ಕಠ್ಮಂಡು (ನೇಪಾಳ) : ತ್ರಿಭುವನ್ ವಿಶ್ವವಿದ್ಯಾಲಯದ ಮೈದಾನದಲ್ಲಿ ಮಂಗಳವಾರ ನಡೆದ ಎಸಿಸಿ ಪ್ರೀಮಿಯರ್ ಕಪ್ ಫೈನಲ್‌ನಲ್ಲಿ ಯುಎಇ ತಂಡವನ್ನು ಏಳು ವಿಕೆಟ್‌ಗಳಿಂದ ಸೋಲಿಸಿದ ನೇಪಾಳ ಏಷ್ಯಾಕಪ್ 2023ಕ್ಕೆ ಪ್ರವೇಶ ಪಡೆದುಕೊಂಡಿದೆ. ಯುಎಇ ವಿರುದ್ಧದ ಗೆಲುವಿನ ನಂತರ ನೇಪಾಳವು ಭಾರತ ಮತ್ತು ಪಾಕಿಸ್ತಾನದೊಂದಿಗೆ ಎ ಗುಂಪಿನಲ್ಲಿ ಏಷ್ಯಾ ಕಪ್ ಆಡಲಿದೆ. ಏಕದಿನ ವಿಶ್ವಕಪ್ಗೂ ಮುನ್ನ ಸೆಪ್ಟೆಂಬರ್ ತಿಂಗಳಲ್ಲಿ ಪಾಕಿಸ್ತಾನದಲ್ಲಿ ಏಷ್ಯಾ ಕಪ್ ನಡೆಯಲಿದೆ.
-
Incredible news for Nepal fans as their team create history 🙌
— ICC (@ICC) May 2, 2023 " class="align-text-top noRightClick twitterSection" data="
Details ⬇️https://t.co/eBl8qYI3Vg
">Incredible news for Nepal fans as their team create history 🙌
— ICC (@ICC) May 2, 2023
Details ⬇️https://t.co/eBl8qYI3VgIncredible news for Nepal fans as their team create history 🙌
— ICC (@ICC) May 2, 2023
Details ⬇️https://t.co/eBl8qYI3Vg
ಕಠ್ಮಂಡುವಿನಲ್ಲಿ ಮಳೆಯಿಂದ ಅಡ್ಡಿಪಡಿಸಿದ ಎಸಿಸಿ ಪ್ರೀಮಿಯರ್ ಕಪ್ ಫೈನಲ್‌ನ ಮೀಸಲು ದಿನದಂದು ಆತಿಥೇಯ ನೇಪಾಳ ಗುಲ್ಶನ್ ಝಾ ಅವರು ಅಜೇಯ 67 ರನ್ಗಳ ಸಹಾಯದಿಂದ ಗೆಲುವು ಬರೆಯಿತು. ಇದಕ್ಕೂ ಮುನ್ನ ಯುನೈಟೆಡ್ ಅರಬ್ ಎಮಿರೇಟ್ಸ್ 106 ರನ್ ಗಳಿಸಿ 9 ವಿಕೆಟ್ ಕಳೆದುಕೊಂಡಿದ್ದಾಗ ಮಳೆ ಬಂದ ಕಾರಣ ಮೀಸಲು ದಿನಕ್ಕೆ ಪಂದ್ಯ ಮುಂದೂಡಲಾಯಿತು.
ಇಂದು ಪಂದ್ಯ ಆರಂಭವಾಗುತ್ತಿದ್ದಂತೆ ನೇಪಾಳದ ಬೌಲರ್ ಲಲಿತ್ ರಾಜ್ಬನ್ಶಿ ಅವರು ಯುಎಇ ವಿಕೆಟ್ ಕಿತ್ತರು. ಇದರಿಂದ ಯುನೈಟೆಡ್ ಅರಬ್ ಎಮಿರೇಟ್ಸ್ 33.1 ಓವರ್‌ನಲ್ಲಿ 117 ರನ್ಗೆ ಸರ್ವಪತನ ಕಂಡಿತು. ನಿನ್ನೆ ಮಳೆಗೂ ಮುನ್ನ ಯುಎಇ ಪರ ಆಸಿಫ್ ಖಾನ್ ಉತ್ತಮ ಪ್ರದರ್ಶನ ನೀಡಿದರು. ಅವರು ನಿನ್ನೆಯ ಇನ್ನಿಂಗ್ಸ್ನಲ್ಲಿ 54 ಬಾಲ್ ಎದುರಿಸಿ 7 ಬೌಂಡರಿ ಮತ್ತು 1 ಸಿಕ್ಸ್ನಿಂದ 46 ರನ್ಗಳಿಸಿ ಔಟ್ ಆದರು. 4 ರನ್ನಿಂದ ಅರ್ಧಶತಕ ವಂಚಿತರಾಗಿದ್ದಾರೆ.
-
What a moment for Nepal Cricket! 😍
— AsianCricketCouncil (@ACCMedia1) May 2, 2023 " class="align-text-top noRightClick twitterSection" data="
A top effort against UAE has not only given them the #ACCMensPremierCup trophy but has helped them to qualify for the Men's Asia Cup 2023! 👏
Congratulations to the Nepal Cricket Team! 🤗#ACC #NEPALvsUAE pic.twitter.com/x5e3ha4kOy
">What a moment for Nepal Cricket! 😍
— AsianCricketCouncil (@ACCMedia1) May 2, 2023
A top effort against UAE has not only given them the #ACCMensPremierCup trophy but has helped them to qualify for the Men's Asia Cup 2023! 👏
Congratulations to the Nepal Cricket Team! 🤗#ACC #NEPALvsUAE pic.twitter.com/x5e3ha4kOyWhat a moment for Nepal Cricket! 😍
— AsianCricketCouncil (@ACCMedia1) May 2, 2023
A top effort against UAE has not only given them the #ACCMensPremierCup trophy but has helped them to qualify for the Men's Asia Cup 2023! 👏
Congratulations to the Nepal Cricket Team! 🤗#ACC #NEPALvsUAE pic.twitter.com/x5e3ha4kOy
ನೇಪಾಳದ ಪರ ಲಲಿತ್ ರಾಜ್ಬನ್ಶಿ 7.1 ಓವರ್ ಮಾಡಿ 14 ರನ್ ಬಿಟ್ಟುಕೊಟ್ಟು 4 ವಿಕೆಟ್ ಪಡೆದು ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದರು. ಕರನ್ ಕೆಸಿ ಮತ್ತು ಲಮಿಚ್ಛನೇ ತಲಾ ಎರಡು ವಿಕೆಟ್ ಪಡೆದರೆ, ಗುಲ್ಶನ್ ಝಾ ಮತ್ತು ಸೋಂಪಾಲ್ ಕಮಿ ತಾಲಾ ಒಂದು ವಿಕೆಟ್ ಕಿತ್ತರು.
118 ರನ್ ಗುರಿಯನ್ನು ಬೆನ್ನು ಹತ್ತಿದ ನೇಪಾಳದ ಆರಂಭಿಕರು ಬೇಗ ಪೆವಿಲಿಯನ್ ದಾರಿ ಹಿಡಿದರು. ಕುಶಾಲ್ ಭುರ್ಟೆಲ್ (1) ಮತ್ತು ಆಸಿಫ್ ಶೇಖ್ (8) ಮತ್ತು ನಾಯಕ ರೋಹಿತ್ ಪೌಡೆಲ್ (1) ಬೇಗ ವಿಕೆಟ್ ಕೊಟ್ಟರು. ಇದರಿಂದ ನೇಪಾಳ ಸಂಕಷ್ಟಕ್ಕೆ ಒಳಗಾಯಿತು. ಆದರೆ ಎಡಗೈ ಆಲ್‌ರೌಂಡರ್ ಝಾ ಅವರನ್ನು ಮೂರನೇ ಕ್ರಮಾಂಕಕ್ಕೆ ಬಡ್ತಿ ನೀಡುವುದು ಆತಿಥೇಯರಿಗೆ ಲಾಭವಾಯಿತು. ಅವರಿಗೆ ಭೀಮ್ ಶಾರ್ಕಿ ಉತ್ತಮ ಜೊತೆಯಾಟ ಕೊಟ್ಟರು.
17 ವರ್ಷ ವಯಸ್ಸಿನ ಗುಲ್ಶನ್ ಝಾ ಅಜೇಯ 67 ರನ್ ಮಾಡಿ ಭೀಮ್ ಶಾರ್ಕಿ (36) ಅವರೊಂದಿಗೆ 96 ರನ್ ಜೊತೆಯಾಟ ನೇಪಾಳ 30 ಓವರ್‌ನಲ್ಲಿ 118 ರನ್ನ ಗುರಿಯನ್ನು ಸುಲಭವಾಗಿ ಮುಟ್ಟುವಂತೆ ಮಾಡಿತು. ನೇಪಾಳ ಗೆಲುವು ದಾಖಲಿಸುತ್ತಿದ್ದಂತೆ ಮತ್ತೆ ವರುಣ ಮೈದಾನವನ್ನು ತೊಯ್ದಿದ್ದ. ಇವರ ಚುರುಕಿನ ಆಟದ ನೆರವಿನಿಂದ ಪಂದ್ಯ ಫಲಿತಾಂಶ ಕಂಡಿತು.
ಪಾಕಿಸ್ತಾನದಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ ಏಷ್ಯಾಕಪ್ ಆಯೋಜನೆಗೊಳ್ಳಲಿದೆ. ಆದರೆ, ಭಾರತ ಪಾಕಿಸ್ತಾನ ಪ್ರವಾಸ ಮಾಡುವುದಿಲ್ಲ ಎಂದು ಹೇಳಿರುವುದು ಇನ್ನೂ ಗೊಂದಲಮಯವಾಗಿಯೇ ಇದೆ. ಪಾಕಿಸ್ತಾನ ಹೈಬ್ರೀಡ್ ಮಾದರಿ ಪಂದ್ಯವನ್ನು ಆಡಿಸಲು ಸಿದ್ಧವಿದೆ ಎಂದು ಏಷ್ಯಾ ಕ್ರಿಕೆಟ್ ಕೌನ್ಸಿಲ್ಗೆ ಬರೆದು ಕೊಟ್ಟಿದೆ ಎನ್ನಲಾಗಿದೆ.
ಇದನ್ನೂ ಓದಿ: GT vs DC: ಗುಜರಾತ್ ವಿರುದ್ಧ ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ಬ್ಯಾಟಿಂಗ್ ಆಯ್ಕೆ