ಮುಂಬೈ (ಮಹರಾಷ್ಟ್ರ): ಐಪಿಎಲ್ ಫ್ರಾಂಚೈಸಿ ಮುಂಬೈ ಇಂಡಿಯನ್ಸ್‌ಗೆ ಕಳೆದ 9 ವರ್ಷಗಳ ಕಾಲ ಬೌಲಿಂಗ್ ಕೋಚ್ ಆಗಿ ಕೆಲಸ ಮಾಡಿದ ಶೇನ್ ಬಾಂಡ್ ಅವರನ್ನು ತಂಡದಿಂದ ಕೈಬಿಡಲಾಗಿದೆ. ಶ್ರೀಲಂಕಾದ ಮಾಜಿ ಆಟಗಾರ ಲಸಿತ್ ಮಾಲಿಂಗಾ ಅವರನ್ನು 2024ರ ಬೌಲಿಂಗ್ ಕೋಚ್ ಆಗಿ ನೇಮಿಸಲಾಗಿದೆ.
-
Mumbai Indians Bowling Coach and MI Emirates Head Coach Shane Bond moves on from the MI #OneFamily
— Mumbai Indians (@mipaltan) October 18, 2023 " class="align-text-top noRightClick twitterSection" data="
Read more ➡️ https://t.co/eFLsQBUiRH pic.twitter.com/PtQXpy4JkC
">Mumbai Indians Bowling Coach and MI Emirates Head Coach Shane Bond moves on from the MI #OneFamily
— Mumbai Indians (@mipaltan) October 18, 2023
Read more ➡️ https://t.co/eFLsQBUiRH pic.twitter.com/PtQXpy4JkCMumbai Indians Bowling Coach and MI Emirates Head Coach Shane Bond moves on from the MI #OneFamily
— Mumbai Indians (@mipaltan) October 18, 2023
Read more ➡️ https://t.co/eFLsQBUiRH pic.twitter.com/PtQXpy4JkC
ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ (ಐಪಿಎಲ್) ಮುಂಬೈ ಇಂಡಿಯನ್ ಬೌಲಿಂಗ್ ಮತ್ತು ಬ್ಯಾಟಿಂಗ್‌ನಿಂದ 5 ಬಾರಿ ಚಾಂಪಿಯನ್ ಆಗಿದೆ. ತಂಡ ನಾಲ್ಕು ಬಾರಿ ಚಾಂಪಿಯನ್ ಪಟ್ಟ ಮುಡಿಗೇರಿಸಿದಾಗ ತಂಡದಲ್ಲಿ ಬೌಲಿಂಗ್ ಕೋಚ್ ಆಗಿ ಶೇನ್ ಬಾಂಡ್ ಕಾರ್ಯನಿರ್ವಹಿಸಿದ್ದರು. ಅಂತರರಾಷ್ಟ್ರೀಯ ಲೀಗ್ ಟಿ20ಯ ಉದ್ಘಾಟನಾ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ಎಮಿರೇಟ್ಸ್‌ನ ಮುಖ್ಯ ತರಬೇತುದಾರರಾಗಿಯೂ ಕೆಲಸ ಮಾಡಿದ್ದರು.
ಮುಂಬೈ ಇಂಡಿಯನ್ಸ್ ಜತೆಗೆ ಶೇನ್ 2015 ರಿಂದ ತಮ್ಮ ಪ್ರಯಾಣ ಆರಂಭಿಸಿದ್ದರು. ಇವರ ಕೋಚಿಂಗ್ ಮೂಲಕ ತಂಡ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದೆ. ಜಸ್ಪ್ರೀತ್ ಬುಮ್ರಾ, ಹಾರ್ದಿಕ್ ಪಾಂಡ್ಯ, ಜೋಫ್ರಾ ಆರ್ಚರ್ ಅವರಂತಹ ಸ್ಟಾರ್ ಬೌಲರ್ಗಳನ್ನು ತಂಡದಲ್ಲಿ ಬೆಳೆಸಿದ್ದರು. ಮುಂಬೈ ಇಂಡಿಯನ್ಸ್ 2015, 2017, 2019 ಮತ್ತು 2020 ರಲ್ಲಿ ಚಾಂಪಿಯನ್ ಆಗಿದೆ. ಈ ವರ್ಷ ಸ್ಟಾರ್ ಬೌಲರ್ಗಳಾದ ಜಸ್ಪ್ರೀತ್ ಬುಮ್ರಾ ಮತ್ತು ಜೋಫ್ರಾ ಆರ್ಚರ್ ಅವರನ್ನು ಕಳೆದುಕೊಂಡು ಸಾಧಾರಣ ಪ್ರದರ್ಶನ ನೀಡಿತ್ತು.
-
💙#OneFamily pic.twitter.com/L8aNl6fKZ2
— Mumbai Indians (@mipaltan) October 18, 2023 " class="align-text-top noRightClick twitterSection" data="
">💙#OneFamily pic.twitter.com/L8aNl6fKZ2
— Mumbai Indians (@mipaltan) October 18, 2023💙#OneFamily pic.twitter.com/L8aNl6fKZ2
— Mumbai Indians (@mipaltan) October 18, 2023
ಅಂಬಾನಿ ಕುಟುಂಬಕ್ಕೆ ಬಾಂಡ್ ಧನ್ಯವಾದ: "ಕಳೆದ ಒಂಬತ್ತು ಸೀಸನ್‌ಗಳಲ್ಲಿ ಮುಂಬೈ ಕುಟುಂಬದ ಭಾಗವಾಗಲು ಅವಕಾಶ ನೀಡಿದ್ದಕ್ಕಾಗಿ ನಾನು ಅಂಬಾನಿ ಕುಟುಂಬಕ್ಕೆ ಧನ್ಯವಾದ ಹೇಳ ಬಯಸುತ್ತೇನೆ. ಇದು ಮೈದಾನದೊಳಗೆ ಮತ್ತು ಹೊರಗಿನ ಹಲವು ಮಧುರ ನೆನಪುಗಳ ಅನುಭವ. ಆಟಗಾರರು ಮತ್ತು ಸಿಬ್ಬಂದಿಗಳೆರಡರಲ್ಲೂ ಅನೇಕ ಶ್ರೇಷ್ಠ ವ್ಯಕ್ತಿಗಳೊಂದಿಗೆ ಕೆಲಸ ಮಾಡಲು ಮತ್ತು ಸಂಬಂಧವನ್ನು ಹೊಂದಲು ನಾನು ಸಾಕಷ್ಟು ಅದೃಷ್ಟಶಾಲಿ. ನಾನು ಅವರೆಲ್ಲರನ್ನೂ ಮಿಸ್ ಮಾಡಿಕೊಳ್ಳುತ್ತೇನೆ. ಉತ್ತಮ ಭವಿಷ್ಯಕ್ಕಾಗಿ ಶುಭ ಹಾರೈಸುತ್ತೇನೆ. ಎಂಐಗೆ ಧನ್ಯವಾದಗಳು" ಎಂದು ಶೇನ್ ಬಾಂಡ್ ಹೇಳಿದ್ದಾರೆ.
ಲಸಿತ್ ಮಾಲಿಂಗಾ ಹೊಸ ಕೋಚ್: ಮುಂಬೈ ತಂಡದ ಮಾಜಿ ಆಟಗಾರ ಲಸಿತ್ ಮಾಲಿಂಗಾ ಅವರು 2024ರ ಮುಂಬೈನ ಬೌಲಿಂಗ್ ಕೋಚ್ ಆಗಿ ನೇಮಕಗೊಂಡಿದ್ದಾರೆ. ಇವರು ಇಂಡಿಯನ್ ಪ್ರೀಮಿಯರ್ ಲೀಗ್‌ನಿಂದ ನಿವೃತ್ತರಾದ ನಂತರ ರಾಜಸ್ಥಾನ ರಾಯಲ್ಸ್ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು.
ಇದನ್ನೂ ಓದಿ: ICC Ranking: ರೋಹಿತ್, ಶುಭಮನ್ ಮಧ್ಯೆ ಅಗ್ರಸ್ಥಾನಕ್ಕಾಗಿ ತೀವ್ರ ಪೈಪೋಟಿ: ಭಾರಿ ಕುಸಿತ ಕಂಡ ಪಾಕ್ ತಂಡ