ಮುಂಬೈ: ಫೈನಲ್ ಪ್ರವೇಶಕ್ಕೆ ಅಗತ್ಯ ಇರುವ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಯಾವುದೇ ತಪ್ಪು ಮಾಡದೇ, ಆರ್ಸಿಬಿ ವಿರುದ್ಧ 4 ವಿಕೆಟ್ಗಳ ಜಯ ದಾಖಲಿಸಿ ಅಂಕ ಪಟ್ಟಿಯ ಅಗ್ರಸ್ಥಾನವನ್ನು ಕಳಿಸಿಕೊಂಡಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರನ್ನು ಕಡಿಮೆ ಮೊತ್ತಕ್ಕೆ ಕಟ್ಟಿ ಹಾಕಿದ ಕೌರ್ ಪಡೆ ಹರಸಾಹಸ ಪಟ್ಟು 21 ಬಾಲ್ ಇರುವಂತೆಯೇ ಪಂದ್ಯವನ್ನು ಗೆದ್ದುಕೊಂಡಿತು.
ಟಾಸ್ ಗೆದ್ದು ಬೌಲಿಂಗ್ ತೆಗೆದುಕೊಂಡ ಕೌರ್ ಆರ್ಸಿಬಿಯನ್ನು ಕಡಿಮೆ ರನ್ಗೆ ಕಟ್ಟಿ ಹಾಕುವಲ್ಲಿ ಯಶಸ್ವಿಯಾಯಿತು. ಆರ್ಸಿಬಿ 20 ಓವರ್ಗೆ 9 ವಿಕೆಟ್ ಕಳೆದುಕೊಂಡು 125 ರನ್ ಗಳಿಸಿತು. ಇದನ್ನು ಬೆನ್ನು ಹತ್ತಿದ ಇಂಡಿಯನ್ಸ್ನ್ನು ಬೆಂಗಳೂರು ಬೌಲರ್ಗಳು ಕಾಡಿದರು. ಆರಂಭಿಕರಾದ ಹೇಲಿ ಮ್ಯಾಥ್ಯೂಸ್ ಮತ್ತು ಯಾಸ್ತಿಕಾ ಭಾಟಿಯಾ 53 ರನ್ನ ಜೊತೆಯಾಟ ಮಾಡಿದರು. 5ನೇ ಓವರ್ ವೇಳೆಗೆ 50 ರನ್ನ ಗಡಿ ಮುಟ್ಟಿದ್ದರು.
ತಂಡದ ಮೊತ್ತ 53 ಆಗಿದ್ದಾಗ ಯಾಸ್ತಿಕಾ ಭಾಟಿಯಾ 30ಕ್ಕೆ ವಿಕೆಟ್ ಒಪ್ಪಿಸಿದರು. ಅವರ ಬೆನ್ನಲ್ಲೆ 24 ರನ್ ಗಳಿಸಿದ್ದ ಹೇಲಿ ಮ್ಯಾಥ್ಯೂಸ್ ಔಟ್ ಆದರು. 3 ಮತ್ತು 4ನೇ ವಿಕೆಟ್ನಲ್ಲಿ ಮುಂಬೈಗೆ ಆಸರೆಯಾಗುತ್ತಿದ್ದ ನ್ಯಾಟ್ ಸಿವರ್-ಬ್ರಂಟ್ ಮತ್ತು ಹರ್ಮನ್‌ಪ್ರೀತ್ ಕೌರ್ ಕ್ರಮವಾಗಿ 13 ಮತ್ತು 2 ರನ್ಗೆ ಔಟ್ ಆದರು. ಇದರಿಂದ ಮುಂಬೈ ಇಂಡಿಯನ್ಸ್ ತಂಡ ಸಂಕಷ್ಟಕ್ಕೆ ಒಳಗಾಯಿತು.
-
Amelia Kerr finishes the job for @mipaltan as they seal a 4️⃣-wicket win over #RCB in their final game of the league stage 👏👏
— Women's Premier League (WPL) (@wplt20) March 21, 2023 " class="align-text-top noRightClick twitterSection" data="
Scorecard ▶️ https://t.co/BQoiFCRPhD#TATAWPL | #RCBvMI pic.twitter.com/ZpYP4JyTjU
">Amelia Kerr finishes the job for @mipaltan as they seal a 4️⃣-wicket win over #RCB in their final game of the league stage 👏👏
— Women's Premier League (WPL) (@wplt20) March 21, 2023
Scorecard ▶️ https://t.co/BQoiFCRPhD#TATAWPL | #RCBvMI pic.twitter.com/ZpYP4JyTjUAmelia Kerr finishes the job for @mipaltan as they seal a 4️⃣-wicket win over #RCB in their final game of the league stage 👏👏
— Women's Premier League (WPL) (@wplt20) March 21, 2023
Scorecard ▶️ https://t.co/BQoiFCRPhD#TATAWPL | #RCBvMI pic.twitter.com/ZpYP4JyTjU
ನಂತರ ಬಂದ ಅಮೆಲಿಯಾ ಕೆರ್ ಮತ್ತು ಪೂಜಾ ವಸ್ತ್ರಾಕರ್ ತಂಡವನ್ನು ಗೆಲುವಿನ ಕಡೆಗೆ ಕೊಂಡೊಯ್ದರು. 16ನೇ ಓವರ್ನಲ್ಲಿ ಕನ್ನಿಕಾ ಅಹುಜಾ ಮುಂಬೈನ ಎರಡು ವಿಕೆಟ್ ಪಡೆದು ಶಾಕ್ ನೀಡಿದರಾದರೂ, ಅಮೆಲಿಯಾ ಕೆರ್ ಬೌಂಡರಿಯ ಮೂಲಕ ವಿಜಯದ ರನ್ ದಾಖಲಿಸಿದರು.
ಮೊದಲ ಇನ್ನಿಂಗ್ಸ್: ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಆರ್ಸಿಬಿ ಆರಂಭಿಕ ಆಘಾತ ಎದುರಿಸಿತು. ಕಳೆದ ಪಂದ್ಯದಲ್ಲಿ 99 ರನ್ ಗಳಿಸಿದ್ದ ಸೋಫಿ ಡಿವೈನ್ ಇಂದು ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ನಾಯಕಿ ಮಂಧಾನ (24), ಎಲ್ಲಿಸ್ ಪೆರ್ರಿ (29) ಮತ್ತು ರಿಚಾ ಘೋಷ್ (29) ಕೊಂಚ ತಂಡಕ್ಕೆ ರನ್ ಗಳಿಸಿದರು. ಹೀದರ್ ನೈಟ್ ಮತ್ತು ಕನಿಕಾ ಅಹುಜಾ 12 ರನ್ ಮಾಡು ಔಟ್ ಆದರು. ಮಿಕ್ಕವರು ಒಂದಂಕಿಗೆ ಸುಸ್ತಾಗಿದ್ದರಿಂದ ಆರ್ಸಿಬಿ 125 ರನ್ ಅಷ್ಟೇ ಗಳಿಸಿತು.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಡಿದ ತಂಡ: ಸ್ಮೃತಿ ಮಂಧಾನ (ನಾಯಕಿ), ಸೋಫಿ ಡಿವೈನ್, ಎಲ್ಲಿಸ್ ಪೆರ್ರಿ, ಹೀದರ್ ನೈಟ್, ರಿಚಾ ಘೋಷ್ (ವಿಕೆಟ್ ಕೀಪರ್), ಕನಿಕಾ ಅಹುಜಾ, ಶ್ರೇಯಾಂಕ ಪಾಟೀಲ್, ದಿಶಾ ಕಸತ್, ಮೇಗನ್ ಶುಟ್, ಆಶಾ ಶೋಬನಾ, ಪ್ರೀತಿ ಬೋಸ್
ಮುಂಬೈ ಇಂಡಿಯನ್ಸ್ ಆಡಿದ ತಂಡ: ಹೇಲಿ ಮ್ಯಾಥ್ಯೂಸ್, ಯಾಸ್ತಿಕಾ ಭಾಟಿಯಾ (ವಿಕೆಟ್ ಕೀಪರ್), ನ್ಯಾಟ್ ಸಿವರ್-ಬ್ರಂಟ್, ಹರ್ಮನ್‌ಪ್ರೀತ್ ಕೌರ್ (ನಾಯಕಿ), ಅಮೆಲಿಯಾ ಕೆರ್, ಇಸ್ಸಿ ವಾಂಗ್, ಅಮನ್‌ಜೋತ್ ಕೌರ್, ಹುಮೈರಾ ಕಾಜಿ, ಧಾರಾ ಗುಜ್ಜರ್, ಜಿಂಟಿಮಣಿ ಕಲಿತಾ, ಸೈಕಾ ಇಶಾಕ್
ಇದನ್ನೂ ಓದಿ: ಟಾಸ್ ಗೆದ್ದ ಕೌರ್ ಕ್ಷೇತ್ರ ರಕ್ಷಣೆ ಆಯ್ಕೆ: ನೇರ ಫೈನಲ್ ಪ್ರವೇಶವೇ ಗುರಿ ಎಂದ ಹರ್ಮನ್‌ಪ್ರೀತ್