ETV Bharat / sports

IND vs NZ first test: ಕಿವೀಸ್ 296ಕ್ಕೆ ಆಲೌಟ್, 2ನೇ ಇನ್ನಿಂಗ್ಸ್​ನಲ್ಲಿ ಭಾರತಕ್ಕೆ ಆರಂಭಿಕ ಆಘಾತ - ಟಾಮ್​ ಲೇಥಮ್

ಎರಡನೇ ದಿನ ವಿಕೆಟ್​ ನಷ್ಟವಿಲ್ಲದೆ 129 ರನ್​ಗಳಿಸಿದ್ದ ಕಿವೀಸ್, 3ನೇ ದಿನ 167 ರನ್​ಗಳಿಸಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿದೆ. ಇತ್ತ ಭಾರತ 49 ರನ್​ಗಳ ಮುನ್ನಡೆಯೊಂದಿಗೆ 2ನೇ ಇನ್ನಿಂಗ್ಸ್ ಆರಂಭಿಸಿದ್ದು, 5 ಓವರ್​ಗಳಲ್ಲಿ 14 ರನ್​ಗಳಿಸಿ ಒಂದು ವಿಕೆಟ್​ ಕಳೆದುಕೊಂಡಿದೆ. ಇನ್ನೂ 2 ದಿನಗಳ ಆಟ ಬಾಕಿಯುಳಿದಿದ್ದು ಭಾರತ 63 ರನ್​ಗಳ ಮುನ್ನಡೆ ಸಾಧಿಸಿದೆ.

New Zealand vs India test
ಭಾರತ ನ್ಯೂಜಿಲ್ಯಾಂಡ್​ ಟೆಸ್ಟ್​
author img

By

Published : Nov 27, 2021, 4:48 PM IST

ಕಾನ್ಪುರ: ಅಕ್ಷರ್ ಪಟೇಲ್​ ಮಾರಕ ಬೌಲಿಂಗ್ ದಾಳಿಗೆ ಬೆದರಿದ ನ್ಯೂಜಿಲ್ಯಾಂಡ್​ ತಂಡ ತನ್ನ ಮೊದಲ ಇನ್ನಿಂಗ್ಸ್​ನಲ್ಲಿ 296 ರನ್​ಗಳಿಗೆ ಸರ್ವಪತನಗೊಂಡಿದೆ. ಈ ಮೂಲಕ ಭಾರತ 49 ರನ್​ಗಳಿಂದ ಮೊದಲ ಇನ್ನಿಂಗ್ಸ್​ನಲ್ಲಿ ಮುನ್ನಡೆ ಸಾಧಿಸಿದೆ. ಆದರೆ 2ನೇ ಇನ್ನಿಂಗ್ಸ್ ಆರಂಭಿಸಿದ ಟೀಂ ಇಂಡಿಯಾ ಕೂಡ ಒಂದು ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿದೆ.

ಎರಡನೇ ದಿನ ವಿಕೆಟ್​ ನಷ್ಟವಿಲ್ಲದೆ 129 ರನ್​ಗಳಿಸಿದ್ದ ಕಿವೀಸ್ ಆರಂಭಿಕ ಜೋಡಿಯನ್ನು ಅಶ್ವಿನ್​ ಬ್ರೇಕ್​ ಮಾಡಿದರು. ಅವರು 214 ಎಸೆತಗಳಲ್ಲಿ 89 ರನ್​ಗಳಿಸಿದ್ದ ವಿಲ್ ಯಂಗ್​ ವಿಕೆಟ್​ ಪಡೆದು ಅತಿಥೇಯರಿಗೆ ಮೊದಲ ಬ್ರೇಕ್ ಒದಗಿಸಿಕೊಟ್ಟರು.​

ನಂತರ ಲೇಥಮ್​ ಜೊತೆಗೂಡಿದ ನಾಯಕ ಕೇನ್​ ವಿಲಿಯಮ್ಸನ್​ 2ನೇ ವಿಕೆಟ್​ಗೆ 46 ರನ್​ ಸೇರಿಸಿದರು. 64 ಎಸೆತಗಳಲ್ಲಿ 18 ರನ್​ಗಳಿಸಿದ್ದ ವಿಲಿಯಮ್ಸನ್​ರನ್ನು ಉಮೇಶ್​ ಯಾದವ್​ ಎಲ್​ಬಿ ಡಬ್ಲ್ಯೂ ಬಲೆಗೆ ಬೀಳಿಸಿ ಕಿವೀಸ್​ಗೆ ಆಘಾತ ನೀಡಿದರು.

ಇದನ್ನೂ ಓದಿ:ತಮ್ಮ 4ನೇ ಟೆಸ್ಟ್​ ಪಂದ್ಯದಲ್ಲಿ 5ನೇ ಬಾರಿ 5 ವಿಕೆಟ್ ಪಡೆದು ದಾಖಲೆ ಬರೆದ ಅಕ್ಷರ್ ಪಟೇಲ್!!

197ಕ್ಕೆ 2 ವಿಕೆಟ್ ಕಳೆದುಕೊಂಡು ಸುಸ್ಥಿತಿಯಲ್ಲಿದ್ದ ನ್ಯೂಜಿಲ್ಯಾಂಡ್​ ತಂಡ ಅಕ್ಷರ್ ಪಟೇಲ್ ಮತ್ತು ಅಶ್ವಿನ್​ ದಾಳಿಗೆ ಸಿಲುಕಿ ಮುಂದಿನ 99 ರನ್​ ಗಳಿಸುವಷ್ಟರಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡಿತು.

ಟಾಮ್ ಲೇಥಮ್​ 282 ಎಸೆತಗಳಲ್ಲಿ 10 ಬೌಂಡರಿ ಸಹಿತ 95 ರನ್​ಗಳಿಸಿದರು. ಉಳಿದಂತೆ ಹಿರಿಯ ಬ್ಯಾಟರ್​ ರಾಸ್​ ಟೇಲರ್​ 11, ಹೆನ್ರಿ ನಿಕೋಲ್ಸ್​ 2, ಟಾಮ್ ಬ್ಲಂಡೆಲ್ 13, ರಚಿನ್ ರವೀಂದ್ರ 13, ಕೈಲ್ ಜೇಮಿಸನ್ 23, ಟಿಮ್ ಸೌಥಿ 5, ವಿಲ್​ ಸಮರ್​ವಿಲ್​ 6 ರನ್​ಗಳಿಸಿ ಔಟಾದರು.

ಅಕ್ಷರ್​ ಪಟೇಲ್ 62ಕ್ಕೆ 5, ರವಿಚಂದ್ರನ್ ಅಶ್ವಿನ್​ 82ಕ್ಕೆ 3, ರವೀಂದ್ರ ಜಡೇಜಾ 57ಕ್ಕೆ 1 ಮತ್ತು ಉಮೇಶ್ ಯಾದವ್​ 50ಕ್ಕೆ 1 ವಿಕೆಟ್ ಪಡೆದು ಮಿಂಚಿದರು.

ಭಾರತಕ್ಕೆ ಆರಂಭಿಕ ಆಘಾತ

49 ರನ್​ಗಳ ಮುನ್ನಡೆಯೊಂದಿಗೆ 2ನೇ ಇನ್ನಿಂಗ್ಸ್​ ಆರಂಭಿಸಿದ ಭಾರತಕ್ಕೆ ಕೈಲ್ ಜೇಮಿಸನ್ ಆರಂಭಿಕ ಆಘಾತ ನೀಡಿದ್ದಾರೆ. ಮೊದಲ ಇನ್ನಿಂಗ್ಸ್​ನಲ್ಲಿ ಅರ್ಧಶತಕ ಸಿಡಿಸಿ ಮಿಂಚಿದ್ದ ಯುವ ಬ್ಯಾಟರ್​ ಶುಬ್ಮನ್ ಗಿಲ್​(1) ರನ್ನು ಕ್ಲೀನ್​ ಬೌಲ್ಡ್​ ಮಾಡುವ ಮೂಲಕ ಕಿವೀಸ್​ಗೆ ಮುನ್ನಡೆ ತಂದುಕೊಟ್ಟಿದ್ದಾರೆ.

3ನೇ ದಿನದಾಟದಂತ್ಯಕ್ಕೆ ಭಾರತ ತಂಡ 4 ಓವರ್​ಗಳಲ್ಲಿ 1 ವಿಕೆಟ್ ಕಳೆದುಕೊಂಡು 10 ರನ್​ಗಳಿಸಿದೆ. ಭಾರತ ಶ್ರೇಯಸ್ ಅಯ್ಯರ್(105) ಶತಕದ ನೆರವಿನಿಂದ ಮೊದಲ ಇನ್ನಿಂಗ್ಸ್​ನಲ್ಲಿ 345 ರನ್​ಗಳಿಸಿತ್ತು.

ಅಕ್ಷರ್​ ಪಟೇಲ್ 5 ವಿಕೆಟ್ ಸಾಧನೆ:

ಇದೇ ವರ್ಷ ಇಂಗ್ಲೆಂಡ್​ ವಿರುದ್ಧ ತವರಿನಲ್ಲಿ ನಡೆದಿದ್ದ ಟೆಸ್ಟ್ ಸರಣಿಯಲ್ಲಿ ಪದಾರ್ಪಣೆ ಮಾಡಿದ್ದ ಅವರು ಮೊದಲ ಪಂದ್ಯದಲ್ಲೇ 7 ವಿಕೆಟ್​ ಪಡೆದು ಮಿಂಚಿದ್ದರು. ನಂತರ ಉಳಿದ ಮೂರು ಪಂದ್ಯಗಳಲ್ಲೂ ಒಟ್ಟು 4 ಬಾರಿ 5 ವಿಕೆಟ್​ ಸಾಧನೆ ಮಾಡಿದ್ದರು. ಇದೀಗ ತಮ್ಮ 4ನೇ ಟೆಸ್ಟ್​ ಪಂದ್ಯದಲ್ಲೂ ಕಿವೀಸ್​ನ ಐವರು ಬ್ಯಾಟರ್​ಗಳಿಗೆ ಪೆವಿಲಿಯನ್​​ ದಾರಿ ತೋರಿಸಿದ್ದಾರೆ. ಈ ಮೂಲಕ ಆರಂಭದ 4 ಟೆಸ್ಟ್​ ಪಂದ್ಯಗಳಲ್ಲಿ ಗರಿಷ್ಠ ಬಾರಿ 5 ವಿಕೆಟ್​ ಪಡೆದ ದಾಖಲೆಯನ್ನು ಇಂಗ್ಲೆಂಡ್​ನ ​ಟಾಮ್​ ರಿಚರ್ಡ್ಸನ್​ ಮತ್ತು ಆಸ್ಟ್ರೇಲಿಯಾದ ರಾಡ್ನಿ ಹಾಗ್​ ಜೊತೆಗೆ ಹಂಚಿಕೊಂಡಿದ್ದಾರೆ.

ಆಸ್ಟ್ರೇಲಿಯಾದ ವೇಗದ ಬೌಲರ್​ ಚಾರ್ಲಿ ಟರ್ನರ್​ ತಮ್ಮ ಮೊದಲ 4 ಪಂದ್ಯಗಳಲ್ಲಿ 6 ಬಾರಿ 5 ವಿಕೆಟ್​ ಸಾಧನೆ ಮಾಡಿದ ದಾಖಲೆ ಹೊಂದಿದ್ದಾರೆ. ಭಾರತೀಯರಲ್ಲಿ ಲಕ್ಷ್ಮಣ್​ ಶಿವರಾಮಕೃಷ್ಣನ್​ ಮತ್ತು ನರೇಂದ್ರ ಹಿರ್ವಾನಿ ತಲಾ ಮೂರು ಬಾರಿ ಈ ಸಾಧನೆ ಮಾಡಿದ್ದಾರೆ.

ಇದನ್ನೂ ಓದಿ:ನಿರ್ದಿಷ್ಟ ಕಾರಣವಿಲ್ಲದೆ ಬರೋಡ ತಂಡದ ನಾಯಕತ್ವ ತ್ಯಜಿಸಿದ ಕೃನಾಲ್ ಪಾಂಡ್ಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.