ETV Bharat / sports

ಅಹಮದಾಬಾದ್​​ನಲ್ಲಿ ಭಾರತ ಪಾಕ್​ ಪಂದ್ಯ ಬೇಡ.. ಬೇಕಿದ್ದರೆ ಬೇರೆ ಸ್ಥಳಗಳಲ್ಲಿ ಆಯೋಜಿಸಿ, ಐಸಿಸಿಗೆ ಪಿಸಿಬಿ ಒತ್ತಾಯ!

ಐಸಿಸಿ ಅಧ್ಯಕ್ಷ ಬಾರ್ಕ್ಲೇ ಮತ್ತು ಐಸಿಸಿ ಜನರಲ್ ಮ್ಯಾನೇಜರ್ ಜಿಯೋಫ್ ಅಲ್ಲಾರ್ಡಿಸ್ ಇತ್ತೀಚೆಗೆ ಕರಾಚಿಗೆ ಭೇಟಿ ನೀಡಿ ವಿಶ್ವಕಪ್​​​ ಪಂದ್ಯಗಳ ಬಗ್ಗೆ ಚರ್ಚಿಸಿದರು. ಈ ವೇಳೆ, ಪಿಸಿಬಿ ವಿಶ್ವಕಪ್ ಪಂದ್ಯಗಳನ್ನು ತಟಸ್ಥ ಸ್ಥಳದಲ್ಲಿ ಆಡುವಂತೆ ಒತ್ತಾಯಿಸುವುದಿಲ್ಲ ಎಂದು ಭರವಸೆ ನೀಡಿದೆ ಎಂದು ತಿಳಿದು ಬಂದಿದೆ.

author img

By

Published : Jun 8, 2023, 7:11 AM IST

Etv Bharatಅಹಮದಾಬಾದ್​​ನಲ್ಲಿ ಭಾರತ  ಪಾಕ್​ ಪಂದ್ಯ ಬೇಡ.. ಬೇಕಿದ್ದರೆ ಬೇರೆ ಸ್ಥಳಗಳಲ್ಲಿ ಆಯೋಜಿಸಿ, ಐಸಿಸಿಗೆ ಪಿಸಿಬಿ ಒತ್ತಾಯ!
Etv Bhaಅಹಮದಾಬಾದ್​​ನಲ್ಲಿ ಭಾರತ ಪಾಕ್​ ಪಂದ್ಯ ಬೇಡ.. ಬೇಕಿದ್ದರೆ ಬೇರೆ ಸ್ಥಳಗಳಲ್ಲಿ ಆಯೋಜಿಸಿ, ಐಸಿಸಿಗೆ ಪಿಸಿಬಿ ಒತ್ತಾಯ!rat

ಕರಾಚಿ( ಪಾಕಿಸ್ತಾನ): ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಸಾಂಪ್ರದಾಯಿಕ ಎದುರಾಳಿ ಭಾರತದ ವಿರುದ್ಧ ವಿಶ್ವಕಪ್ ಪಂದ್ಯವನ್ನು ಆಡುವ ಬಗ್ಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಧ್ಯಕ್ಷ ನಜಮ್ ಸೇಥಿ ಆತಂಕ ವ್ಯಕ್ತಪಡಿಸಿದ್ದಾರೆ. ಐಸಿಸಿ ಅಧ್ಯಕ್ಷ ಗ್ರೆಗ್ ಬಾರ್ಕ್ಲೇ ಅವರ ಬಳಿ ಈ ಆತಂಕವನ್ನು ತೋಡಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಪಿಸಿಬಿ ಫೈನಲ್​ ಪಂದ್ಯ ಕೋಲ್ಕತ್ತಾ, ಚೆನ್ನೈ ಮತ್ತು ಬೆಂಗಳೂರಿನಲ್ಲಿ ನಡೆಯಬೇಕು ಎಂಬುದಾಗಿ ಬಯಸಿದೆ ಎಂದು ತಿಳಿದು ಬಂದಿದೆ.

ಬಾರ್ಕ್ಲೇ ಮತ್ತು ಐಸಿಸಿ ಜನರಲ್ ಮ್ಯಾನೇಜರ್ ಜಿಯೋಫ್ ಅಲ್ಲಾರ್ಡಿಸ್ ಇತ್ತೀಚೆಗೆ ಕರಾಚಿಗೆ ಭೇಟಿ ನೀಡಿದ್ದರು. ಈ ವೇಳೆ, ವಿಶ್ವಕಪ್​​ ಪಂದ್ಯಗಳು ತಟಸ್ಥ ಸ್ಥಳದಲ್ಲಿ ನಡೆಯಬೇಕು ಎಂದು ತಾನು ಒತ್ತಾಯಿಸುವುದಿಲ್ಲ ಎಂದು ಪಿಸಿಬಿ ಐಸಿಸಿಗೆ ಖಚಿತ ಪಡಿಸಿತ್ತು. ಇನ್ನೊಂದಡೆ, ಹೈಬ್ರಿಡ್​​ ಮಾದರಿಯಲ್ಲಿ ಏಷ್ಯಾ ಕಪ್​ ನಡೆಸುವ ಪಿಸಿಬಿ ಮನವಿಯನ್ನು ಈ ಮೊದಲೇ ಐಸಿಸಿ ತಳ್ಳಿ ಹಾಕಿತ್ತು. ಆದರೆ, ಪಾಕಿಸ್ತಾನವು ಅಹಮದಾಬಾದ್‌ನಲ್ಲಿ ಪಂದ್ಯಗಳನ್ನು ನಿಗದಿಪಡಿಸುವುದನ್ನು ಬಯಸುವುದಿಲ್ಲ ಎಂದು ನಜಮ್​ ಸೇಥಿ, ಬಾರ್ಕ್ಲೇ ಮತ್ತು ಅಲಾರ್ಡಿಸ್‌ಗೆ ಸ್ಪಷ್ಟಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

"ಅಕ್ಟೋಬರ್ ಮತ್ತು ನವೆಂಬರ್‌ನಲ್ಲಿ ನಡೆಯಲಿರುವ ಮಹತ್ವದ ಟೂರ್ನಿಗೆ ಪಾಕಿಸ್ತಾನ ತಂಡ ರೆಡಿಯಾಗಿದ್ದು, ಪಾಕಿಸ್ತಾನ ಸರ್ಕಾರದಿಂದ ಅನುಮತಿ ಪಡೆದುಕೊಳ್ಳಲಿದೆ. ಚೆನ್ನೈ, ಬೆಂಗಳೂರು ಮತ್ತು ಕೋಲ್ಕತ್ತಾದಲ್ಲಿ ತಮ್ಮ ಪಂದ್ಯಗಳನ್ನು ನಿಗದಿಪಡಿಸುವಂತೆ ಇದೇ ವೇಳೆ ಪಿಸಿಬಿ ಮುಖಸ್ಥ ನಜಮ್​ ಸೇಥಿ ಐಸಿಸಿಗೆ ವಿನಂತಿಸಿದ್ದಾರೆ" ಎಂದು ಮೂಲಗಳು ತಿಳಿಸಿವೆ. ಅಹಮದಾಬಾದ್‌ನಲ್ಲಿ ಭಾರತ - ಪಾಕ್​ ಪಂದ್ಯ ನಡೆದರೆ, ತಮ್ಮ ಆಟಗಾರರ ಸುರಕ್ಷತೆಯ ಬಗ್ಗೆ ಆತಂಕವಿದೆ ಎಂದು ಸೇಥಿ ಹೇಳಿದ್ದಾರೆ. 2005 ರಲ್ಲಿ ಮೊಟೆರಾ ಕ್ರೀಡಾಂಗಣದಲ್ಲಿ ನಡೆದ ಘಟನೆಯನ್ನು ಉಲ್ಲೇಖಿಸಿ, ಈ ಆತಂಕವನ್ನು ವ್ಯಕ್ತಪಡಿಸಿದ್ದಾರೆ.

ಏಷ್ಯಾ ಕಪ್‌ಗಾಗಿ ಪಾಕಿಸ್ತಾನದ ಹೈಬ್ರಿಡ್ ಮಾದರಿಯನ್ನು ಒಪ್ಪಿಕೊಳ್ಳಲು ಬಿಸಿಸಿಐಗೆ ಮನವರಿಕೆ ಮಾಡುವಂತೆ ಸೇಥಿ ಇದೇ ವೇಳೆ ಐಸಿಸಿ ಅಧ್ಯಕ್ಷರಿಗೆ ಮನವಿ ಮಾಡಲಾಗಿದೆ ಎಂದು ಪಿಸಿಬಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

"ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್‌ಗೆ ಹೋಲಿಸಿದರೆ ಪಾಕಿಸ್ತಾನವು ಹೊಸ ನಿಯಮದ ಪ್ರಕಾ ಐಸಿಸಿ ಆದಾಯದಲ್ಲಿ ಕಡಿಮೆ ಪಾಲನ್ನು ಪಡೆಯುತ್ತಿದೆ, ಇದು ನಮಗೆ ಅನ್ಯಾಯವಾಗುತ್ತಿದೆ ಎಂಬ ಅಂಶವನ್ನು ಸೇಥಿ ಹೇಳುವ ಮೂಲಕ ಐಸಿಸಿಯ ಗಮನಸೆಳೆದಿದ್ದಾರೆ" ಎಂದು ಮೂಲಗಳು ತಿಳಿಸಿವೆ. "ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಿಯಮಿತವಾಗಿ ಭಾರತದೊಂದಿಗೆ ದ್ವಿಪಕ್ಷೀಯ ಸರಣಿಗಳನ್ನು ಆಡುತ್ತವೆ ಮತ್ತು ಅವರ ಆಟಗಾರರು ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಭಾಗವಹಿಸುತ್ತಾರೆ. ಅಂದರೆ ಐಪಿಎಲ್ ನಿರ್ವಹಣೆಯಿಂದ ಎರಡು ಮಂಡಳಿಗಳಿಗೆ ಹೆಚ್ಚುವರಿ ಆದಾಯ" ಬರುತ್ತಿದೆ ಎಂದು ಸೇಥಿ ವಾದಿಸಿದರು ಎಂದು ತಿಳಿದು ಬಂದಿದೆ.

ಇದನ್ನು ಓದಿ:ನಿವೃತ್ತಿ ವಾಪಸ್ ಪಡೆದು ಆ್ಯಶಸ್ ಟೆಸ್ಟ್‌ ಸರಣಿಗೆ ಇಂಗ್ಲೆಂಡ್‌ ತಂಡ ಸೇರಿದ ಮೋಯಿನ್​ ಅಲಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.