ETV Bharat / sports

ಮುಂದುವರೆದ ಮುಂಬೈ ಇಂಡಿಯನ್ಸ್​ ಗೆಲುವಿನ ಓಟ: ಗುಜರಾತ್​ ​ವಿರುದ್ಧ 55 ರನ್​ ಜಯ

ಮುಂದುವರೆದ ಮುಂಬೈ ಇಂಡಿಯನ್ಸ್​ ಗೆಲುವಿನ ಓಟ- ಸತತ ಐದು ಪಂದ್ಯಗಳಲ್ಲೂ ಹರ್ಮನ್‌ಪ್ರೀತ್ ಕೌರ್ ಪಡೆಗೆ ಜಯ

mumbai-indians-women-vs-gujarat-giants
ಮುಂದುವರೆದ ಮುಂಬೈ ಇಂಡಿಯನ್ಸ್​ ಗೆಲುವಿನ ಓಟ
author img

By

Published : Mar 14, 2023, 7:14 PM IST

Updated : Mar 14, 2023, 11:09 PM IST

ಮುಂಬೈ: ಮಹಿಳಾ ಪ್ರೀಮಯರ್ ಲೀಗ್​ನಲ್ಲಿ ಮುಂಬೈ ಇಂಡಿಯನ್ಸ್​ ತಂಡ ತನ್ನ ಭರ್ಜರಿ ಪ್ರದರ್ಶನ ಮುಂದುವರೆಸಿದೆ. ಗುಜರಾತ್​ ಜೈಂಟ್ಸ್​ ವಿರುದ್ಧ 55 ರನ್​ಗಳಿಂದ ಗೆಲುವು ಸಾಧಿಸಿದೆ. ಮೊದಲ ಬ್ಯಾಟಿಂಗ್ ಮಾಡಿದ್ದ ಮುಂಬೈ 20 ಓವರ್​ಗಳಲ್ಲಿ 8 ವಿಕೆಟ್ ನಷ್ಟಕ್ಕೆ​ 162 ರನ್​ ಪೇರಿತ್ತು. ಈ ಗುರಿ ಬೆನ್ನಟ್ಟಿದ ಗುಜರಾತ್​ 9 ವಿಕೆಟ್​ ನಷ್ಟಕ್ಕೆ 107 ರನ್​ ಗಳಿಸಲು ಮಾತ್ರ ಶಕ್ತವಾಯಿತು. ಇದರಿಂದ ಆಡಿದ ಐದು ಪಂದ್ಯದಲ್ಲಿ ಹರ್ಮನ್‌ಪ್ರೀತ್ ಕೌರ್ ಪಡೆ ಗೆಲುವಿನ ನಗೆಬೀರಿದೆ.

ಮುಂಬೈ ಇಂಡಿಯನ್ಸ್​ ಆಡುವ ತಂಡ: ಹೇಲಿ ಮ್ಯಾಥ್ಯೂಸ್, ಯಾಸ್ತಿಕಾ ಭಾಟಿಯಾ(ವಿಕೆಟ್​ ಕೀಪರ್​), ನ್ಯಾಟ್ ಸಿವರ್-ಬ್ರಂಟ್, ಹರ್ಮನ್‌ಪ್ರೀತ್ ಕೌರ್(ನಾಯಕಿ), ಧಾರಾ ಗುಜ್ಜರ್, ಅಮೆಲಿಯಾ ಕೆರ್, ಇಸ್ಸಿ ವಾಂಗ್, ಅಮಂಜೋತ್ ಕೌರ್, ಹುಮೈರಾ ಕಾಜಿ, ಜಿಂಟಿಮಣಿ ಕಲಿತಾ, ಸೈಕಾ ಇಶಾಕ್

ಗುಜರಾತ್​ ಜೈಂಟ್ಸ್​ ಆಡುವ ತಂಡ: ಸಬ್ಬಿನೇನಿ ಮೇಘನಾ, ಸೋಫಿಯಾ ಡಂಕ್ಲಿ, ಹರ್ಲೀನ್ ಡಿಯೋಲ್, ಆಶ್ಲೀಗ್ ಗಾರ್ಡನರ್, ದಯಾಲನ್ ಹೇಮಲತಾ, ಅನ್ನಾಬೆಲ್ ಸದರ್ಲ್ಯಾಂಡ್, ಸುಷ್ಮಾ ವರ್ಮಾ(ವಿಕೆಟ್​ ಕೀಪರ್​), ಕಿಮ್ ಗಾರ್ತ್, ತನುಜಾ ಕನ್ವರ್, ಸ್ನೇಹ ರಾಣಾ(ನಾಯಕಿ), ಮಾನ್ಸಿ ಜೋಶಿ

ಡಬಲ್​ ರಾಬಿನ್​ ರೌಡ್​ನ ಒಂದು ಸುತ್ತಿನಲ್ಲಿ ಮುಂಬೈ ಎಲ್ಲರ ಮೇಲೆ ಗೆಲುವು ಸಾಧಿಸಿ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಉದ್ಘಾಟನಾ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್​ ತಂಡ ಗುಜರಾತ್​ ತಂಡವನ್ನು 143 ರನ್​ಗಳ ಬೃಹತ್​ ಅಂತರದಿಂದ ಮಣಿಸಿತ್ತು. ಮೊದಲ ಪಂದ್ಯದಲ್ಲೇ ನಾಯಕಿ ಹರ್ಮನ್​ಪ್ರೀತ್​ ಕೌರ್​ 65 ರನ್​​​​ ಗಳಿಸಿದ್ದರು.

ಮುಂಬೈ ಇಂಡಿಯನ್ಸ್​ ಎರಡನೇ ಪಂದ್ಯದಲ್ಲಿ ಬೆಂಗಳೂರು ತಂಡದ ವಿರುದ್ಧ 9 ವಿಕೆಟ್​ನ ಭರ್ಜರಿ ಗೆಲುವು ದಾಖಲಿಸಿತ್ತು. ಬೆಂಗಳೂರು ತಂಡ ನೀಡಿದ್ದ 155 ರನ್​ನ ಗುರಿಯನ್ನು 14ನೇ ಓವರ್​ನಲ್ಲಿ ಪೂರ್ತಿ ಮಾಡಿತ್ತು. ನಂತರದ ಪಂದ್ಯದಲ್ಲಿ ಎರಡು ಗೆಲುವು ಸಾಧಿಸಿದ್ದ ಡೆಲ್ಲಿಯನ್ನು 105ಕ್ಕೆ ಕಟ್ಟಿಹಾಕಿ 15 ಓವರ್​​ಗಳಲ್ಲಿ 8 ವಿಕೆಟ್​ನಿಂದ ಗೆಲುವು ಸಾಧಿಸಿತ್ತು. 12 ರಂದು ನಡೆದ ಯುಪಿ ವಾರಿಯರ್ಸ್​ ಮೇಲೂ ಮುಂಬೈ ಇಂಡಿಯನ್ಸ್​ ಸವಾರಿ ಮಾಡಿದ್ದರು. ನಾಲ್ಕು ಪಂದ್ಯಗಳನ್ನು ಗೆದ್ದಿರುವ ಎಂಐ ಚೊಚ್ಚಲ ಟೂರ್ನಿಯ ಬಲಿಷ್ಠತಂಡ ಎಂದು ಸಾಬೀತು ಮಾಡಿದೆ.

ಆರ್​ಸಿಬಿ ಮೇಲೆ ಗೆದ್ದಿರುವ ಗುಜರಾತ್​: ಮೊದಲ ಪಂದ್ಯದಲ್ಲಿ ಮುಂಬೈನಿಂದ ಹೀನಾಯವಾಗಿ ಸೋಲು ಕಂಡಿದ್ದ ಗುಜರಾತ್​ ಜೈಂಟ್ಸ್​ ಮತ್ತೆ ಸೋಲನ್ನೇ ಕಂಡಿದೆ. ಕೇವಲ ಒಂದು ಗೆಲುವು ಮಾತ್ರ ಗುಜರಾತ್​ನ ಪಾಲಾಗಿದೆ. ಎರಡನೇ ಪಂದ್ಯದಲ್ಲಿ ಯುಪಿ ವಾರಿಯರ್ಸ್​ ಎದುರಿಸಿದ್ದ ಗುಜರಾತ್​ ರೋಚಕ ಹಂತದಲ್ಲಿ ಸೋಲು ಕಂಡಿತ್ತು. ಆರ್​ಸಿಬಿ ಗುಜರಾತ್​ಗೆ ಮೂರನೇ ಎದುರಾಳಿಯಾಗಿತ್ತು. ಈ ಪಂದ್ಯದ ವೇಳೆಗೆ ಆರ್​ಸಿಬಿಯೂ ಎರಡು ಸೋಲು ಕಂಡಿತ್ತು. ಈ ಪಂದ್ಯದಲ್ಲಿ ಆರ್​ಸಿಬಿಯನ್ನು 11 ರನ್​ನಿಂದ ಗುಜರಾತ್​ ಮಣಿಸಿ ಗೆಲುವಿನ ನಗೆ ಬೀರಿತ್ತು.

ಮೊದಲ ಮುಖಾಮುಖಿಯ ನೆನಪು: ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್​ ತಂಡ 207 ರನ್​ ಗಳಿಸಿತ್ತು. ಹೇಲಿ ಮ್ಯಾಥ್ಯೂಸ್ 47, ನ್ಯಾಟ್ ಸ್ಕಿವರ್-ಬ್ರಂಟ್ 23, ಹರ್ಮನ್‌ಪ್ರೀತ್ ಕೌರ್ 65 ಮತ್ತು ಅಮೆಲಿಯಾ ಕೆರ್ 47 ರನ್​ ಗಳಿಸಿದ್ದರು. ಇದನ್ನೂ ಬೆನ್ನು ಹತ್ತಿದ ಗುಜರಾತ್​ ಜೈಂಟ್ಸ್​ ತಂಡ 64 ಕ್ಕೆ ತನ್ನೆಲ್ಲಾ ವಿಕೆಟ್​ಗಳನ್ನು ಕಳೆದುಕೊಂಡಿತ್ತು. ಮುಂಬೈ ಇಂಡಿಯನ್ಸ್​​ ಪರ ಸೈಕಾ ಇಶಾಕ್ 4 ವಿಕೆಟ್​ ಪಡೆದಿದ್ದರು.

ಇದನ್ನೂ ಓದಿ: ಮುಗಿಯದ ಆರ್‌ಸಿಬಿ ಗೋಳು, ಸತತ 5ನೇ ಸೋಲು: ಪ್ರಶಸ್ತಿ ರೇಸ್​ನಿಂದ ಬಹುತೇಕ ಔಟ್!​

Last Updated : Mar 14, 2023, 11:09 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.