ETV Bharat / sports

ನ್ಯೂಜಿಲ್ಯಾಂಡ್​ ಆಲ್​ರೌಂಡರ್​ ಕಾಲಿನ್​ ಡಿ ಗ್ರ್ಯಾಂಡ್​ಹೋಮ್​ ಕ್ರಿಕೆಟ್​ ಬದುಕಿಗೆ ನಿವೃತ್ತಿ - ETV bharat kannada news

ನ್ಯೂಜಿಲ್ಯಾಂಡ್​ ಕ್ರಿಕೆಟ್​ ತಂಡದ ಆಲ್​ರೌಂಡರ್​ ಕಾಲಿನ್​ ಡಿ ಗ್ರ್ಯಾಂಡ್​ಹೋಮ್ ಅಂತಾರಾಷ್ಟ್ರೀಯ​ ಕ್ರಿಕೆಟ್​ ಬದುಕಿಗೆ ವಿರಾಮ ಹಾಕಿದ್ದಾರೆ.

colin-de-grandhomme
ಕಾಲಿನ್​ ಡಿ ಗ್ರ್ಯಾಂಡ್​ಹೋಮ್
author img

By

Published : Aug 31, 2022, 1:49 PM IST

ವೆಲ್ಲಿಂಗ್ಟನ್ (ನ್ಯೂಜಿಲೆಂಡ್): ನ್ಯೂಜಿಲ್ಯಾಂಡ್​​ ತಂಡದ ಆಲ್‌ರೌಂಡರ್ ಕಾಲಿನ್ ಡಿ ಗ್ರ್ಯಾಂಡ್‌ಹೋಮ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. 36ರ ಹರೆಯದ ಗ್ರ್ಯಾಂಡ್‌ಹೋಮ್ ನ್ಯೂಜಿಲ್ಯಾಂಡ್​ ತಂಡದ ಪ್ರಮುಖ ಆಲ್​ರೌಂಡರ್ ​ಆಗಿ ಗುರುತಿಸಿಕೊಂಡಿದ್ದರು. ತಂಡದಲ್ಲಿ ಹೆಚ್ಚಿದ ಸ್ಪರ್ಧೆ ಮತ್ತು ಗಾಯದ ಕಾರಣ ಪದೆ ಪದೇ ತಂಡದಿಂದ ಹೊರಗುಳಿಯುತ್ತಿದ್ದ ಕಾರಣ ಕ್ರಿಕೆಟ್​ ಬದುಕಿಗೆ ಪೂರ್ಣ ವಿರಾಮ ಹಾಕಿದ್ದಾರೆ.

2012 ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ ಕಾಲಿನ್ ಡಿ ಗ್ರ್ಯಾಂಡ್‌ಹೋಮ್ ಬ್ಲ್ಯಾಕ್​ಕ್ಯಾಪ್ಸ್​ ಪರವಾಗಿ 29 ಟೆಸ್ಟ್​ ಪಂದ್ಯಗಳಲ್ಲಿ ಆಡಿದ್ದಾರೆ. 38.70 ಸರಾಸರಿಯಲ್ಲಿ 1432 ರನ್ ಗಳಿಸಿದರೆ, 49 ವಿಕೆಟ್‌ಗಳನ್ನು ಕಿತ್ತಿದ್ದಾರೆ. ಟೆಸ್ಟ್​ ತಂಡದ ಭಾಗವಾಗಿದ್ದಾಗ 18 ಪಂದ್ಯಗಳಲ್ಲಿ ಗೆಲುವು ಕಂಡಿದ್ದಾರೆ. ಚೊಚ್ಚಲ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್​ನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಇನ್ನು ಏಕದಿನ ಫಾರ್ಮೆಟ್​ನಲ್ಲಿ 45 ಪಂದ್ಯಗಳನ್ನಾಡಿದ್ದು, 742 ರನ್‌ಗಳನ್ನಷ್ಟೇ ಮಾಡಿದ್ದಾರೆ. ಜೊತೆಗೆ 30 ವಿಕೆಟ್‌ಗಳನ್ನು ಪಡೆದಿದ್ದಾರೆ. 2019 ರ ಐಸಿಸಿ ಕ್ರಿಕೆಟ್ ವಿಶ್ವಕಪ್​ನ ತಂಡದ ಭಾಗವಾಗಿದ್ದರು. ಟಿ-20 ಚುಟುಕು ಕ್ರಿಕೆಟ್​ನಲ್ಲಿ 41 ಪಂದ್ಯಗಳಾಡಿದ್ದು, 505 ರನ್, 12 ವಿಕೆಟ್‌ಗಳನ್ನು ಸಂಪಾದಿಸಿದ್ದಾರೆ.

"ಕಳೆದ ಒಂದು ದಶಕದಲ್ಲಿ ತಂಡದ ಭಾಗವಾಗಿರುವುದಕ್ಕೆ ಸಂತಸವಿದೆ. ಸಹ ಆಟಗಾರರೊಂದಿಗೆ ಕಳೆದ ಕ್ಷಣಗಳಿಗೆ ನಾನು ಕೃತಜ್ಞನಾಗಿದ್ದೇನೆ. ವಯಸ್ಸು ಮತ್ತು ದೇಹ ಸ್ಪಂದಿಸದ ಕಾರಣ ಕ್ರಿಕೆಟ್​ ಕಣದಿಂದ ದೂರ ಉಳಿಯುತ್ತಿದ್ದೇನೆ. ಕುಟುಂಬದ ಜೊತೆ ಕಳೆಯುವ ಮತ್ತು ಭವಿಷ್ಯವನ್ನು ಕಟ್ಟಿಕೊಳ್ಳಬೇಕಿದೆ" ಎಂದು ಅವರು ಹೇಳಿದರು.

"2012 ರಿಂದ ನ್ಯೂಜಿಲ್ಯಾಂಡ್​ ಪರವಾಗಿ ಆಡಲು ಅವಕಾಶ ಪಡೆದ ನಾನು ಅದೃಷ್ಟಶಾಲಿ. ನನ್ನ ಅಂತಾರಾಷ್ಟ್ರೀಯ ವೃತ್ತಿಜೀವನದ ಬಗ್ಗೆ ಹೆಮ್ಮೆ ಇದೆ. ಇದಕ್ಕೆ ಕೊನೆ ಹೇಳಲು ಇದೇ ಸರಿಯಾದ ಸಮಯ ಎಂದು ನಾನು ಭಾವಿಸಿದ್ದೇನೆ" ಎಂದು ಗ್ರ್ಯಾಂಡ್​ಹೋಮ್​ ಹೇಳಿದರು.

ಓದಿ: ಹಾರ್ದಿಕ್ ಜಡೇಜಾ ಶ್ರೇಷ್ಠ ಆಲ್​ರೌಂಡರ್ಸ್​, ವಿರಾಟ್ ಶೀಘ್ರ ಲಯಕ್ಕೆ: ಕಪಿಲ್​ ದೇವ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.