ವೆಲ್ಲಿಂಗ್ಟನ್ (ನ್ಯೂಜಿಲೆಂಡ್): ಭಾರತದಲ್ಲಿ ನಡೆಯುವ ವಿಶ್ವಕಪ್‌ಗೆ ಇನ್ನು ಕೆಲವೇ ದಿನಗಳು ಬಾಕಿ ಇದೆ. ನ್ಯೂಜಿಲೆಂಡ್ನ ಅನುಭವಿ ಬ್ಯಾಟರ್ ಕೇನ್ ವಿಲಿಯಮ್ಸನ್ ಗಾಯದಿಂದ ಚೇತರಿಸಿಕೊಂಡು ವಿಶ್ವಕಪ್ ವೇಳೆಗೆ ತಂಡ ಸೇರಿಕೊಳ್ಳುವ ನಿರೀಕ್ಷೆಯಲ್ಲಿದ್ದಾರೆ. ಈಗಾಗಲೇ ಮೈದಾನದಲ್ಲಿ ಅಭ್ಯಾಸಕ್ಕಿಳಿದಿರುವ ಅವರು ಮಹತ್ವದ ಸರಣಿಗೆ ತಂಡದ ಸಂಪೂರ್ಣ ಪಾಲುದಾರಿಕೆ ಪಡೆಯಲಿದ್ದಾರೆ.
2023ರ ಐಪಿಎಲ್ನ ಉದ್ಘಾಟನಾ ಪಂದ್ಯದ ವೇಳೆ ಕೇನ್ ಬೌಂಡರಿ ಲೈನ್ನಲ್ಲಿ ಫೀಲ್ಡಿಂಗ್ ಮಾಡುವಾಗ ಬಿದ್ದು ಗಾಯಕ್ಕೆ ತುತ್ತಾಗಿದ್ದರು. ನಂತರ ಚಿಕಿತ್ಸೆ ಪಡೆದುಕೊಂಡ ಅವರು ಕಮ್‌ಬ್ಯಾಕ್ ಮಾಡಲು ಕಠಿಣ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ವಿಲಿಯಮ್ಸನ್ ವಿಶ್ವಕಪ್ ವೇಳೆಗೆ ತಂಡವನ್ನು ಪ್ರತಿನಿಧಿಸುವ ಬಗ್ಗೆ ಹೆಚ್ಚು ಉತ್ಸುಕರಾಗಿದ್ದಾರೆ. ನ್ಯೂಜಿಲೆಂಡ್ ತಂಡ ವಿಶ್ವಕಪ್ಗೂ ಮೊದಲು ಬಾಂಗ್ಲಾದೇಶ ಪ್ರವಾಸ ಮಾಡಲಿದೆ. ಈ ವೇಳೆ ನಡೆಯಲಿರುವ ಟಿ20 ಮತ್ತು ಏಕದಿನ ಪಂದ್ಯ ತಂಡದಲ್ಲಿ ಸ್ಥಾನ ಪಡೆಯುವ ನಿರೀಕ್ಷೆ ಇದೆ.
-
Kane Williamson joined the New Zealand team for practice.
— Johns. (@CricCrazyJohns) August 11, 2023 " class="align-text-top noRightClick twitterSection" data="
Hoping he returns to cricket soon. pic.twitter.com/TaDUAAFXr1
">Kane Williamson joined the New Zealand team for practice.
— Johns. (@CricCrazyJohns) August 11, 2023
Hoping he returns to cricket soon. pic.twitter.com/TaDUAAFXr1Kane Williamson joined the New Zealand team for practice.
— Johns. (@CricCrazyJohns) August 11, 2023
Hoping he returns to cricket soon. pic.twitter.com/TaDUAAFXr1
ವಿಲಿಯಮ್ಸನ್ ತಮ್ಮ ಚೇತರಿಕೆಯ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ್ದು, ಭಾರತದಲ್ಲಿ ನಡೆಯುವ ವಿಶ್ವಕಪ್‌ಗೆ ತಯಾರಿ ಮಾಡುತ್ತಿರುವುದು ನನಗೆ ಕಠಿಣ ಸವಾಲು. ಉತ್ತಮವಾಗಿ ಚೇತರಿಕೆ ಕಾಣುತ್ತಿದ್ದೇನೆ. ಮೈದಾನದಲ್ಲಿ ಹೆಚ್ಚು ಹೊತ್ತು ನಿಂತು ಆಡಲು ಸಾಧ್ಯವಾಗುತ್ತಿದೆ. ಗಾಯವಾದ ಮೊಣಕಾಲಿನಲ್ಲಿ ಸ್ವಲ್ಪ ಮಟ್ಟಿನ ಚೇತರಿಕೆ ಬೇಕಿದೆ ಅಷ್ಟೇ, ಚಲನೆಗೆ ಯಾವುದೇ ಸಮಸ್ಯೆ ಇಲ್ಲ. ವಿಶ್ವಕಪ್ ತಂಡದಲ್ಲಿ ನನ್ನನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಎಂದು ಭಾವಿಸುತ್ತೇನೆ" ಎಂದರು.
"ವಿಶ್ವಕಪ್‌ನಲ್ಲಿ ಪಾಲ್ಗೊಳ್ಳುವುದು ಯಾವಾಗಲೂ ವಿಶೇಷ. ಮಹತ್ವದ ಸರಣಿಯಲ್ಲಿ ನಮ್ಮ ದೇಶವನ್ನು ಪ್ರತಿನಿಧಿಸುವುದು ಹೆಮ್ಮೆಯ ವಿಷಯ. ಆ ಸಮಯದಲ್ಲಿ ತಂಡದಲ್ಲಿ ಆಡುತ್ತೇನೆ ಎಂದು ತಿಳಿದಿದ್ದೇನೆ. ಆದರೆ ಅದಕ್ಕೂ ಮುನ್ನ ಬಹಳಷ್ಟು ಶ್ರಮ ಪಡಬೇಕಿದೆ. ಫಿಸಿಯೋ ಮತ್ತು ವೃತ್ತಿಪರರು ಸಹಾಯಕ ಸಿಬ್ಬಂದಿಯೊಂದಿಗೆ ನ್ಯೂಜಿಲೆಂಡ್ ಕ್ರಿಕೆಟ್‌ಗಾಗಿ ನಾನು ಕಠಿಣ ಪ್ರಯತ್ನಗಳನ್ನು ಮಾಡುತ್ತಿದ್ದೇನೆ. ವಿಶ್ವಕಪ್‌ನಂತಹ ವಿಚಾರ ನಮ್ಮನ್ನು ಇನ್ನಷ್ಟು ಪ್ರೇರೇಪಿಸುತ್ತದೆ" ಎಂದು ಹೇಳಿದ್ದಾರೆ.
161 ಏಕದಿನ ಪಂದ್ಯಗಳನ್ನು ಆಡಿರುವ ವಿಲಿಯಮ್ಸನ್ 47.85 ಸರಾಸರಿಯಲ್ಲಿ 6,555 ರನ್‌ಗಳನ್ನು ಗಳಿಸಿರುವ ಸ್ಟೈಲಿಶ್ ಬಲಗೈ ಆಟಗಾರ. ಮಾಧ್ಯಮದ ಜೊತೆಗಿನ ಮಾತುಕತೆಯಲ್ಲಿ ಅವರು ಬಾಂಗ್ಲಾದೇಶದ ಸರಣಿಯಲ್ಲೇ ಕಮ್‌ಬ್ಯಾಕ್ ಮಾಡುವ ಭರವಸೆ ನೀಡಿದ್ದಾರೆ. "ಚಲನೆ ಮತ್ತು ಆಡುವ ಸಾಮರ್ಥ್ಯದ ಬಗ್ಗೆ ತಿಳಿದುಕೊಳ್ಳಲು ವಿಶ್ವಕಪ್ಗೂ ಮುನ್ನ ಮೈದಾನಕ್ಕಿಳಿಯಬೇಕಿದೆ. ಅಲ್ಲಿಂದ ಮತ್ತೆ ಪ್ರಯಾಣ ನಿಧಾನವಾಗಿ ಆರಂಭವಾಗುತ್ತದೆ" ಎಂದು ತಿಳಿಸಿದರು.
ಇದನ್ನೂ ಓದಿ: Watch Video: ಏಕದಿನ ವಿಶ್ವಕಪ್‌ಗೆ ಮುನ್ನ ನ್ಯೂಜಿಲೆಂಡ್‌ಗೆ ಸಿಹಿ ಸುದ್ದಿ, ನೆಟ್‌ನಲ್ಲಿ ಅಭ್ಯಾಸಕ್ಕಿಳಿದ ವಿಲಿಯಮ್ಸನ್