ವಿಜಯವಾಡ(ಆಂಧ್ರಪ್ರದೇಶ): ಭಾರತ ಕ್ರಿಕೆಟ್ ತಂಡದ ಯಶಸ್ವಿ ನಾಯಕ ಮಹೇಂದ್ರ ಸಿಂಗ್ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ದೂರವಾದರೂ ಅವರ ಜನಪ್ರಿಯತೆ ಕಡಿಮೆಯಾಗಿಲ್ಲ. ಧೋನಿ ಇಂದಿಗೂ ಅಭಿಮಾನದ ವ್ಯಕ್ತಿಯೇ ಸರಿ. ಇಂದು ಅವರ ಜನ್ಮದಿನವಾಗಿದ್ದು, 41ನೇ ವರ್ಷಕ್ಕೆ ಕಾಲಿಟ್ಟ ಕ್ರಿಕೆಟಿಗನಿಗೆ ಆಂಧ್ರಪ್ರದೇಶದ ಅಭಿಮಾನಿಗಳು ವಿಶೇಷ ರೀತಿಯಲ್ಲಿ ಶುಭ ಕೋರಿದ್ದಾರೆ.
ವಿಜಯವಾಡ ಜಿಲ್ಲೆಯ ಅಭಿಮಾನಿಗಳು ಧೋನಿಯ 41ನೇ ಜನ್ಮದಿನದ ಗೌರವಾರ್ಥವಾಗಿ 41 ಅಡಿ ಎತ್ತರದ ಕಟೌಟ್ ನಿರ್ಮಿಸಿದ್ದಾರೆ. ಇದು 2011ರ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಐತಿಹಾಸಿಕ ಸಿಕ್ಸರ್ ಬಾರಿಸುವ ಮೂಲಕ ವಿಶ್ವಕಪ್ ಗೆಲ್ಲಿಸಿಕೊಟ್ಟ ಚಿತ್ರ. ಮಾಜಿ ನಾಯಕನ ಈ 41 ಅಡಿ ಕಟೌಟ್ ಎಲ್ಲರ ಗಮನ ಸೆಳೆಯುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಹಿಂದೆಯೂ ಕೂಡ ಧೋನಿಯ ಬೃಹತ್ ಕಟೌಟ್ಗಳನ್ನು ನಿರ್ಮಾಣ ಮಾಡಿ ಅಭಿಮಾನ ಮೆರೆಯಲಾಗಿತ್ತು. ಕೇರಳದಲ್ಲಿ 2018 ರಲ್ಲಿ 35 ಅಡಿ ಎತ್ತರದ ಕಟೌಟ್ ನಿರ್ಮಿಸಿದ್ದರೆ, ಚೆನ್ನೈನಲ್ಲಿ 30 ಅಡಿ ಎತ್ತರದ ಕಟೌಟ್ ರೂಪಿಸಿದ್ದರು. ಎಂ.ಎಸ್.ಧೋನಿ ಪ್ರಸ್ತುತ ಲಂಡನ್‌ನಲ್ಲಿದ್ದು, ಕುಟುಂಬದೊಂದಿಗೆ ಜನ್ಮದಿನ ಆಚರಿಸಲಿದ್ದಾರೆ.
ಇದನ್ನೂ ಓದಿ: ಆಂಗ್ಲರ ವಿರುದ್ಧ T-20 ಸೆಣಸಾಟಕ್ಕೆ ಕ್ಷಣಗಣನೆ: ವಿಶ್ವಕಪ್ಗೋಸ್ಕರ ಟೀಂ ಇಂಡಿಯಾ ಬೆಸ್ಟ್ ಪ್ಲೇಯರ್ಸ್ ಹುಡುಕಾಟ ಶುರು!