ETV Bharat / sports

ಮುಂಬೈ ತಂಡದ ಆಲ್​ರೌಂಡರ್​ ಕಿರಾನ್​ ಪೊಲ್ಲಾರ್ಡ್​ ಐಪಿಎಲ್​ಗೆ ಗುಡ್​ಬೈ - ಮುಂಬೈ ಎಮಿರೇಟ್ಸ್​ ತಂಡಕ್ಕೆ ಕೋಚ್

ಕೆಕೆಆರ್​ ತಂಡದಲ್ಲಿದ್ದ ಪ್ಯಾಟ್​ ಕಮಿನ್ಸ್​ ಮುಂದಿನ ಐಪಿಎಲ್​ ಆಡಲ್ಲ ಎಂದು ಹೇಳಿದ ಬಳಿಕ ಮುಂಬೈ ಇಂಡಿಯನ್ಸ್​ ತಂಡದ ಕಿರಾನ್​ ಪೊಲ್ಲಾರ್ಡ್​ ಸಹ ಐಪಿಎಲ್​ಗೆ ಗುಡ್​ಬೈ ಹೇಳಿದ್ದಾರೆ.

mumbai-indians-kieron-pollard
ಕಿರಾನ್​ ಪೊಲ್ಲಾರ್ಡ್​ ಐಪಿಎಲ್​ಗೆ ಗುಡ್​ಬೈ
author img

By

Published : Nov 15, 2022, 3:27 PM IST

ಆಂಟಿಗುವಾ: ಐಪಿಎಲ್​ ಕಿರು ಹರಾಜಿಗೂ ಮೊದಲು ಮುಂಬೈ ಇಂಡಿಯನ್ಸ್​ ತಂಡ ಕಿರಾನ್​ ಪೊಲ್ಲಾರ್ಡ್​ರನ್ನು ಕೈಬಿಡಲು ಉದ್ದೇಶಿಸಿದ ಬೆನ್ನಲ್ಲೇ, ವೆಸ್ಟ್​ ಇಂಡೀಸ್​ ಆಟಗಾರ ಭಾರತದ ಟೂರ್ನಿಗೆ ನಿವೃತ್ತಿ ಹೇಳಿದ್ದಾರೆ. ಇಂಡಿಯನ್​ ಪ್ರೀಮಿಯರ್​ ಲೀಗ್​ನಲ್ಲಿ ಮುಂಬೈ ಇಂಡಿಯನ್ಸ್​ ವಿರುದ್ಧ ನಾನು ಆಡಲು ಬಯಸುವುದಿಲ್ಲ. ಹೀಗಾಗಿ ಟೂರ್ನಿಗೆ ಗುಡ್​ಬೈ ಹೇಳುತ್ತಿದ್ದೇನೆ ಎಂದು ಪೊಲ್ಲಾರ್ಡ್​ ಹೇಳಿದ್ದಾರೆ.

ಟ್ವಿಟರ್​ನಲ್ಲಿ ಸುದೀರ್ಘ ಬರವಣಿಗೆಯ ಪೋಸ್ಟ್​ ಮಾಡಿರುವ ದೈತ್ಯ ಬ್ಯಾಟ್ಸಮನ್​, ಒಮ್ಮೆ ಮುಂಬೈ ಪರ ಆಡಿದ ಮೇಲೆ ಕೊನೆವರೆಗೂ ಅದೇ ಆಗಿರುತ್ತದೆ,. ಅದರ ವಿರುದ್ಧ ಆಡಲು ನಾನು ಬಯಸುವುದಿಲ್ಲ. ತಂಡದಲ್ಲಿ ಬದಲಾವಣೆ ಅಗತ್ಯವಿದೆ. ಅದನ್ನು ಮನಗಂಡಿದ್ದೇನೆ. ಆದರೆ, ತಂಡದ ವಿರುದ್ಧ ನಾನು ಕಣಕ್ಕಿಳಿಯುವುದಿಲ್ಲ. ಅತ್ಯಂತ ದೊಡ್ಡ ಫ್ರಾಂಚೈಸಿ ಮತ್ತು ತಂಡದ ಭಾಗವಾಗಿದ್ದಕ್ಕೆ ಖುಷಿ ಇದೆ ಎಂದು ಹೇಳಿದ್ದಾರೆ.

2010 ರಿಂದ ಮುಂಬೈ ಇಂಡಿಯನ್ಸ್​ ಪರವಾಗಿ ಆಡುತ್ತಿರುವ ಪೊಲ್ಲಾರ್ಡ್, ಅತ್ಯಂತ ಪ್ರಭಾವಿ ಆಟಗಾರರಾಗಿದ್ದಾರೆ. ಆಲ್​ರೌಂಡ್ ಪ್ರದರ್ಶನದಿಂದ ಅನೇಕ ಪಂದ್ಯಗಳನ್ನು ತಂಡಕ್ಕೆ ಗೆಲ್ಲಿಸಿಕೊಟ್ಟಿದ್ದಾರೆ. ಈವರೆಗೂ ಐಪಿಎಲ್​ನಲ್ಲಿ 189 ಪಂದ್ಯಗಳಲ್ಲಿ ಆಡಿರುವ ಪೊಲ್ಲಾರ್ಡ್ 28.67 ರ ಸರಾಸರಿಯಲ್ಲಿ 3,412 ರನ್ ಗಳಿಸಿದ್ದಾರೆ. 16 ಅರ್ಧ ಶತಕಗಳು ಬ್ಯಾಟ್​ನಿಂದ ಹರಿದು ಬಂದಿವೆ. 69 ವಿಕೆಟ್‌ಗಳನ್ನೂ ಕಬಳಿಸಿದ್ದಾರೆ.

5 ಬಾರಿ ಚಾಂಪಿಯನ್ ಆದಾಗಲೂ ವೆಸ್ಟ್​ಇಂಡೀಸ್​ ಆಟಗಾರ ತಂಡದ ಭಾಗವಾಗಿದ್ದರು. ಕೊನೆಯ ಐಪಿಎಲ್​ ಆವೃತ್ತಿಯಲ್ಲಿ ಪೊಲ್ಲಾರ್ಡ್​ ಆಡಿದ 11 ಪಂದ್ಯಗಳಲ್ಲಿ ಕಳೆಪೆ ಪ್ರದರ್ಶನ ನೀಡಿದ ಕೇವಲ 144 ರನ್ ಗಳಿಸಿದ್ದರು. ಇದರಲ್ಲಿ ಗರಿಷ್ಠ ಸ್ಕೋರ್ 25 ಆಗಿತ್ತು. 4 ವಿಕೆಟ್​ ಗಳಿಸಿದ್ದ ಅವರನ್ನು ತಂಡದ ಬದಲಾವಣೆಯ ವೇಳೆ ಕೈಬಿಡುವ ಬಗ್ಗೆ ಆಡಳಿತ ಮಂಡಳಿ ನಿರ್ಧರಿಸಿತ್ತು.

ಮುಂಬೈ ಎಮಿರೇಟ್ಸ್​ ತಂಡಕ್ಕೆ ಕೋಚ್: ಕಿರಾನ್​ ಪೊಲ್ಲಾರ್ಡ್​ ಐಪಿಎಲ್​ಗೆ ಗುಡ್​ಬೈ ಹೇಳಿದರೂ, ಕೆರೆಬಿಯನ್​ ಲೀಗ್​ನಲ್ಲಿ ಮುಂಬೈ ಇಂಡಿಯನ್ಸ್​ ಫ್ರಾಂಚೈಸಿ ಹೊಂದಿರುವ ಎಮಿರೇಟ್ಸ್​ ತಂಡದ ಕೋಚ್​ ಆಗಿ ಮುಂದುವರಿಯಲು ನಿರ್ಧರಿಸಿದ್ದಾರೆ. ಮುಂಬೈ ತಂಡ ಪೊಲ್ಲಾರ್ಡ್ ಅವ​ರನ್ನು 6 ಕೋಟಿಗೆ ಖರೀದಿ ಮಾಡಿತ್ತು.

ಇನ್ನು ಮುಂದಿನ ಆವೃತ್ತಿಯ ಸಿದ್ಧತೆಯ ಭಾಗವಾಗಿ ಡಿಸೆಂಬರ್​ 23 ರಂದು ಕೊಚ್ಚಿಯಲ್ಲಿ ಕಿರು ಐಪಿಎಲ್​ ಹರಾಜು ನಡೆಯಲಿದ್ದು, ಎಲ್ಲ ತಂಡಗಳು ಉಳಿಸಿಕೊಂಡ ಮತ್ತು ಕೈಬಿಟ್ಟ ಆಟಗಾರರ ಪಟ್ಟಿಯನ್ನು ಇಂದೇ(ನವೆಂಬರ್​ 15) ನೀಡಬೇಕಿದೆ.

ಓದಿ: 2023ರ ಐಪಿಎಲ್ ನಿಂದ ಹೊರ ನಡೆದ ಪ್ಯಾಟ್ ಕಮ್ಮಿನ್ಸ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.