ಮುಂಬೈ: ಮಹಿಳಾ ಪ್ರೀಮಿಯರ್ ಲೀಗ್ನ ಅಂತಿಮ ಘಟ್ಟಕ್ಕೆ ಹೆಜ್ಜೆ ಇಡಲು ಇರುವ ಕೊನೆಯ ಅವಕಾಶದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಯುಪಿ ವಾರಿಯರ್ಸ್ ಇಲ್ಲಿನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ಮುಖಾಮುಖಿಯಾಗುತ್ತಿದ್ದು, ಟಾಸ್ ಗೆದ್ದ ಯುಪಿ ವಾರಿಯರ್ಸ್ ನಾಯಕಿ ಅಲಿಸ್ಸಾ ಹೀಲಿ ಕ್ಷೇತ್ರ ರಕ್ಷಣೆ ಆಯ್ಕೆ ಮಾಡಿಕೊಂಡಿದ್ದಾರೆ.
ಮುಂಬೈ ಇಂಡಿಯನ್ಸ್ ತಂಡ: ಹೇಲಿ ಮ್ಯಾಥ್ಯೂಸ್, ಯಾಸ್ತಿಕಾ ಭಾಟಿಯಾ (ವಿಕೆಟ್ ಕೀಪರ್), ನ್ಯಾಟ್ ಸಿವರ್-ಬ್ರಂಟ್, ಹರ್ಮನ್‌ಪ್ರೀತ್ ಕೌರ್ (ನಾಯಕಿ), ಮೆಲಿ ಕೆರ್, ಪೂಜಾ ವಸ್ತ್ರಾಕರ್, ಇಸ್ಸಿ ವಾಂಗ್, ಅಮನ್‌ಜೋತ್ ಕೌರ್, ಹುಮೈರಾ ಕಾಜಿ, ಜಿಂಟಿಮಣಿ ಕಲಿತಾ, ಸೈಕಾ ಇಶಾಕ್
-
🚨 Toss Update 🚨@UPWarriorz win the toss and elect to field first against @mipaltan.
— Women's Premier League (WPL) (@wplt20) March 24, 2023 " class="align-text-top noRightClick twitterSection" data="
Follow the match ▶️ https://t.co/QnFsPljTL8#TATAWPL | #Eliminator | #MIvUPW pic.twitter.com/F8jgxlOMrZ
">🚨 Toss Update 🚨@UPWarriorz win the toss and elect to field first against @mipaltan.
— Women's Premier League (WPL) (@wplt20) March 24, 2023
Follow the match ▶️ https://t.co/QnFsPljTL8#TATAWPL | #Eliminator | #MIvUPW pic.twitter.com/F8jgxlOMrZ🚨 Toss Update 🚨@UPWarriorz win the toss and elect to field first against @mipaltan.
— Women's Premier League (WPL) (@wplt20) March 24, 2023
Follow the match ▶️ https://t.co/QnFsPljTL8#TATAWPL | #Eliminator | #MIvUPW pic.twitter.com/F8jgxlOMrZ
ಯುಪಿ ವಾರಿಯರ್ಜ್ ತಂಡ ಹೀಗಿದೆ.. ಅಲಿಸ್ಸಾ ಹೇಲಿ(ನಾಯಕಿ/ವಿಕೆಟ್ ಕೀಪರ್), ಶ್ವೇತಾ ಸೆಹ್ರಾವತ್, ಸಿಮ್ರಾನ್ ಶೇಖ್, ತಹ್ಲಿಯಾ ಮೆಗ್ರಾತ್, ಗ್ರೇಸ್ ಹ್ಯಾರಿಸ್, ಕಿರಣ್ ನವಗಿರೆ, ದೀಪ್ತಿ ಶರ್ಮಾ, ಸೋಫಿ ಎಕ್ಲೆಸ್ಟೋನ್, ಅಂಜಲಿ ಸರ್ವಾಣಿ, ಪಾರ್ಶವಿ ಚೋಪ್ರಾ, ಸೊಪ್ಪದಂಡಿ ಯಶಸ್ರಿ
ಟಾಸ್ ನಂತರ ಮಾತನಾಡಿದ ಯುಪಿ ವಾರಿಯರ್ಸ್ ನಾಯಕಿ ಹೀಲಿ,"ಟಾಸ್ ಗೆಲ್ಲಲು ಯಾವಾಗಲೂ ಸಂತೋಷವಾಗುತ್ತದೆ. ಇಂದು ಮೊದಲು ಬೌಲಿಂಗ್ ಮಾಡುತ್ತೇವೆ. ಎರಡನೇ ಇನ್ನಿಂಗ್ಸ್ ವೇಳೆಗೆ ಇಬ್ಬನಿ ಸಾಧ್ಯತೆ ಇದೆ. ಮೊದಲು ಬ್ಯಾಟಿಂಗ್ ಮಾಡಿ ಕೊನೆಯ ಕೆಲವು ತಂಡಗಳು ಪಂದ್ಯವನ್ನು ಕಳೆದುಕೊಂಡಿವೆ. ತಂಡದಲ್ಲಿ ಕೆಲ ಬದಲಾವಣೆ ಮಾಡಿಕೊಂಡಿದ್ದು ಗ್ರೇಸ್ ಹ್ಯಾರಿಸ್ ಮತ್ತೆ ತಂಡಕ್ಕೆ ಸೇರಿದ್ದಾರೆ, ಶಬ್ನಿಮ್ ತಂಡದಿಂದ ಹೊರಗುಳಿದಿದ್ದಾರೆ.
ಮುಂಬೈ ಇಂಡಿಯನ್ಸ್ ನಾಯಕಿ ಕೌರ್,"ಕಳೆದ ಬಾರಿ ನಾವು ಆಡಿದಾಗ ಬ್ಯಾಟ್ ಮಾಡಲು ಉತ್ತಮ ವಿಕೆಟ್ ಆಗಿತ್ತು. ಚೇಸಿಂಗ್ ಎಲ್ಲವೂ ಆದ್ಯತೆಯ ವಿಷಯವಾಗಿದೆ, ಅದೇ ರೀತಿ ಮಾಡಿದ್ದೇನೆ. ಲೀಗ್ ಆರಂಭದಲ್ಲಿ ಉತ್ತಮವಾಗಿ ಆಡಿದ್ದೆವು. ಎರಡು ಪಂದ್ಯದಲ್ಲಿ ಹಿನ್ನಡೆ ಅನುಭವಿಸಿದ್ದೇವೆ. ಆದರೆ ನಾವು ಧನಾತ್ಮಕವಾಗಿರಲು ಬಯಸುತ್ತೇವೆ. ತಂಡದಲ್ಲಿ ಯಾವುದೇ ಬದಲಾವಣೆ ಇಲ್ಲ" ಎಂದಿದ್ದಾರೆ.
-
The two captains are all smiles ahead of the #Eliminator 😃🙌
— Women's Premier League (WPL) (@wplt20) March 24, 2023 " class="align-text-top noRightClick twitterSection" data="
Are you ready ❓
Follow the match ▶️ https://t.co/QnFsPljTL8#TATAWPL | #MIvUPW | @ImHarmanpreet | @ahealy77 pic.twitter.com/e17kGJ2FeZ
">The two captains are all smiles ahead of the #Eliminator 😃🙌
— Women's Premier League (WPL) (@wplt20) March 24, 2023
Are you ready ❓
Follow the match ▶️ https://t.co/QnFsPljTL8#TATAWPL | #MIvUPW | @ImHarmanpreet | @ahealy77 pic.twitter.com/e17kGJ2FeZThe two captains are all smiles ahead of the #Eliminator 😃🙌
— Women's Premier League (WPL) (@wplt20) March 24, 2023
Are you ready ❓
Follow the match ▶️ https://t.co/QnFsPljTL8#TATAWPL | #MIvUPW | @ImHarmanpreet | @ahealy77 pic.twitter.com/e17kGJ2FeZ
ರೆಸ್ಟ್ ನಂತರ ತಂಡಕ್ಕೆ ಮರಳಿದ ಗ್ರೇಸ್ ಹ್ಯಾರಿಸ್: ಡೆಲ್ಲಿ ಎದುರಿನ ಕೊನೆಯ ಪಂದ್ಯದಲ್ಲಿ ಗ್ರೇಸ್ ಹ್ಯಾರಿಸ್ಗೆ ವಿಶ್ರಾಂತಿ ನೀಡಲಾಗಿತ್ತು. ಅಲಿಸ್ಸಾ ಹೇಲಿ ಕಳೆದ ಪಂದ್ಯದ ಟಾಸ್ ವೇಳೆ ಲೀಗ್ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದರಿಂದ ಗ್ರೇಸ್ ಹ್ಯಾರಿಸ್ ವಿಶ್ರಾಂತಿ ನೀಡಿರುವುದಾಗಿ ತಿಳಿಸಿದ್ದರು. ಅದರಂತೆ ಮಹತ್ವದ ಎಲಿಮಿನೇಟರ್ ಪಂದ್ಯಕ್ಕೆ ಮತ್ತೆ ಕರೆತಂದಿದ್ದಾರೆ.
ಎಂಐ-ಯುಪಿ ಮುಖಾಮುಖಿ: ಲೀಗ್ ಹಂತದಲ್ಲಿ ಎರಡು ಬಾರಿ ತಂಡಗಳು ಮುಖಾಮುಖಿಯಾಗಿದ್ದು, ಒಂದು ಸೋಲು-ಒಂದು ಗೆಲುವು ಕಂಡಿದೆ. ಮಾರ್ಚ್ 12ರಂದು ಬ್ರಬೋರ್ನ್ ಸ್ಟೇಡಿಯಂ ನಡೆದ ಸೆಣಸಾಟದಲ್ಲಿ ಯುಪಿ ವಾರಿಯರ್ಸ್ ತಂಡ ನೀಡಿದ್ದ 159 ರನ್ನ ಸಾಧಾರಣ ಗುರಿಯನ್ನು ಮುಂಬೈ ಇಂಡಿಯನ್ಸ್ 17.3 ಓವರ್ನಲ್ಲಿ 2 ವಿಕೆಟ್ ನಷ್ಟದಲ್ಲಿ ಪೂರೈಸಿ ಗೆಲುವಿನ ನಗೆ ಬೀರಿತ್ತು.
ಮಾರ್ಚ್ 18ರಂದು ಇಂದು ನಡೆಯುವ ಕ್ರಿಡಾಂಗಣದಲ್ಲಿ ನಡೆದ ಎರಡನೇ ಮುಖಾಮುಖಿಯಲ್ಲಿ ಟಾಸ್ ಗೆದ್ದ ಯುಪಿ ವಾರಿಯರ್ಸ್ ಎಂಐಗೆ ಬ್ಯಾಟಿಂಗ್ ಆಹ್ವಾನ ನೀಡಿತ್ತು. ಮೊದಲು ಬ್ಯಾಟ್ ಮಾಡಿದ ಮುಂಬೈ 20 ಓವರ್ನಲ್ಲಿ 127ಕ್ಕೆ ಸರ್ವಪತನ ಕಂಡಿತ್ತು. ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಬ್ಯಾಟಿಂಗ್ ವೈಫಲ್ಯ ಎದುರಿಸಿದ್ದರು. ಈ ಗುರಿಯನ್ನು ಯುಪಿ ವಾರಿಯರ್ಸ್ 3 ಬಾಲ್ ಬಾಕಿ ಇರುವಂತೆ 5 ವಿಕೆಟ್ಗಳಿಂದ ಗೆದ್ದುಕೊಂಡಿತ್ತು. ಮುಂಬೈ ಇಂಡಿಯನ್ಸ್ಗೆ ಲೀಗ್ನ ಮೊದಲ ಸೋಲು ಇದಾಗಿತ್ತು.
ಇದನ್ನೂ ಓದಿ: WPL: ಇಂದು ಸಂಜೆ ಮುಂಬೈ-ಯುಪಿ ಎಲಿಮಿನೇಟರ್ ಫೈಟ್: ಯಾರಿಗೆ ಫೈನಲ್ ಅವಕಾಶ?