ಕರಾಚಿ(ಪಾಕಿಸ್ತಾನ): 2009ರಲ್ಲಿ ಪಾಕಿಸ್ತಾನದ ಪ್ರವಾಸ ಕೈಗೊಂಡಿದ್ದ ಸಂದರ್ಭದಲ್ಲಿ ಶ್ರೀಲಂಕಾ ಕ್ರಿಕೆಟ್ ತಂಡದ ಮೇಲೆ ಭೀಕರ ಭಯೋತ್ಪಾದನಾ ದಾಳಿ ನಡೆದಿತ್ತು. ಇದಾದ ಬಳಿಕ ಬಹುತೇಕ ತಂಡಗಳು ಇಲ್ಲಿಗೆ ಪ್ರವಾಸ ಕೈಗೊಳ್ಳಲು ಹಿಂದೇಟು ಹಾಕಿದ್ದವು. ಆದರೆ, ಕಳೆದ ಎರಡು ವರ್ಷದಿಂದ ಇತ್ತೀಚೆಗೆ ಕೆಲ ತಂಡಗಳು ಇಲ್ಲಿಗೆ ಪ್ರಯಾಣ ಕೈಗೊಳ್ಳುತ್ತಿದ್ದು, ಸದ್ಯ ನ್ಯೂಜಿಲ್ಯಾಂಡ್ ಕೂಡ ಪಾಕ್ ಪ್ರವಾಸ ಕೈಗೊಂಡಿದೆ.
-
Great to have arrived in Islamabad 🏏
— BLACKCAPS (@BLACKCAPS) September 11, 2021 " class="align-text-top noRightClick twitterSection" data="
Thanks for the warm welcome @TheRealPCB 🇵🇰 #PAKvNZ #CricketNation https://t.co/dmLaq7gygg
">Great to have arrived in Islamabad 🏏
— BLACKCAPS (@BLACKCAPS) September 11, 2021
Thanks for the warm welcome @TheRealPCB 🇵🇰 #PAKvNZ #CricketNation https://t.co/dmLaq7gyggGreat to have arrived in Islamabad 🏏
— BLACKCAPS (@BLACKCAPS) September 11, 2021
Thanks for the warm welcome @TheRealPCB 🇵🇰 #PAKvNZ #CricketNation https://t.co/dmLaq7gygg
ಬರೋಬ್ಬರಿ 18 ವರ್ಷಗಳ ಬಳಿಕ ನ್ಯೂಜಿಲ್ಯಾಂಡ್ ತಂಡ ಪಾಕ್ ಪ್ರವಾಸ ಕೈಗೊಂಡಿದೆ. ರಾವಲ್ಪಿಂಡಿ ಹಾಗೂ ಲಾಹೋರ್ನಲ್ಲಿ ಮೂರು ಏಕದಿನ ಹಾಗೂ ಐದು ಟಿ-20 ಪಂದ್ಯಗಳ ಸರಣಿಯಲ್ಲಿ ಭಾಗಿಯಾಗಲಿದೆ.
ನ್ಯೂಜಿಲ್ಯಾಂಡ್ ತಂಡ ಪಾಕ್ಗೆ ಬಂದಿಳಿಯುತ್ತಿದ್ದಂತೆ ಭಾರೀ ಭದ್ರತೆಯಲ್ಲಿ ಹೋಟೆಲ್ಗೆ ಕರೆತರಲಾಗಿದೆ. ಇಂದಿನಿಂದಲೇ ಎಲ್ಲ ಪ್ಲೇಯರ್ಸ್ ಬಯೋಬಬಲ್ಗೊಳಪಡುವ ಸಾಧ್ಯತೆ ದಟ್ಟವಾಗಿದೆ.
ಇದನ್ನೂ ಓದಿರಿ: 5ನೇ ಟೆಸ್ಟ್ ರದ್ದಾಗುವುದರಿಂದ ಆಗುವ ನಷ್ಟ ಅಷ್ಟಿಷ್ಟಲ್ಲ: ಬಿಸಿಸಿಐನಿಂದ ಬಿಸಿ ಬಿಸಿ ಚರ್ಚೆ
ಈ ಹಿಂದೆ 2003ರಲ್ಲಿ ಪಾಕಿಸ್ತಾನ ತಂಡ ನ್ಯೂಜಿಲ್ಯಾಂಡ್ ಪ್ರವಾಸ ಕೈಗೊಂಡಿತ್ತು. ಇದಾದ ಬಳಿಕ ಭದ್ರತೆ ದೃಷ್ಟಿಯಿಂದ ಇಲ್ಲಿಗೆ ಬಂದಿರಲಿಲ್ಲ. 2022-23ರಲ್ಲಿ ನ್ಯೂಜಿಲ್ಯಾಂಡ್ ತಂಡ ಮತ್ತೊಮ್ಮೆ ಪಾಕ್ ಪ್ರವಾಸ ಕೈಗೊಳ್ಳಲಿದೆ. ಎರಡು ಟೆಸ್ಟ್ ಪಂದ್ಯ, ಮೂರು ಏಕದಿನ ಪಂದ್ಯಗಳ ಸರಣಿಯಲ್ಲಿ ಭಾಗಿಯಾಗಲಿದೆ ಎಂದು ತಿಳಿದು ಬಂದಿದೆ.
2009ರಲ್ಲಿ ಶ್ರೀಲಂಕಾ ಇಲ್ಲಿಗೆ ಬಂದಿದ್ದ ಸಂದರ್ಭದಲ್ಲಿ ತಂಡದ ಸದಸ್ಯನಾಗಿದ್ದ ತಿಲನ್ ಸಮರವೀರ ಇದೀಗ ನ್ಯೂಜಿಲ್ಯಾಂಡ್ ತಂಡದ ಬ್ಯಾಟಿಂಗ್ ಕೋಚ್ ಆಗಿದ್ದು, ಅವರು ಪಾಕ್ಗೆ ಬಂದಿಳಿದಿದ್ದಾರೆ.