ಲಂಡನ್ : ಭಾರತದ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಮತ್ತು ಇಂಗ್ಲೆಂಡ್ ವಿರುದ್ಧದ 2 ಪಂದ್ಯಗಳ ಟೆಸ್ಟ್ ಸರಣಿಯನ್ನಾಡುವ ಸಲುವಾಗಿ ನ್ಯೂಜಿಲ್ಯಾಂಡ್ ತಂಡದ ಬಹುಪಾಲು ಆಟಗಾರರು ಭಾನುವಾರ ಲಂಡನ್ಗೆ ಬಂದಿಳಿದಿದ್ದಾರೆ.
ನ್ಯೂಜಿಲೆಂಡ್ ಕ್ರಿಕೆಟ್ ತಂಡ ಆಕ್ಲೆಂಡ್ನಿಂದ ಸಿಂಗಾಪುರ್ ಮಾರ್ಗದ ಮೂಲಕ ಲಂಡನ್ಗೆ ಬಂದಿದ್ದು, ಅಲ್ಲಿಂದ ಸೌತಾಂಪ್ಟನ್ನ ಏಜಸ್ ಬೌಲ್ಗೆ ಸೇರಿಕೊಂಡಿದೆ. ಪ್ರಸ್ತುತ ಅಲ್ಲಿ 2 ವಾರಗಳ ಕಾಲ ಕ್ವಾರಂಟೈನ್ಗೆ ಒಳಗಾಗಲಿದೆ.
-
Touchdown at @HeathrowAirport. Next stop Southampton 🚍 #ENGvNZ #WTC21 pic.twitter.com/lB86fBRioI
— BLACKCAPS (@BLACKCAPS) May 16, 2021 " class="align-text-top noRightClick twitterSection" data="
">Touchdown at @HeathrowAirport. Next stop Southampton 🚍 #ENGvNZ #WTC21 pic.twitter.com/lB86fBRioI
— BLACKCAPS (@BLACKCAPS) May 16, 2021Touchdown at @HeathrowAirport. Next stop Southampton 🚍 #ENGvNZ #WTC21 pic.twitter.com/lB86fBRioI
— BLACKCAPS (@BLACKCAPS) May 16, 2021
ಜೂನ್ 2 ರಂದು ಲಂಡನ್ನಲ್ಲಿ ಮೊದಲ ಟೆಸ್ಟ್ ಆರಂಭವಾಗಲಿದೆ. ಜೂನ್ 10ರಂದು ಬರ್ಮಿಂಗ್ಹ್ಯಾಮ್ನಲ್ಲಿ 2ನೇ ಟೆಸ್ಟ್ ಪಂದ್ಯ ನಡೆಯಲಿದೆ.
ಈ ಸರಣಿ ಮುಗಿಯುತ್ತಿದ್ದಂತೆ ಜೂನ್ 18 ರಿಂದ ಭಾರತದ ವಿರುದ್ಧ ಸೌತಾಂಪ್ಟನ್ನಲ್ಲಿ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ಪ್ರಶಸ್ತಿಗಾಗಿ ಸೆಣಸಾಡಲಿದೆ.
ಕೋವಿಡ್-19 ಕಾರಣ ರದ್ದಾಗಿರುವ ಐಪಿಎಲ್ನಲ್ಲಿ ಪಾಲ್ಗೊಂಡಿದ್ದ ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್, ಆಲ್ರೌಂಡರ್ ಕೈಲ್ ಜೆಮೀಸನ್ ಮತ್ತು ಮಿಚೆಲ್ ಸ್ಯಾಂಟ್ನರ್ ಮಾಲ್ಡೀವ್ಸ್‌ನಿಂದ ನೇರವಾಗಿ ಸೋಮವಾರ ಇಂಗ್ಲೆಂಡ್ ಸೇರಿಕೊಳ್ಳಲಿದ್ದಾರೆ.
ಟೆಸ್ಟ್ ಸರಣಿಗೂ ಮುನ್ನ ನ್ಯೂಜಲ್ಯಾಂಡ್ ತಂಡ ಮೇ 26 ರಿಂದ ಮೇ 28ರವರೆಗೆ 3 ದಿನಗಳ ಅಭ್ಯಾಸ ಪಂದ್ಯವನ್ನಾಡಲಿದೆ.