ನವದೆಹಲಿ: ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಕ್ವಿಂಟನ್ ಡಿಕಾಕ್(70) ಅವರ ಅಜೇಯ ಅರ್ಧಶತಕದ ನೆರವಿನಿಂದ ಮುಂಬೈ ಇಂಡಿಯನ್ಸ್ 7 ವಿಕೆಟ್ಗಳ ಅಂತರದಿಂದ ರಾಜಸ್ಥಾನ್ ರಾಯಲ್ಸ್ ತಂಡವನ್ನು ಮಣಿಸುವ ಮೂಲಕ ಗೆಲುವಿನ ಹಳಿಗೆ ಮರಳಿದೆ.
ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ನೀಡಿದ್ದ 172 ರನ್ಗಳ ಗುರಿಯನ್ನು ಮುಂಬೈ ತಂಡ ಕೇವಲ 3 ವಿಕೆಟ್ ಕಳೆದುಕೊಂಡು ತಲುಪಿತು. ಡಿಕಾಕ್ ಅಜೇಯ 70 , ಪೊಲಾರ್ಡ್ ಅಜೇಯ 16 ಕೃನಾಲ್ ಪಾಂಡ್ಯ 39, ರೋಹಿತ್ 14, ಸೂರ್ಯಕುಮಾರ್ ಯಾದವ್ 16 ರನ್ಗಳಿಸಿದರು.
ಕಳೆದ ನಾಲ್ಕು ಪಂದ್ಯಗಳಿಂದ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದ ಕ್ವಿಂಟನ್ ಡಿಕಾಕ್ ಇಂದು ಜವಾಬ್ದಾರಿಯುವ ಬ್ಯಾಟಿಂಗ್ ಪ್ರದರ್ಶನ ತೋರಿದರು. ಆರಂಭದಲ್ಲೇ ಜೊತೆಗಾರ ರೋಹಿತ್ (14) ವಿಕೆಟ್ ಕಳೆದುಕೊಂಡರು, ತಂಡವನ್ನು ಗೆಲ್ಲಿಸುವ ಜವಾಬ್ದಾರಿಯನ್ನು ಹೊತ್ತು ಯಶಸ್ವಿಯಾಗಿ ನಿರ್ವಹಿಸಿದರು.
-
All Over: @mipaltan begin their Delhi leg on a positive note with a comfortable 7-wicket win over #RR. @QuinnyDeKock69 scores an unbeaten 70 off 50 balls. https://t.co/jRroRFWVBm #MIvRR #VIVOIPL pic.twitter.com/cJmFH609FU
— IndianPremierLeague (@IPL) April 29, 2021 " class="align-text-top noRightClick twitterSection" data="
">All Over: @mipaltan begin their Delhi leg on a positive note with a comfortable 7-wicket win over #RR. @QuinnyDeKock69 scores an unbeaten 70 off 50 balls. https://t.co/jRroRFWVBm #MIvRR #VIVOIPL pic.twitter.com/cJmFH609FU
— IndianPremierLeague (@IPL) April 29, 2021All Over: @mipaltan begin their Delhi leg on a positive note with a comfortable 7-wicket win over #RR. @QuinnyDeKock69 scores an unbeaten 70 off 50 balls. https://t.co/jRroRFWVBm #MIvRR #VIVOIPL pic.twitter.com/cJmFH609FU
— IndianPremierLeague (@IPL) April 29, 2021
2ನೇ ವಿಕೆಟ್ಗೆ ಯಾದವ್(16) ಜೊತೆಗೆ 34 ರನ್ ಜೊತೆಯಾಟ, 3ನೇ ವಿಕೆಟ್ಗೆ ಕೃನಾಲ್(39) ಜೊತೆಗೆ 63ರನ್ಗಳ ಜೊತೆಯಾಟ ಮತ್ತು 4ನೇ ವಿಕೆಟ್ಗೆ ಪೊಲಾರ್ಡ್(16) ಜೊತೆ ಮುರಿಯದ 26 ರನ್ಗಳ ಜೊತೆಯಾಟ ನಡೆಸಿ ತಂಡವನ್ನು ಗೆಲುವಿನ ಗಡಿ ದಾಟಿಸಿರು.
ಅವರು 50 ಎಸೆತಗಳಲ್ಲಿ 6 ಬೌಂಡರಿ ಮತ್ತು 2 ಸಿಕ್ಸರ್ಗಳ ಸಹಿತ ಅಜೇಯ 70 ರನ್ಗಳಿಸಿದರೆ, ಕೃನಾಲ್ 26 ಎಸೆತಗಳಲ್ಲಿ ತಲಾ 2 ಬೌಂಡರಿ ಮತ್ತು ಸಿಕ್ಸರ್ಗಳ ಸಹಿತ 39 ರನ್ಗಳಿಸಿ ಔಟಾದರು. ಪೊಲಾರ್ಡ್ ಕೇವಲ 8 ಎಸೆತಗಳಲ್ಲಿ 2 ಬೌಂಡರಿ 1 ಸಿಕ್ಸರ್ ಸಹಿತ ಅಜೇಯ 16 ರನ್ಗಳಿಸಿದರು.
ಇದಕ್ಕು ಮುನ್ನ ಟಾಸ್ ಬ್ಯಾಟಿಂಗ್ ನಡೆಸಿದ ರಾಜಸ್ಥಾನ್ 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 171 ರನ್ಗಳಿಸಿತ್ತು. ಜೋಸ್ ಬಟ್ಲರ್ 41, ಜೈಸ್ವಾಲ್ 32, ಸಂಜು ಸಾಮ್ಸನ್ 42, ಶಿವಂ ದುಬೆ 35 ರನ್ಗಳಿಸಿದ್ದರು. ಮಿಲ್ಲರ್ ಇದ್ದರೂ ದುಬೆಯನ್ನು ಬ್ಯಾಟಿಂಗ್ ಇಳಿಸಿದ್ದು ರಾಯಲ್ಸ್ಗೆ ದೊಡ್ಡ ಹೊಡೆತ ನೀಡಿತು. ದುಬೇ 31 ಎಸೆತಗಳಲ್ಲಿ 35 ರನ್ಗಳಿಸಿದರು.
ಅದ್ಭುತ ಬೌಲಿಂಗ್ ಮಾಡಿದ ಬುಮ್ರಾ 4 ಓವರ್ಗಳಲ್ಲಿ ಕೇವಲ13 ರನ್ ನೀಡಿ 1 ವಿಕೆಟ್ ಪಡೆದರು. ರಾಹುಲ್ ಚಹಾರ್ 33ಕ್ಕೆ2, ಬೌಲ್ಟ್ 37ಕ್ಕೆ 1 ವಿಕೆಟ್ ಪಡೆದರು.