ಮುಂಬೈ: ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಗಾಯಗೊಂಡಿರುವ ಮೊಹಮ್ಮದ್ ಅರ್ಶದ್ ಖಾನ್ ಬದಲಿಗೆ 15ನೇ ಆವೃತ್ತಿಯ ಟೂರ್ನಮೆಂಟ್ನ ಉಳಿದ ಭಾಗಕ್ಕೆ ಕುಮಾರ್ ಕಾರ್ತಿಕೇಯ ಸಿಂಗ್ ಅವರನ್ನು ಸೇರಿಸಿಕೊಂಡಿದೆ. ಈ ಬಗ್ಗೆ ಇಂಡಿಯನ್ ಪ್ರೀಮಿಯರ್ ಲೀಗ್ ಮಾಧ್ಯಮ ಹೇಳಿಕೆ ಬಿಡುಗಡೆಗೊಳಿಸಿದೆ.
-
Wishing our all-rounder Mohd. Arshad Khan a speedy recovery.💪
— Mumbai Indians (@mipaltan) April 28, 2022 " class="align-text-top noRightClick twitterSection" data="
Come back stronger, Arshad bhai 🙌💙#OneFamily #DilKholKe #MumbaiIndians pic.twitter.com/u8zdpZG3Pz
">Wishing our all-rounder Mohd. Arshad Khan a speedy recovery.💪
— Mumbai Indians (@mipaltan) April 28, 2022
Come back stronger, Arshad bhai 🙌💙#OneFamily #DilKholKe #MumbaiIndians pic.twitter.com/u8zdpZG3PzWishing our all-rounder Mohd. Arshad Khan a speedy recovery.💪
— Mumbai Indians (@mipaltan) April 28, 2022
Come back stronger, Arshad bhai 🙌💙#OneFamily #DilKholKe #MumbaiIndians pic.twitter.com/u8zdpZG3Pz
24 ವರ್ಷದ ಕಾರ್ತಿಕೇಯ ಡೊಮೆಸ್ಟಿಕ್ ಕ್ರಿಕೆಟ್ನಲ್ಲಿ ಮಧ್ಯಪ್ರದೇಶ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಇಲ್ಲಿಯವರೆಗೆ 9 ಪ್ರಥಮ ದರ್ಜೆ,19 ಲಿಸ್ಟ್ ಎ ಮತ್ತು 8 ಟಿ20 ಪಂದ್ಯಗಳನ್ನಾಡಿದ್ದು, ಕ್ರಮವಾಗಿ 35, 18 ಮತ್ತು 9 ವಿಕೆಟ್ ಪಡೆದಿದ್ದಾರೆ.
ಟೂರ್ನಿಯಲ್ಲಿ 5 ಬಾರಿಯ ಚಾಂಪಿಯನ್ಸ್ ಒಂದೂ ಪಂದ್ಯವನ್ನು ಗೆಲ್ಲಲಾಗದೇ ಅಂಕಪಟ್ಟಿಯಲ್ಲಿ ಕೊನೆ ಸ್ಥಾನದಲ್ಲಿದೆ. ಈಗಾಗಲೇ ಪ್ಲೇ ಆಫ್ ರೇಸ್ನಿಂದ ಹೊರಬಿದ್ದಿರುವ ರೋಹಿತ್ ಶರ್ಮಾ ಬಳಗ ಏಪ್ರಿಲ್ 30 ರಂದು ಡಿ.ವೈ.ಪಾಟೀಲ್ ಸ್ಟೇಡಿಯಂನಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಸೆಣಸಾಡಲಿದೆ.
ಇದನ್ನೂ ಓದಿ:ತೆವಾಟಿಯಾ-ರಾಶೀದ್ ಕೆಚ್ಚೆದೆಯ ಬ್ಯಾಟಿಂಗ್... ಹೈದರಾಬಾದ್ ವಿರುದ್ಧ ಗೆದ್ದ ಗುಜರಾತ್ ಟೈಟನ್ಸ್