ಶಾರ್ಜಾ : ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪರ ಭರ್ಜರಿ ಪ್ರದರ್ಶನ ನೀಡುತ್ತಿರುವ ಸುನಿಲ್ ನರೈನ್, ವೆಸ್ಟ್ ಇಂಡೀಸ್ ಟಿ-20 ವಿಶ್ವಕಪ್ ಘೋಷಿತ ತಂಡದಲ್ಲಿ ಜಾಗ ಪಡೆದುಕೊಂಡಿಲ್ಲ. ಆದರೆ, ಅದ್ಭುತ ಪ್ರದರ್ಶನದಿಂದಾಗಿ ಇವರಿಗೆ ಜಾಗ ಸಿಗಬಹುದು ಎಂಬ ಮಾತು ಕೇಳಿ ಬರಲು ಶುರುವಾಗಿದ್ದವು. ಇದಕ್ಕೆ ಖುದ್ದಾಗಿ ತಂಡದ ಕ್ಯಾಪ್ಟನ್ ಪೋಲಾರ್ಡ್ ಸ್ಪಷ್ಟನೆ ನೀಡಿದ್ದಾರೆ.
ಕೆಕೆಆರ್ ಪರ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿ ಮಿಂಚುತ್ತಿರುವ ಆಲ್ರೌಂಡರ್ ನರೈನ್ಗೆ ಐಸಿಸಿ ಟಿ-20 ವಿಶ್ವಕಪ್ ಟೂರ್ನಿಯ ವೆಸ್ಟ್ ಇಂಡೀಸ್ ತಂಡದಲ್ಲಿ ಸ್ಥಾನ ಇಲ್ಲ ಎಂದು ಪೋಲಾರ್ಡ್ ಹೇಳಿಕೊಂಡಿದ್ದಾರೆ. ಈಗಾಗಲೇ ಆಯ್ಕೆ ಮಂಡಳಿ ಇದಕ್ಕೆ ಸಂಬಂಧಿಸಿದಂತೆ ಮಾಹಿತಿ ಹಂಚಿಕೊಂಡಿದೆ. ನಾನು ನೀಡುತ್ತಿರುವ ಹೇಳಿಕೆಗೆ ಬೇರೆ ಅರ್ಥ ಕಲ್ಪಿಸುವುದು ಬೇಡ. ಈಗಾಗಲೇ 15 ಅತ್ಯುತ್ತಮ ಆಟಗಾರರನ್ನ ವಿಶ್ವಕಪ್ಗಾಗಿ ಘೋಷಣೆ ಮಾಡಲಾಗಿದೆ ಎಂದಿದ್ದಾರೆ.
ದುಬೈನಲ್ಲಿ ನಡೆಯುತ್ತಿರುವ ಐಪಿಎಲ್ನಲ್ಲಿ ನರೈನ್, ಆಡಿರುವ 8 ಪಂದ್ಯಗಳಿಂದ ಒಟ್ಟು 11 ವಿಕೆಟ್ ಪಡೆದುಕೊಂಡು ಮಿಂಚಿದ್ದಾರೆ. ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ ಪ್ರಮುಖ 4 ವಿಕೆಟ್ ಪಡೆದಿದ್ದಲ್ಲದೇ ಮಹತ್ವದ ರನ್ಗಳಿಕೆ ಮಾಡುವ ಮೂಲಕ ತಂಡದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ನಿರ್ವಹಿಸಿದ್ದರು.
ಇದನ್ನೂ ಓದಿರಿ: ಪ್ರತಿಭೆಯಿದ್ದರೂ IPLನಲ್ಲಿ ಮಯಾಂಕ್ ಹೆಚ್ಚು ಕಡೆಗಣನೆಗೆ ಒಳಗಾಗುತ್ತಿದ್ದಾರೆ : ಆಕಾಶ್ ಚೋಪ್ರಾ
ಗಾಯದ ಸಮಸ್ಯೆ ಬಂದರೆ ಅವಕಾಶ
ವಿಶ್ವಕಪ್ಗಾಗಿ ಈಗಾಗಲೇ ತಂಡ ಘೋಷಣೆಯಾಗಿದ್ದು, ಸದ್ಯಕ್ಕೆ ನರೈನ್ಗೆ ಅವಕಾಶವಿಲ್ಲ. ಒಂದು ವೇಳೆ ತಂಡದ ಪ್ಲೇಯರ್ಸ್ಗಳಲ್ಲಿ ಗಾಯದ ಸಮಸ್ಯೆ ಕಾಣಿಸಿಕೊಂಡಾಗ ಅವಕಾಶ ನೀಡಲಾಗುವುದು ಎಂದಿದ್ದಾರೆ. ವಿಶೇಷವೆಂದರೆ 2019ರ ನಂತರ ನರೈನ್ ವೆಸ್ಟ್ ಇಂಡೀಸ್ ತಂಡದಲ್ಲಿ ಕಾಣಿಸಿಕೊಂಡಿಲ್ಲ. ವಿಶ್ವಕಪ್ಗೋಸ್ಕರ ನಡೆದ ಫಿಟ್ನೇಸ್ ಪರೀಕ್ಷೆಯಲ್ಲೂ ಅವರು ಫೇಲ್ ಆಗಿದ್ದಾರೆ.