ಮುಂಬೈ (ಮಹಾರಾಷ್ಟ್ರ): ಭಾರತದ ಮಾಜಿ ನಾಯಕ ಎಂಎಸ್ ಧೋನಿ ಅವರಲ್ಲಿ ಇನ್ನೂ ಕೆಲವು ಆವೃತ್ತಿಗಳನ್ನು ಆಡುವ ಸಾಮರ್ಥ್ಯ ಹೊಂದಿದ್ದಾರೆ. ಅವರು ಈಗಲೂ ಉತ್ತಮ ಕೀಪಿಂಗ್ ಮತ್ತು ಬ್ಯಾಟಿಂಗ್ ಮಾಡುತ್ತಾರೆ ಎಂದು ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ.
ರೋಹಿತ್ ಶರ್ಮಾ ಮತ್ತು ಮಾರ್ಕ್ ಬೌಚರ್ ಬುಧವಾರ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದರು. ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಐಪಿಎಲ್‌ನಲ್ಲಿ ಎಷ್ಟು ಕಾಲ ಆಡಲು ಮುಂದುವರಿಯುತ್ತಾರೆ ಎಂದು ರೋಹಿತ್‌ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, "ಇದು ಅವರ ಕೊನೆಯ ಸೀಸನ್ ಎಂದು ನನಗೆ ತಿಳಿದಿಲ್ಲ, ನಾನು ಇದನ್ನು ಕಳೆದ 2-3 ವರ್ಷಗಳಿಂದ ಕೇಳುತ್ತಿದ್ದೇನೆ. ಅವರು ಇನ್ನೂ ಆಡಲು ಫಿಟ್ ಆಗಿದ್ದಾರೆ ಎಂದು ನಾನು ಭಾವಿಸುತ್ತೇನೆ. ಧೋನಿ ಇನ್ನಷ್ಟೂ ವರ್ಷ ಆಡಲು ಯೋಚಿಸುತ್ತಾರೆ ಎಂದು ನಾನು ಭಾವಿಸುತ್ತೇನೆ" ಎಂದು ಹೇಳಿದರು.
'ಐಪಿಎಲ್ 2023 ಕ್ಕೆ ಮುಂಚಿತವಾಗಿ, ಗಾಯಗೊಂಡಿರುವ ವೇಗಿ ಜಸ್ಪ್ರೀತ್ ಬುಮ್ರಾ ಅವರ ಬದಲಿ ಆಟಗಾರನನ್ನು ಮುಂದಿನ ಕೆಲವು ದಿನಗಳಲ್ಲಿ ತಂಡವು ನಿರ್ಧರಿಸುತ್ತದೆ. ಬೂಮ್ರಾ ಅವರ ಬದಲಿ ಕುರಿತು, ನಾವು ಕೆಲವು ಆಯ್ಕೆಗಳ ಕುರಿತು ಚರ್ಚಿಸುತ್ತಿದ್ದೇವೆ. ಆಶಾದಾಯಕವಾಗಿ, ನಾವು ಮುಂದಿನ ಒಂದೆರಡು ದಿನಗಳಲ್ಲಿ ಅದನ್ನು ಬಹಿರಂಗ ಪಡಿಸುತ್ತೇವೆ' ಎಂದರು.
-
🚨 PRESS CONFERENCE TIME!
— Mumbai Indians (@mipaltan) March 29, 2023 " class="align-text-top noRightClick twitterSection" data="
Paltan, watch Captain RO & Head Coach Mark Boucher address the media & answer your questions!
Watch LIVE 👉 https://t.co/sVWqBEE6hA#OneFamily #MumbaiMeriJaan #MumbaiIndians #IPL2023 #TATAIPL @ImRo45 @markb46 pic.twitter.com/dMHjdHgwY8
">🚨 PRESS CONFERENCE TIME!
— Mumbai Indians (@mipaltan) March 29, 2023
Paltan, watch Captain RO & Head Coach Mark Boucher address the media & answer your questions!
Watch LIVE 👉 https://t.co/sVWqBEE6hA#OneFamily #MumbaiMeriJaan #MumbaiIndians #IPL2023 #TATAIPL @ImRo45 @markb46 pic.twitter.com/dMHjdHgwY8🚨 PRESS CONFERENCE TIME!
— Mumbai Indians (@mipaltan) March 29, 2023
Paltan, watch Captain RO & Head Coach Mark Boucher address the media & answer your questions!
Watch LIVE 👉 https://t.co/sVWqBEE6hA#OneFamily #MumbaiMeriJaan #MumbaiIndians #IPL2023 #TATAIPL @ImRo45 @markb46 pic.twitter.com/dMHjdHgwY8
ಮುಂಬೈ ಇಂಡಿಯನ್ಸ್‌ಗೆ ಜಸ್ಪ್ರೀತ್ ಬುಮ್ರಾ ಅವರ ಪಾತ್ರವು ಸಾಕಷ್ಟು ಮಹತ್ವದ್ದಾಗಿತ್ತು. ಆದರೆ ಇದು ತಂಡದಲ್ಲಿರುವ ಯುವಕರಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಬೇರೆಯವರಿಗೆ ಅವಕಾಶ ನೀಡುತ್ತದೆ. ನಾವು ಕಳೆದ ಕೆಲವು ವರ್ಷಗಳಿಂದ ಈ ತಂಡದೊಂದಿಗೆ ಇರುವ ಕೆಲ ಆಟಗಾರರನ್ನು ಬೂಮ್ರಾ ಬದಲಿ ಪಯತ್ನಿಸುತ್ತೇವೆ. ಬುಮ್ರಾ ಮತ್ತು ಜಾಯ್ ರಿಚರ್ಡ್ಸನ್ ಇಲ್ಲದ ಕಾರಣ ಮುಂಬೈನ ವೇಗದ ಪಾಳೆಯ ವೀಕ್ ಆಗಿತ್ತು. ಆದರೆ, ಇಂಗ್ಲೆಂಡ್ ವೇಗಿ ಜೋಫ್ರಾ ಆರ್ಚರ್ ಮುಂಬೈಗೆ ಬಲವಾಗಿದ್ದಾರೆ' ಎಂದಿದ್ದಾರೆ.
ಪ್ಲೇಯಿಂಗ್ ಇಲೆವೆನ್ನಲ್ಲಿ ಅರ್ಜುನ್ ತೆಂಡೂಲ್ಕರ್: "ಇತ್ತೀಚಿನ ದಿನಗಳಲ್ಲಿ ಅರ್ಜುನ್ ತೆಂಡೂಲ್ಕರ್ ಉತ್ತಮ ಕ್ರಿಕೆಟ್ ಆಡುತ್ತಿದ್ದಾರೆ. ಅವರು ಗಾಯಗೊಂಡಿದ್ದರು, ಆದರೆ ಇಂದು ಅವರು ಬೌಲಿಂಗ್ ಮಾಡಲು ಪ್ರಾರಂಭಿಸುತ್ತಾರೆ" ಎಂದು ರೋಹಿತ್ ಹೇಳಿದರು.
ಬೌಚರ್ ಕೂಡ ರೋಹಿತ್ ಅಭಿಪ್ರಾಯಗಳನ್ನು ಒಪ್ಪಿಕೊಂಡಿದ್ದಾರೆ. "ಅರ್ಜುನ್ ಕೆಲವು ಸಮಯದಿಂದ ಉತ್ತಮ ಕ್ರಿಕೆಟ್ ಆಡುತ್ತಿದ್ದಾರೆ, ಅವರು ಚೆನ್ನಾಗಿ ಬೌಲಿಂಗ್ ಮಾಡುತ್ತಿದ್ದಾರೆ, ಅವರು ಈ ವರ್ಷ ಪ್ಲೇಯಿಂಗ್ ಇಲೆವೆನ್ನಲ್ಲಿ ಆಡಿಸುವ ಯೋಚನೆ ನಾವು ಮಾಡುತ್ತೇವೆ" ಎಂದಿದ್ದಾರೆ.
ರೋಹಿತ್ ನಾಯಕತ್ವದ ಬಗ್ಗೆ ನೂತನ ಕೋಚ್ ಮಾತು: ಮುಂಬೈ ಇಂಡಿಯನ್ಸ್‌ಗೆ ನೂತನ ಕೋಚ್ ಆಗಿ ಸೇರಿಕೊಂಡಿರುವ ಮಾರ್ಕ್ ಬೌಚರ್ಗೆ ರೋಹಿತ್ ಶರ್ಮಾ ಅವರ ನಾಯಕತ್ವದ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ, ಅವರಿಗೆ ಉತ್ತಮ ಕ್ರಿಕೆಟ್ನ ಅನುಭವ ಇದೆ. ಅಂತಾರಾಷ್ಟ್ರೀಯ ತಂಡಗಳನ್ನು ಮುನ್ನಡೆಸಿ ಯಶಸ್ವಿಯಾಗಿದ್ದಾರೆ. ಅಲ್ಲದೇ ಐದು ಬಾರಿ ಇದೇ ತಂಡದಲ್ಲಿ ಕಪ್ ಜಯಿಸಿದ್ದಾರೆ. ಈ ಆವೃತ್ತಿಯಲ್ಲೂ ಉತ್ತಮ ಪ್ರದರ್ಶನದ ಭರವಸೆ ಇದೆ ಎಂದಿದ್ದಾರೆ.
ಇದನ್ನೂ ಓದಿ: ತ್ರಿ ರಾಷ್ಟ್ರ ಅಂತಾರಾಷ್ಟ್ರೀಯ ಫುಟ್‌ಬಾಲ್: ಭಾರತಕ್ಕೆ ಕಿರ್ಗಿಜ್ ಗಣರಾಜ್ಯ ವಿರುದ್ಧ ಭರ್ಜರಿ ಗೆಲುವು