಡಿಸಿದೆ. ಬೋರ್ಡ್ WTC ಫೈನಲ್ ಪಂದ್ಯದಲ್ಲಿ ಬಳಸುವ ಡ್ಯೂಕ್ ಚೆಂಡಿನ ಫೋಟೊವನ್ನು ಕೂಡ ಶೇರ್ ಮಾಡಿದೆ.
ಡ್ರೆಸ್ಸಿಂಗ್ ರೂಮಿಯನಲ್ಲಿ ವಾಟ್ಲಿಂಗ್ ಜರ್ಸಿಯನ್ನು ಮತ್ತು ವಿಲಿಯಮ್ಸನ್ ಬ್ಯಾಟ್ ಹಿಡಿದು ಕುಳಿತಿರುವ ಪೋಟೋವನ್ನು ಹಾಗೂ ಮತ್ತೊಂದು ಟ್ವೀಟ್ನಲ್ಲಿ ಡ್ಯೂಕ್ ಚೆಂಡಿನ ಫೋಟೋವನ್ನು ಟ್ವಿಟರ್ನಲ್ಲಿ ಶೇರ್ ಮಾಡಿ ಕೊಂಡಿದೆ.
-
New Zealand 🇳🇿 #WTC21 pic.twitter.com/ku2H7qryNX
— BLACKCAPS (@BLACKCAPS) June 15, 2021 " class="align-text-top noRightClick twitterSection" data="
">New Zealand 🇳🇿 #WTC21 pic.twitter.com/ku2H7qryNX
— BLACKCAPS (@BLACKCAPS) June 15, 2021New Zealand 🇳🇿 #WTC21 pic.twitter.com/ku2H7qryNX
— BLACKCAPS (@BLACKCAPS) June 15, 2021
ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ವಿಲಿಯಮ್ಸನ್ ಮತ್ತು ವಾಟ್ಲಿಂಗ್ಗೆ ವಿಶ್ರಾಂತಿ ನೀಡಲಾಗಿತ್ತು. ಈ ಪಂದ್ಯವನ್ನ ಗೆಲ್ಲುವ ಮೂಲಕ 1- 0ಯಲ್ಲಿ ಸರಣಿ ವಶಪಡಿಸಿಕೊಂಡಿತ್ತು. ಇದು 22 ವರ್ಷಗಳ ನಂತರ ಗೆದ್ದ ಸರಣಿಯಾಗಿತ್ತು.
ಈಗಾಗಲೇ ಭಾರತ ಮತ್ತು ನ್ಯೂಜಿಲ್ಯಾಂಡ್ ತಂಡಗಳು ಫೈನಲ್ ಪಂದ್ಯಕ್ಕಾಗಿ 15 ಸದಸ್ಯರ ತಂಡವನ್ನು ಘೋಷಿಸಿವೆ. ಜೂನ್ 18ರಂದು ಪಂದ್ಯ ಆರಂಭವಾಗಲಿದೆ.
ಇದನ್ನು ಓದಿ:ಐಸಿಸಿ ಟೆಸ್ಟ್ ಶ್ರೇಯಾಂಕ : 4ನೇ ಸ್ಥಾನಕ್ಕೆ ಬಡ್ತಿ ಪಡೆದ ಕೊಹ್ಲಿ, ಅಗ್ರಸ್ಥಾನದಿಂದ ಕೆಳಗಿಳಿದ ವಿಲಿಯಮ್ಸನ್