ಮುಂಬೈ: ಸೋಲೇ ಕಾಣದೆ ಪ್ಲೇ-ಆಫ್ ಪ್ರವೇಶ ಪಡೆದಿರುವ ಮುಂಬೈ ಇಂಡಿಯನ್ಸ್ ಮತ್ತು ನಾಲ್ಕು ಪಂದ್ಯದಲ್ಲಿ ಎರಡರಲ್ಲಿ ಸೋಲು ಕಂಡಿರುವ ಯುಪಿ ವಾರಿಯರ್ಸ್ ನಡುವೆ ಇಲ್ಲಿನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ಮುಖಾಮುಖಿಯಾಗುತ್ತಿವೆ. ಟಾಸ್ ಗೆದ್ದಿರುವ ಯುಪಿ ವಾರಿಯರ್ಸ್ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.
ಮುಂಬೈ ಇಂಡಿಯನ್ಸ್ ಆಡುವ ತಂಡ: ಹೇಲಿ ಮ್ಯಾಥ್ಯೂಸ್, ಯಾಸ್ತಿಕಾ ಭಾಟಿಯಾ (ವಿಕೆಟ್ ಕೀಪರ್), ನ್ಯಾಟ್ ಸಿವರ್-ಬ್ರಂಟ್, ಹರ್ಮನ್‌ಪ್ರೀತ್ ಕೌರ್ (ನಾಯಕಿ), ಅಮೆಲಿಯಾ ಕೆರ್, ಇಸ್ಸಿ ವಾಂಗ್, ಹುಮೈರಾ ಕಾಜಿ, ಧಾರಾ ಗುಜ್ಜರ್, ಅಮಂಜೋತ್ ಕೌರ್, ಜಿಂಟಿಮಣಿ ಕಲಿತಾ, ಸೈಕಾ ಇಶಾಕ್
-
🚨 Team Updates 🚨
— Women's Premier League (WPL) (@wplt20) March 18, 2023 " class="align-text-top noRightClick twitterSection" data="
1️⃣ change for @UPWarriorz while @mipaltan remain unchanged.
A look at the Playing XIs of both teams 👌🏻
Follow the match ▶️ https://t.co/6bZ3042C4S #TATAWPL | #MIvUPW pic.twitter.com/2iwXBk8Z8U
">🚨 Team Updates 🚨
— Women's Premier League (WPL) (@wplt20) March 18, 2023
1️⃣ change for @UPWarriorz while @mipaltan remain unchanged.
A look at the Playing XIs of both teams 👌🏻
Follow the match ▶️ https://t.co/6bZ3042C4S #TATAWPL | #MIvUPW pic.twitter.com/2iwXBk8Z8U🚨 Team Updates 🚨
— Women's Premier League (WPL) (@wplt20) March 18, 2023
1️⃣ change for @UPWarriorz while @mipaltan remain unchanged.
A look at the Playing XIs of both teams 👌🏻
Follow the match ▶️ https://t.co/6bZ3042C4S #TATAWPL | #MIvUPW pic.twitter.com/2iwXBk8Z8U
ಯುಪಿ ವಾರಿಯರ್ಸ್ ಆಡುವ ತಂಡ: ಅಲಿಸ್ಸಾ ಹೀಲಿ(ವಿಕೆಟ್ ಕೀಪರ್/ನಾಯಕಿ), ದೇವಿಕಾ ವೈದ್ಯ, ಕಿರಣ್ ನವಗಿರೆ, ತಹ್ಲಿಯಾ ಮೆಕ್‌ಗ್ರಾತ್, ಗ್ರೇಸ್ ಹ್ಯಾರಿಸ್, ದೀಪ್ತಿ ಶರ್ಮಾ, ಪಾರ್ಶವಿ ಚೋಪ್ರಾ, ಸಿಮ್ರಾನ್ ಶೇಖ್, ಸೋಫಿ ಎಕ್ಲೆಸ್ಟೋನ್, ಅಂಜಲಿ ಸರ್ವಾಣಿ, ರಾಜೇಶ್ವರಿ ಗಾಯಕ್ವಾಡ್
ಮುಂಬೈಗೆ ನೇರ ಫೈನಲ್ ಪ್ರವೇಶಿಸುವ ಗುರಿ: ಮುಂಬೈ ಇಂಡಿಯನ್ಸ್ ಇಂದಿನ ಪಂದ್ಯದಲ್ಲಿ ಗೆಲುವು ದಾಖಲಿಸಿದರೆ ನೇರ ಪೈನಲ್ ಟಿಕೆಟ್ ಸಿಕ್ಕಂತೆ. ಡೆಲ್ಲಿ ಈಗಾಗಲೇ ಎರಡರಲ್ಲಿ ಸೋತಿದ್ದು, ರನ್ ರೇಟ್ ಕಡಿಮೆ ಇದೆ. ಡೆಲ್ಲಿ ಬಾಕಿ ಎರಡು ಪಂದ್ಯ ಗೆದ್ದಲ್ಲಿ 8ರಲ್ಲಿ 6 ಗೆದ್ದು 12 ಅಂಕ ಗಳಿಸಲಿದೆ. ಬೃಹತ್ ಗೆಲುವು ಸಾಧಿಸಿದರೆ ಮಾತ್ರ ರನ್ ರೇಟ್ ಏರಿಕೆ ಆಗಬಹುದು. ಆದರೆ ಮುಂಬೈ ಪ್ರಸ್ತುತ +3.32, ಡೆಲ್ಲಿ +1.4 ರನ್ ರೇಟ್ ಹೊಂದಿದೆ ಹೀಗಾಗಿ ಈ ಪಂದ್ಯ ಮುಂಬೈ ಗೆದಲ್ಲಿ ಫೈನಲ್ ಪ್ರವೇಶ ಪಡೆದಂತೆ ಆಗಲಿದೆ.
-
🚨 Toss Update 🚨@UPWarriorz win the toss and elect to bowl first against @mipaltan.
— Women's Premier League (WPL) (@wplt20) March 18, 2023 " class="align-text-top noRightClick twitterSection" data="
Follow the match ▶️ https://t.co/6bZ3042C4S #TATAWPL | #MIvUPW pic.twitter.com/LqLaohQ7BX
">🚨 Toss Update 🚨@UPWarriorz win the toss and elect to bowl first against @mipaltan.
— Women's Premier League (WPL) (@wplt20) March 18, 2023
Follow the match ▶️ https://t.co/6bZ3042C4S #TATAWPL | #MIvUPW pic.twitter.com/LqLaohQ7BX🚨 Toss Update 🚨@UPWarriorz win the toss and elect to bowl first against @mipaltan.
— Women's Premier League (WPL) (@wplt20) March 18, 2023
Follow the match ▶️ https://t.co/6bZ3042C4S #TATAWPL | #MIvUPW pic.twitter.com/LqLaohQ7BX
ಆರ್ಸಿಬಿ ಎದುರು ಸೋಲು: ಯುಪಿ ವಾರಿಯರ್ಸ್ ಕೊನೆಯ ಪಂದ್ಯದಲ್ಲಿ ಆರ್ಸಿಬಿ ವಿರುದ್ಧ ಸೋಲನುಭವಿಸಿತ್ತು. ಆರ್ಸಿಬಿ ಬೌಲಿಂನಗ್ಗೆ ಮಣಿದ ಯುಪಿ ಯುವತಿಯರು 135 ಕ್ಕೆ ಆಲ್ಔಟ್ ಆಗಿದ್ದರು. ಆರ್ಸಿಬಿ ಇದನ್ನು 5 ವಿಕೆಟ್ ಕಳೆದುಕೊಂಡು ಗುರಿ ತಲುಪಿತ್ತು. ಇದಕ್ಕೂ ಮುನ್ನ, ಯುಪಿ ವಾರಿಯರ್ಸ್ ಮುಂಬೈ ವಿರುದ್ಧವೇ 8 ವಿಕೆಟ್ಗಳ ಸೋಲು ಕಂಡಿತ್ತು. ಡೆಲ್ಲಿ ವಿರುದ್ಧವೂ ಸೋಲನುಭವಿಸಿತ್ತು.
ಕಳೆದ ಮುಖಾಮುಖಿ: ರೌಡ್ ರಾಬಿನ್ನ ಮೊದಲ ಸುತ್ತಿನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಯುಪಿ ವಾರಿಯರ್ಸ್ 8 ವಿಕೆಟ್ಗಳ ಸೋಲನ್ನು ಕಂಡಿತ್ತು. ಯುಪಿ ವಾರಿಯರ್ಸ್ ತಂಡ 156 ರನ್ನ ಗುರಿಯನ್ನು 20 ಓವರ್ನಲ್ಲಿ ಎಂಐಗೆ ನೀಡಿತ್ತು. ನಾಯಕಿ ಅಲಿಸ್ಸಾ ಹೀಲಿ (58) ಮತ್ತು ತಹ್ಲಿಯಾ ಮೆಕ್‌ಗ್ರಾತ್ (50) ಅರ್ಧಶತಕದಿಂದ ಸಾಧಾರಣ ಗುರಿ ನೀಡಿತ್ತು. ಈ ಗುರಿಯನ್ನು ಬೆನ್ನು ಹತ್ತಿದ ಮುಂಬೈ 2 ವಿಕೆಟ್ ನಷ್ಟದಲ್ಲಿ ಈ ಗುರಿ ಸಾಧಿಸಿತ್ತು. ಯಾಸ್ತಿಕಾ ಭಾಟಿಯಾ 42, ನ್ಯಾಟ್ ಸಿವರ್-ಬ್ರಂಟ್ 45 ಮತ್ತು ನಾಯಕಿ ಹರ್ಮನ್‌ಪ್ರೀತ್ ಕೌರ್ 53 ರನ್ ಗಳಿಸಿದ್ದರು.
ಇದನ್ನೂ ಓದಿ: ವೀಕೆಂಡ್ನಲ್ಲಿ ಡಬಲ್ ಧಮಾಕಾ; ಎಂಐ vs ಯುಪಿ ಮತ್ತು ಬೆಂಗಳೂರು vs ಗುಜರಾತ್ ಮಧ್ಯೆ ಫೈಟ್