ETV Bharat / sports

ವಿರಾಟ್ ಕೊಹ್ಲಿ ಬ್ಯಾಟಿಂಗ್ 2014ರ ಪ್ರವಾಸ ನೆನಪಿಸುತ್ತಿದೆ: ನಾಸಿರ್ ಹುಸೇನ್​ - ನಾಸಿರ್ ಹುಸೇನ್

ಪಂದ್ಯ ಮೀಸಲು ದಿನವಾದ ಇಂದು ಬ್ಯಾಟಿಂಗ್ ಆರಂಭಿಸಿದ ಕೊಹ್ಲಿ ದಿನದ 6ನೇ ಓವರ್​ನಲ್ಲಿ ಜೇಮಿಸನ್​ ಓವರ್​ನಲ್ಲಿ ಔಟ್​ ಸೈಡ್​ ಎಡ್ಜ್​ ಮೂಲಕ ಕೀಪರ್​ಗೆ ಕ್ಯಾಚ್ ನೀಡಿ ಔಟಾದರು. ಮೊದಲೇ ಕ್ರೀಸ್​ ಬಿಟ್ಟು ನಿಂತಿದ್ದ ಕೊಹ್ಲಿ ಒಳ ಬರುತ್ತಿದ್ದ ಚೆಂಡನ್ನು ಯಾವುದೇ ಫೂಟ್ ಮೂವ್​ಮೆಂಟ್ ಇಲ್ಲದೇ ಆಡಿದ್ದರು. ಪರಿಣಾಮ ಎಡ್ಜ್​ ಆಗಿ ವಿಕೆಟ್​ ಒಪ್ಪಿಸಿದರು.

ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ
author img

By

Published : Jun 23, 2021, 7:10 PM IST

ಸೌತಾಂಪ್ಟನ್​: ಭಾರತ ತಂಡದ ನಾಯಕ ವಿರಾಟ್​ ಕೊಹ್ಲಿ ನ್ಯೂಜಿಲ್ಯಾಂಡ್​ ವಿರುದ್ಧದ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ ಫೈನಲ್​ನಲ್ಲಿ ಎರಡೂ ಇನ್ನಿಂಗ್ಸ್​ಗಳಲ್ಲೂ ಕೈಲ್ ಜೆಮೀಸನ್​ ಅವರಿಗೆ ವಿಕೆಟ್ ಒಪ್ಪಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಕಾಮೆಂಟೇಟರ್​ಗಳಾದ ಸುನೀಲ್ ಗವಾಸ್ಕರ್ ಮತ್ತು ನಾಸಿರ್​ ಹುಸೇನ್ 2014 ಇಂಗ್ಲೆಂಡ್​ ಪ್ರವಾಸದಲ್ಲಿ ಅನುಭವಿಸಿದ್ದ ವೈಫಲ್ಯವನ್ನು ಕೊಹ್ಲಿ ಮತ್ತೆ ಅನುಭವಿಸುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಪಂದ್ಯ ಮೀಸಲು ದಿನವಾದ ಇಂದು ಬ್ಯಾಟಿಂಗ್ ಆರಂಭಿಸಿದ ಕೊಹ್ಲಿ ದಿನದ 6ನೇ ಓವರ್​ನಲ್ಲಿ ಜೇಮಿಸನ್​ ಓವರ್​ನಲ್ಲಿ ಔಟ್​ ಸೈಡ್​ ಎಡ್ಜ್​ ಮೂಲಕ ಕೀಪರ್​ಗೆ ಕ್ಯಾಚ್ ನೀಡಿ ಔಟಾದರು. ಮೊದಲೇ ಕ್ರೀಸ್​ ಬಿಟ್ಟು ನಿಂತಿದ್ದ ಕೊಹ್ಲಿ ಒಳ ಬರುತ್ತಿದ್ದ ಚೆಂಡನ್ನು ಯಾವುದೇ ಫೂಟ್ ಮೂವ್​ಮೆಂಟ್ ಇಲ್ಲದೇ ಆಡಿದ್ದರು. ಪರಿಣಾಮ ಎಡ್ಜ್​ ಆಗಿ ವಿಕೆಟ್​ ಒಪ್ಪಿಸಿದರು.

13 ರನ್​ಗಳಿಸಿ ಕೊಹ್ಲಿದ ವಿಕೆಟ್​ ಒಪ್ಪಿಸಿದ ಬಗ್ಗೆ ಪ್ರತಿಕ್ರಿಯಿಸಿದ ಹುಸೇನ್ ಕೊಹ್ಲಿಯ ಆ ಹೊಡೆತ ನನಗೆ 2014ರಲ್ಲಿ ಭಾರತ ಇಂಗ್ಲೆಂಡ್ ಪ್ರವಾಸ ನೆನಪಿಸಿತು ಎಂದಿದ್ದಾರೆ.

" ಕೊಹ್ಲಿ ಔಟಾದ ರೀತೀ ನೋಡಿದರೆ ಸ್ವಲ್ಪ 2014ರ ಪ್ರವಾಸ ನೆನಪಿಸುತ್ತಿದೆ, ಅವರ ಆಟ 2018 ರಂತಿಲ್ಲ. 2014ರಲ್ಲಿ ಜೇಮ್ಸ್ ಆಂಡರ್ಸನ್ ಅವರಿಗೆ ತೊಂದರೆಯನ್ನುಂಟು ಮಾಡಿದ್ದರು. ಆದರೆ, ಕಳೆದ ಪ್ರವಾಸದಲ್ಲಿ ಅವರು ಇಂಗ್ಲೆಂಡ್​ನಲ್ಲಿ ಉತ್ತಮವಾಗಿ ಆಡಿದ್ದರು ಎಂದು ಕಾಮೆಂಟರಿ ವೇಳೆ ಉಲ್ಲೇಖಿಸಿದ್ದರು.

ಕೊಹ್ಲಿ 2014ರಲ್ಲಿ 13.50 ಸರಾಸರಿಯಲ್ಲಿ ರನ್​ಗಳಿಸಿದ್ದರು. ಆದರೆ, ಮುಂದಿನ ಪ್ರವಾಸದಲ್ಲಿ ತಮ್ಮ ಆಟವನ್ನು ಸುಧಾರಿಸಿಕೊಂಡಿದ್ದ ಅವರು 500+ ರನ್​ಗಳಿಸಿ ಮಿಂಚಿದ್ದರು. ಆದರೆ, ಇದೀಗ ಮತ್ತೆ ಅದೇ ಸಮಸ್ಯೆ ಎದುರಿಸಿ ವಿದೇಶಿ ಪಿಚ್​ನಲ್ಲಿ ಔಟಾಗುತ್ತಿದ್ದಾರೆ.

ಇದನ್ನು ಓದಿ:ಕೊನೆಯ ಪಂದ್ಯವನ್ನಾಡುತ್ತಿರುವ ವಾಟ್ಲಿಂಗ್​ಗೆ ಅಭಿನಂದಿಸಿದ Kohli: ವಿಡಿಯೋ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.