ETV Bharat / sports

ಧೋನಿ 100 ಕೋಟಿ ರೂ. ಮಾನನಷ್ಟ ದಾವೆ ಕೇಸ್​​.. ವಿಚಾರಣೆ ಮುಂದೂಡಿದ ಮದ್ರಾಸ್​​ ಹೈಕೋರ್ಟ್​ - ಮಹೇಂದ್ರ ಸಿಂಗ್ ಧೋನಿ ಕೇಸ್​

ಮ್ಯಾಚ್​ ಫಿಕ್ಸಿಂಗ್​ನಲ್ಲಿ ಮಹೇಂದ್ರ ಸಿಂಗ್​ ಧೋನಿ ಭಾಗಿಯಾಗಿದ್ದಾರೆ ಎಂದು ಸುದ್ದಿ ಪ್ರಕಟ ಮಾಡಿದ್ದ ಖಾಸಗಿ ವಾಹಿನಿ ವಿರುದ್ಧ ಅವರು 100 ಕೋಟಿ ರೂ. ದಾವೆ ಹೂಡಿದ್ದಾರೆ.

MS Dhoni
MS Dhoni
author img

By

Published : Aug 25, 2021, 3:15 PM IST

ಚೆನ್ನೈ: ರಾಜಸ್ಥಾನ ರಾಯಲ್ಸ್​ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್​ ಮ್ಯಾಚ್​ ಫಿಕ್ಸಿಂಗ್​ನಲ್ಲಿ ಭಾಗಿಯಾಗಿದ್ದು, ಈ ವೇಳೆ ಧೋನಿ ಕೂಡ ಅದರಲ್ಲಿ ಇದ್ದರು ಎಂದು ಸುದ್ದಿ ಪ್ರಸಾರ ಮಾಡಿದ್ದ ಖಾಸಗಿ ವಾಹಿನಿ ವಿರುದ್ಧ ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್​ ಧೋನಿ ಮಾನನಷ್ಟ ಮೊಕದ್ದಮೆ ದಾಖಲು ಮಾಡಿದ್ದರು. ಇದೀಗ ಮದ್ರಾಸ್ ಹೈಕೋರ್ಟ್​ ಆ ಪ್ರಕರಣದ ವಿಚಾರಣೆ ಆಲಿಸಿದ ನಂತರ ಎರಡು ವಾರಗಳ ಕಾಲ ಮುಂದೂಡಿಕೆ ಮಾಡಿದೆ.

Madras High Court
ವಿಚಾರಣೆ ಮುಂದೂಡಿದ ಮದ್ರಾಸ್​ ಹೈಕೋರ್ಟ್​

ಐಪಿಎಸ್​​ ಅಧಿಕಾರಿ ಸಂಪತ್​ ಕುಮಾರ್​ ಈ ಪ್ರಕರಣದ ವಿಚಾರಣೆ ನಡೆಸುತ್ತಿದ್ದು, ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಕೂಡ ಇದರಲ್ಲಿ ಭಾಗಿಯಾಗಿದ್ದರು ಎಂದು ಖಾಸಗಿ ಸುದ್ದಿವಾಹಿನಿ ವರದಿ ಪ್ರಸಾರ ಮಾಡಿತ್ತು. ಹೀಗಾಗಿ ಧೋನಿ ಅದರ ವಿರುದ್ಧ 100 ಕೋಟಿ ರೂ. ಮಾನನಷ್ಟ ಮೊಕದ್ದಮೆ ದಾಖಲು ಮಾಡಿದ್ದರು. ಮದ್ರಾಸ್ ಹೈಕೋರ್ಟ್ ನ್ಯಾಯಮೂರ್ತಿ ಎನ್​​. ಶೇಷೈ ಪ್ರಕರಣದ ವಾದ - ವಿವಾದ ಆಲಿಸಿದ ನಂತರ ಎರಡು ವಾರಗಳ ಕಾಲ ಕೇಸ್ ಮುಂದೂಡಿಕೆ ಮಾಡಿದ್ದಾರೆ.

2013ರಲ್ಲಿ ನಡೆದಿದ್ದ ಇಂಡಿಯನ್​ ಪ್ರೀಮಿಯರ್ ಲೀಗ್​ನಲ್ಲಿ ಫಿಕ್ಸಿಂಗ್​ನಲ್ಲಿ ಭಾಗಿಯಾಗಿದ್ದ ಕಾರಣಕ್ಕಾಗಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ಥಾನ ರಾಯಲ್ಸ್​ ಎರಡು ವರ್ಷಗಳ ಕಾಲ ಬ್ಯಾನ್​ ಆಗಿದ್ದವು. ಇದೇ ವೇಳೆ, ಸ್ಪಾಟ್​ ಫಿಕ್ಸಿಂಗ್​ನಲ್ಲಿ ಭಾಗಿಯಾಗಿದ್ದ ಆರೋಪ ಹೊತ್ತಿದ್ದ ಟೀಂ ಇಂಡಿಯಾ ವೇಗದ ಬೌಲರ್​ ಮೇಲೆ ನಿಷೇಧ ಸಹ ಹೇರಲಾಗಿತ್ತು. ಆದರೆ, ಇದೀಗ ಅವರು ಆರೋಪ ಮುಕ್ತರಾಗಿದ್ದಾರೆ.

ಇದನ್ನೂ ಓದಿರಿ: ಮೈಸೂರು: ಸ್ನೇಹಿತನ ಜೊತೆ ಚಾಮುಂಡಿ ಬೆಟ್ಟಕ್ಕೆ ತೆರಳಿದ್ದ ವಿದ್ಯಾರ್ಥಿನಿ ಮೇಲೆ ಗ್ಯಾಂಗ್​​​ರೇಪ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.