ದುಬೈ : ಬಾಂಗ್ಲಾದೇಶದ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಮತ್ತು ಐರ್ಲೆಂಡ್ ಸ್ಕಾಟ್ಲೆಂಡ್ ತಂಡದ ಆಲ್ರೌಂಡರ್ ಬ್ರೈಸ್ ಕ್ಯಾಥ್ರಿನ್ ಕ್ರಮವಾಗಿ ಪುರುಷ ಮತ್ತು ಮಹಿಳೆಯರ ಐಸಿಸಿ ಮೇ ತಿಂಗಳ ಕ್ರಿಕೆಟಿಗ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಪುರುಷರ ವಿಭಾಗದಲ್ಲಿ ಪಾಕಿಸ್ತಾನದ ವೇಗಿ ಹಸನ್ ಅಲಿ, ಶ್ರೀಲಂಕಾದ ಸ್ಪಿನ್ನರ್ ಪ್ರವೀಣ್ ಜಯವಿಕ್ರಮ ಮತ್ತು ಮುಶ್ಫೀಕರ್ ರಹೀಮ್ ಐಸಿಸಿಯ ಮೇ ತಿಂಗಳ ಶ್ರೇಷ್ಠ ಆಟಗಾರ ಪ್ರಶಸ್ತಿ ಸುತ್ತಿಗೆ ನಾಮ ನಿರ್ದೇಶನಗೊಂಡಿದ್ದರು. ಇದೀಗ ರಹೀಮ್ ಹೆಚ್ಚು ಮತ ಪಡೆದು ಗೌರವಕ್ಕೆ ಪಾತ್ರರಾಗಿದ್ದಾರೆ.
-
1/1 – 100s/50s ⚡
— ICC (@ICC) June 14, 2021 " class="align-text-top noRightClick twitterSection" data="
237 ODI runs 🔥
Presenting the ICC Men’s Player of the Month for May 2021 👇#ICCPOTM pic.twitter.com/bOn0aN0S37
">1/1 – 100s/50s ⚡
— ICC (@ICC) June 14, 2021
237 ODI runs 🔥
Presenting the ICC Men’s Player of the Month for May 2021 👇#ICCPOTM pic.twitter.com/bOn0aN0S371/1 – 100s/50s ⚡
— ICC (@ICC) June 14, 2021
237 ODI runs 🔥
Presenting the ICC Men’s Player of the Month for May 2021 👇#ICCPOTM pic.twitter.com/bOn0aN0S37
ಜಿಂಬಾಬ್ವೆ ವಿರುದ್ಧ ನಡೆದ ಟೆಸ್ಟ್ ಸರಣಿಯಲ್ಲಿ ಹಸನ್ ಅಲಿ 14 ವಿಕೆಟ್ ಪಡೆದಿದ್ದರು. ಶ್ರೀಲಂಕಾದ ಜಯವಿಕ್ರಮ ಬಾಂಗ್ಲಾದೇಶ ವಿರುದ್ಧ ಆಡಿದ ಒಂದೇ ಟೆಸ್ಟ್ ಒಂದ್ಯದಲ್ಲಿ 11 ವಿಕೆಟ್ ಪಡೆದಿದ್ದರು. ಅವರು ಶ್ರೀಲಂಕಾ ಜಯದಲ್ಲಿ ಪ್ರಮುಖ ಪಾತ್ರವಹಿಸಿದ್ದರಲ್ಲದೇ, ಪದಾರ್ಪಣೆ ಮಾಡಿದ ಪಂದ್ಯದಲ್ಲೇ ಅತ್ಯುತ್ತಮ ಪ್ರದರ್ಶನ ತೋರಿದ ದಾಖಲೆಗೆ ಪಾತ್ರರಾಗಿದ್ದರು.
ಬಾಂಗ್ಲಾದೇಶದ ರಹೀಮ್ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ 237 ರನ್ಗಳಿಸಿ ಮೊದಲ ಬಾರಿಗೆ ಲಂಕಾ ವಿರುದ್ದ ಸರಣಿ ಜಯ ಸಾಧಿಸಲು ಪ್ರಮುಖ ಪಾತ್ರವಹಿಸಿದ್ದಾರೆ. ಮಹಿಳೆಯರ ವಿಭಾಗದಲ್ಲಿ ಕ್ಯಾಥ್ರಿನ್ ಬ್ರೈಸ್ ಟಿ20 ಸರಣಿಯಲ್ಲಿ 86 ರನ್ ಮತ್ತು 5 ವಿಕೆಟ್, ಲೆವಿಸ್ 116 ಟಿ-20 ರನ್ಸ್ , ಲೀಹ್ 9 ಟಿ-20 ವಿಕೆಟ್ಸ್ ಪಡೆದಿದ್ದಾರೆ.
ಇದನ್ನು ಓದಿ: ICC test Ranking: ಭಾರತ ಹಿಂದಿಕ್ಕಿ ನಂ.1 ಸ್ಥಾನಕ್ಕೆ ಲಗ್ಗೆಯಿಟ್ಟ ಕಿವೀಸ್