ಲಾಹೋರ್: ವಿಶ್ವದ ಅತ್ಯಂತ ವೇಗದ ಬೌಲರ್ಗಳಲ್ಲಿ ಅಗ್ರಗಣ್ಯನಾಗಿರುವ ಪಾಕಿಸ್ತಾನದ ಶೋಯಭ್ ಅಖ್ತರ್ ತಮ್ಮ ಓಡುವ ದಿನಗಳು ಅಂತ್ಯವಾಗಿದೆ ಎಂದು ಹೇಳಿದ್ದಾರೆ. ಅವರು ಶೀಘ್ರದಲ್ಲೇ ಸಂಪೂರ್ಣ ಮಂಡಿ(knee replacement) ಬದಲಾವಣೆಯ ಶಸ್ತ್ರಚಿಕಿತ್ಸೆಗಾಗಿ ಮೆಲ್ಬೋರ್ನ್ಗೆ ತೆರಳುವುದಾಗಿ ಹೇಳಿಕೊಂಡಿದ್ದಾರೆ.
ಮಾರಕ ವೇಗಿ ಎಂದು ಕ್ರಿಕೆಟ್ ಲೋಕದಲ್ಲಿ ಗುರುತಿಸಿಕೊಂಡಿದ್ದ ಅಖ್ತರ್ ಅವರ ವೃತ್ತಿ ಜೀವನ ಬಹುಪಾಲು ಗಾಯಗಳಿಂದಲೇ ಅಂತ್ಯವಾಯಿತು. ಅವರು ಕಳೆದ ಎರಡು ವರ್ಷಗಳ ಹಿಂದೆಯಷ್ಟೇ ಮೆಲ್ಬೋರ್ನ್ನಲ್ಲಿ ಮೊಣಕಾಲು ಶಸ್ತ್ರಚಿಕಿತ್ಸೆಗೆ(Shoaib Akhtar knee surgery ) ಒಳಗಾಗಿದ್ದರು. ಇದೀಗ ಮತ್ತೆ ಸಂಪೂರ್ಣ ಮಂಡಿ ಬದಲಿಸಿಕೊಳ್ಳುವ (total knee replacement) ಶಸ್ತ್ರಚಿಕಿತ್ಸೆಗೆ ಒಳಗಾಗುವುದಾಗಿ ತಮ್ಮ ವ್ಯಾಯಾಮ ಮಾಡುವ ಸಂದರ್ಭದ ಫೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ.
-
My running days are over as am leaving for total knee replacement in Australia Melbourne very soon 🥲🤞. pic.twitter.com/1sO6dHESPJ
— Shoaib Akhtar (@shoaib100mph) November 21, 2021 " class="align-text-top noRightClick twitterSection" data="
">My running days are over as am leaving for total knee replacement in Australia Melbourne very soon 🥲🤞. pic.twitter.com/1sO6dHESPJ
— Shoaib Akhtar (@shoaib100mph) November 21, 2021My running days are over as am leaving for total knee replacement in Australia Melbourne very soon 🥲🤞. pic.twitter.com/1sO6dHESPJ
— Shoaib Akhtar (@shoaib100mph) November 21, 2021
ನನ್ನ ಓಡುವ ದಿನಗಳು ಅಂತ್ಯವಾಗಿವೆ, ನಾನು ಶೀಘ್ರದಲ್ಲೇ ಸಂಪೂರ್ಣ ಮಂಡಿ ಬದಲಾವಣೆ (knee replacement) ಶಸ್ತ್ರಚಿಕಿತ್ಸೆಗಾಗಿ ಮೆಲ್ಬೋರ್ನ್ಗೆ(ಆಸ್ಟ್ರೇಲಿಯಾ) ತೆರಳಲಿದ್ದೇನೆ ಎಂದು ಅಖ್ತರ್ ಟ್ವೀಟ್ ಮೂಲಕ ತಿಳಿಸಿದ್ದಾರೆ.
ರಾವಲ್ಪಿಂಡ್ ಎಕ್ಸ್ಪ್ರೆಸ್ ಖ್ಯಾತಿಯ ಅಖ್ತರ್ 2011ರಲ್ಲಿ ಎಲ್ಲಾ ಮಾದರಿಯ ಕ್ರಿಕೆಟ್ನಿಂದ ನಿವೃತ್ತಿ ಹೊಂದಿದ್ದರು. ಪ್ರಸ್ತುತ ತಮ್ಮ ಯೂಟ್ಯೂಬ್ ಚಾನಲ್ ಮೂಲಕ ಕ್ರಿಕೆಟ್ ಸಂಬಂಧಿಸಿದ ವಿಚಾರಗಳ ಬಗ್ಗೆ ವಿಶ್ಲೇಷಣೆ ಮಾಡುತ್ತಿದ್ದಾರೆ. ಅವರು ಪಾಕಿಸ್ತಾನ ಪರ 46 ಟೆಸ್ಟ್, 163 ಏಕದಿನ ಮತ್ತು 19 ಟಿ20 ಪಂದ್ಯಗಳಲ್ಲಿ ಕ್ರಮವಾಗಿ 178,247 ಮತ್ತು 15 ವಿಕೆಟ್ ಪಡೆದಿದ್ದಾರೆ. ಅಖ್ತರ್ 161.3Kph ನಲ್ಲಿ ಬೌಲಿಂಗ್ ಮಾಡಿ ವಿಶ್ವದ ಅತ್ಯಂತ ವೇಗದ ಎಸೆತದ ವಿಶ್ವದಾಖಲೆ ಹೊಂದಿದ್ದಾರೆ.
ಇದನ್ನೂ ಓದಿ:NZ VS IND: ಹರ್ಷಲ್, ವೆಂಕಟೇಶ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ನಾಯಕ ರೋಹಿತ್