ನ್ಯೂಜಿಲೆಂಡ್: ನೇಪಿಯರ್‌ನಲ್ಲಿ ಇಂದು ನಡೆಯುತ್ತಿರುವ ಮೂರನೇ ಹಾಗೂ ಅಂತಿಮ ಟಿ20 ಸರಣಿಯಲ್ಲಿ ಭಾರತ ಟಾಸ್ ಸೋತಿದ್ದು ಎದುರಾಳಿ ನ್ಯೂಜಿಲೆಂಡ್ ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಸರಣಿಯಲ್ಲಿ ಭಾರತ ತಂಡ 1-0 ಮುನ್ನಡೆಯಲ್ಲಿದ್ದು, ಮೂರನೇ ಪಂದ್ಯವನ್ನು ಗೆದ್ದು ಸರಣಿ ವಶಪಡಿಸಿಕೊಳ್ಳುವ ಪ್ರಯತ್ನದಲ್ಲಿದೆ.
-
Toss Update 🚨
— BCCI (@BCCI) November 22, 2022 " class="align-text-top noRightClick twitterSection" data="
New Zealand opt to bat against #TeamIndia in the third #NZvIND T20I.
Follow the match 👉 https://t.co/rUlivZk3aH pic.twitter.com/KHFhqlarbJ
">Toss Update 🚨
— BCCI (@BCCI) November 22, 2022
New Zealand opt to bat against #TeamIndia in the third #NZvIND T20I.
Follow the match 👉 https://t.co/rUlivZk3aH pic.twitter.com/KHFhqlarbJToss Update 🚨
— BCCI (@BCCI) November 22, 2022
New Zealand opt to bat against #TeamIndia in the third #NZvIND T20I.
Follow the match 👉 https://t.co/rUlivZk3aH pic.twitter.com/KHFhqlarbJ
ಉಭಯ ತಂಡದ ನಡುವಿನ ಮೊದಲ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. ಆ ಬಳಿಕ ಭಾರತ ಎರಡನೇ ಪಂದ್ಯದಲ್ಲಿ 65 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಎರಡನೇ ಪಂದ್ಯದಲ್ಲಿ ಟೀಂ ಇಂಡಿಯಾದ ದಾಂಡಿಗ ಸೂರ್ಯಕುಮಾರ್ ಯಾದವ್ 51 ಎಸೆತಗಳಲ್ಲಿ ಅಜೇಯ 111 ರನ್ ಗಳಿಸುವ ಮೂಲಕ ತಂಡದ ಗೆಲುವಿಗೆ ಕಾರಣರಾದರು.
-
Toss in Napier has been delayed due to rain. #NZvIND pic.twitter.com/wyZ5TEi9ao
— BCCI (@BCCI) November 22, 2022 " class="align-text-top noRightClick twitterSection" data="
">Toss in Napier has been delayed due to rain. #NZvIND pic.twitter.com/wyZ5TEi9ao
— BCCI (@BCCI) November 22, 2022Toss in Napier has been delayed due to rain. #NZvIND pic.twitter.com/wyZ5TEi9ao
— BCCI (@BCCI) November 22, 2022
ಇಂದು ನಡೆಯುತ್ತಿರುವ 3ನೇ ಟಿ20 ಪಂದ್ಯದ ಮೇಲೂ ಮಳೆ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿದೆ. ಹಾಗಾಗಿ ಟೀಂ ಇಂಡಿಯಾಗೆ ಸರಣಿ ವಶಪಡಿಸಿಕೊಳ್ಳುವ ಪ್ರಯತ್ನ ಸಫಲವಾಗುತ್ತಾ ಅನ್ನೋದನ್ನು ಕಾದುನೋಡಬೇಕು. ಇದೇ ವೇಳೆ, ಎರಡನೇ ಪಂದ್ಯದ ಸೋಲಿನ ಹತಾಶೆಯಲ್ಲಿರುವ ನ್ಯೂಜಿಲೆಂಡ್ ತಂಡ ಇಂದಿನ ಪಂದ್ಯ ಗೆದ್ದು ಸರಣಿ ಸಮಬಲ ಮಾಡಿಕೊಳ್ಳುತ್ತಾ ಅನ್ನೋದು ಈಗಿನ ಕುತೂಹಲ.
-
3RD T20I. India XI: I Kishan, R Pant (wk), S Yadav, S Iyer, D Hooda, H Pandya (c), H Patel, Y Chahal, A Singh, B Kumar, M Siraj. https://t.co/UtR64C00Rs #NZvIND
— BCCI (@BCCI) November 22, 2022 " class="align-text-top noRightClick twitterSection" data="
">3RD T20I. India XI: I Kishan, R Pant (wk), S Yadav, S Iyer, D Hooda, H Pandya (c), H Patel, Y Chahal, A Singh, B Kumar, M Siraj. https://t.co/UtR64C00Rs #NZvIND
— BCCI (@BCCI) November 22, 20223RD T20I. India XI: I Kishan, R Pant (wk), S Yadav, S Iyer, D Hooda, H Pandya (c), H Patel, Y Chahal, A Singh, B Kumar, M Siraj. https://t.co/UtR64C00Rs #NZvIND
— BCCI (@BCCI) November 22, 2022
ಭಾರತ ತಂಡದಲ್ಲಿ ವಾಷಿಂಗ್ಟನ್ ಸುಂದರ್ ಬದಲಿಗೆ ಹರ್ಷಲ್ ಪಟೇಲ್ ಸ್ಥಾನ ಪಡೆದಿದ್ದು ನ್ಯೂಜಿಲೆಂಡ್ ತಂಡ ಯಾವುದೇ ಬದಲಾವಣೆ ಮಾಡಿಕೊಳ್ಳದೆ ಕಣಕ್ಕಿಳಿಯಲಿದೆ.
ನ್ಯೂಜಿಲೆಂಡ್ ತಂಡ: ಟಿಮ್ ಸೌಥಿ (ನಾಯಕ) ಫಿನ್ ಅಲೆನ್, ಡೆವೊನ್ ಕಾನ್ವೇ (ವಿಕೆಟ್ ಕೀಪರ್), ಗ್ಲೆನ್ ಫಿಲಿಪ್ಸ್, ಮಾರ್ಕ್ ಚಾಪ್ಮನ್, ಡಾರೆಲ್ ಮಿಚೆಲ್, ಜೇಮ್ಸ್ ನೀಶಮ್, ಮಿಚೆಲ್ ಸ್ಯಾಂಟ್ನರ್, ಆಡಮ್ ಮಿಲ್ನೆ, ಇಶ್ ಸೋಧಿ, ಲಾಕಿ ಫರ್ಗುಸನ್
ಭಾರತ ತಂಡ: ಹಾರ್ದಿಕ್ ಪಾಂಡ್ಯ (ನಾಯಕ), ಇಶಾನ್ ಕಿಶನ್, ರಿಷಬ್ ಪಂತ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ದೀಪಕ್ ಹೂಡಾ, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಅರ್ಷದೀಪ್ ಸಿಂಗ್, ಯುಜ್ವೇಂದ್ರ ಚಹಾಲ್, ಮೊಹಮ್ಮದ್ ಸಿರಾಜ್
ಇದನ್ನೂ ಓದಿ: 64 ವರ್ಷಗಳ ಬಳಿಕ ಕಣಕ್ಕಿಳಿದು ಜಿದ್ದಾಜಿದ್ದಿನ ಹೋರಾಟ ನಡೆಸಿದ ವೇಲ್ಸ್; ಪಂದ್ಯ ಡ್ರಾ