ಢಾಕಾ: ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ 4-1 ಅಂತರದಿಂದ ಟಿ20 ಸರಣಿ ಗೆದ್ದು ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದ್ದ ಬಾಂಗ್ಲಾದೇಶ ಇದೀಗ ವಿಶ್ವ ಟೆಸ್ಟ್ ಚಾಂಪಿಯನ್ ನ್ಯೂಜಿಲ್ಯಾಂಡ ವಿರುದ್ಧ ಮೊದಲ ಟಿ-20 ಪಂದ್ಯದಲ್ಲಿ ಭರ್ಜರಿ ಗೆಲುವು ದಾಖಲು ಮಾಡಿದೆ.
-
Bangladesh registered their first T20I victory over New Zealand after defeating the visitors by seven wickets in the opening match.#BANvNZ report 👇
— ICC (@ICC) September 1, 2021 " class="align-text-top noRightClick twitterSection" data="
">Bangladesh registered their first T20I victory over New Zealand after defeating the visitors by seven wickets in the opening match.#BANvNZ report 👇
— ICC (@ICC) September 1, 2021Bangladesh registered their first T20I victory over New Zealand after defeating the visitors by seven wickets in the opening match.#BANvNZ report 👇
— ICC (@ICC) September 1, 2021
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದ ನ್ಯೂಜಿಲ್ಯಾಂಡ್ ಆರಂಭದಿಂದಲೇ ಬಾಂಗ್ಲಾದೇಶ ಬೌಲರ್ಗಳ ದಾಳಿಗೆ ತರಗೆಲೆಯಂತೆ ಉದುರಿಹೋದರು. ಕೇವಲ 16.5 ಓವರ್ಗಳಲ್ಲಿ 60 ರನ್ಗಳಿಗೆ ಕಿವೀಸ್ ಸರ್ವಪತನಗೊಂಡಿತು. ನಾಯಕ ಟಾಪ್ ಲಾಥಮ್ ಮತ್ತು ಹೆನ್ರಿ ನಿಕೋಲ್ಸ್ ಮಾತ್ರ ತಲಾ 18 ರನ್ಗಳಿಸಿ ತಂಡದಲ್ಲಿ ಎರಡಂಕಿ ಮೊತ್ತ ದಾಟಿದ ಬ್ಯಾಟ್ಸ್ಮನ್ಗಳಾದರು.
-
Bangladesh have bowled out New Zealand for 60 – their joint-lowest total in T20Is.
— ICC (@ICC) September 1, 2021 " class="align-text-top noRightClick twitterSection" data="
#BANvNZ | https://t.co/4Bvg9arZLr pic.twitter.com/UlcF4aHXt4
">Bangladesh have bowled out New Zealand for 60 – their joint-lowest total in T20Is.
— ICC (@ICC) September 1, 2021
#BANvNZ | https://t.co/4Bvg9arZLr pic.twitter.com/UlcF4aHXt4Bangladesh have bowled out New Zealand for 60 – their joint-lowest total in T20Is.
— ICC (@ICC) September 1, 2021
#BANvNZ | https://t.co/4Bvg9arZLr pic.twitter.com/UlcF4aHXt4
ಆಸ್ಟ್ರೇಲಿಯಾ ವಿರುದ್ಧ 4-1ರಲ್ಲಿ ಟಿ20 ಸರಣಿ ಗೆದ್ದ ಹುಮ್ಮಸ್ಸಿನಲ್ಲಿರುವ ಬಾಂಗ್ಲಾದೇಶ ತಂಡ ಇದೀಗ ನ್ಯೂಜಿಲ್ಯಾಂಡ್ ವಿರುದ್ಧವೂ ತನ್ನ ಪ್ರಾಬಲ್ಯವನ್ನು ಮುಂದುವರಿಸಿದೆ. 5 ಪಂದ್ಯಗಳ ಟಿ20 ಸರಣಿಯಲ್ಲಿ ಬುಧವಾರ ಆರಂಭವಾದ ಮೊದಲ ಪಂದ್ಯದಲ್ಲಿ ಪ್ರವಾಸಿ ತಂಡವನ್ನು ಕೇವಲ 60 ರನ್ಗಳಿಗೆ ಆಲೌಟ್ ಮಾಡಿದೆ. ಇದು ನ್ಯೂಜಿಲ್ಯಾಂಡ್ ಟಿ20 ಚರಿತ್ರೆಯಲ್ಲೇ ದಾಖಲಾದ ಅತ್ಯಂತ ಕಡಿಮೆ ಮೊತ್ತವಾಗಿದೆ.
ಆರಂಭಿಕ ಬ್ಯಾಟ್ಸ್ಮನ್ ಟಾಮ್ ಬ್ಲಂಡೆಲ್(2), ರಚಿನ್ ರವೀಂದ್ರ (0), ವಿಲ್ ಯಂಗ್(5), ಕಾಲಿನ್ ಡಿ ಗ್ರ್ಯಾಂಡ್ಹೋಮ್(1), ಕೋಲ್ ಮೆಕಾಂಚಿ(0) ಡಾಗ್ ಬ್ರೇಸ್ವೆಲ್(5) ,ಅಜಾಜ್ ಪಟೇಲ್(3), ಜಾಕೋಬ್ ಡಫ್ಫಿ(3) ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿದರು.
ಮಾರಕ ಬೌಲಿಂಗ್ ದಾಳಿ ನಡೆಸಿದ ಬಾಂಗ್ಲಾ ಬೌಲರ್ಗಳಲ್ಲಿ ಮುಸ್ತಫಿಜುರ್ ರಹಮಾನ್ 13ಕ್ಕೆ 3, ಮೊಹಮ್ಮದ್ ಸೈಫುದ್ದೀನ್ 7ಕ್ಕೆ 2, ಶಕಿಬ್ ಅಲ್ ಹಸನ್ 10ಕ್ಕೆ 2, ನಾಸುಮ್ ಅಹ್ಮದ್ 5ಕ್ಕೆ 2, ಮೆಹೆದಿ ಹಸನ್ 15ಕ್ಕೆ1 ವಿಕೆಟ್ ಪಡೆದು ಕಿವೀಸ್ ಬ್ಯಾಟ್ಸ್ಮನ್ಗಳನ್ನು ಅಲ್ಪಮೊತ್ತಕ್ಕೆ ಆಲೌಟ್ ಮಾಡಿದರು.
ಆರಂಭದಲ್ಲೇ ಮುಗ್ಗರಿಸಿದ್ದ ಬಾಂಗ್ಲಾ
61ರನ್ಗಳ ಗೆಲುವಿನ ಗುರಿ ಬೆನ್ನತ್ತಿದ್ದ ಬಾಂಗ್ಲಾದೇಶ ಕೂಡ ಆರಂಭದಲ್ಲೇ ಆಘಾತಕ್ಕೊಳಗಾಯಿತು. ಕೇವಲ 7ರನ್ಗಳಿಕೆ ಮಾಡುವಷ್ಟರಲ್ಲಿ 2 ವಿಕೆಟ್ ಕಳೆದುಕೊಂಡಿತು. ಇದಾದ ಬಳಿಕ ಒಂದಾದ ಶಕೀಬ್ ಅಲ್ ಹಸನ್(25ರನ್), ಮುಸ್ತುಫೀಜುರ್(16)ರನ್ಗಳ ಜೊತೆಯಾಟದಿಂದ ತಂಡವನ್ನ ಗೆಲುವಿನತ್ತ ಕೊಂಡ್ಯೊಯ್ದರು. ಶಕೀಬ್ ವಿಕೆಟ್ ಪತನಗೊಳ್ಳುತ್ತಿದ್ದಂತೆ ಕ್ಯಾಪ್ಟನ್ ಮುಹಮ್ಮದುಲ್ಲಾ ಅಜೇಯ 14ರನ್ಗಳಿಕೆ ಮಾಡಿ ತಂಡವನ್ನ ಗೆಲುವಿನ ದಡ ಸೇರಿಸಿದರು. ಕೊನೆಯದಾಗಿ ತಂಡ 15 ಓವರ್ಗಳಲ್ಲಿ 3ವಿಕೆಟ್ನಷ್ಟಕ್ಕೆ 62ರನ್ಗಳಿಕೆ ಮಾಡಿ ಗೆಲುವು ಸಾಧಿಸಿತು.
ತಂಡದ ಪರ ಬೌಲಿಂಗ್ ಹಾಗೂ ಬ್ಯಾಟಿಂಗ್ನಲ್ಲಿ ಮಿಂಚಿದ ಆಲ್ರೌಂಡರ್ ಶಕೀಬ್ ಅಲ್ ಹಸನ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.